ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ “ಅತ್ಯಂತ ಕಠಿಣ ನಿರ್ಬಂಧ” ವಿಧಿಸುವುದಾಗಿ ಎಚ್ಚರಿಸಿದ್ದು, ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಕಾರ್ಯತಂತ್ರದ ಮಹತ್ವ ಈಗ ಹಿಂದಿನಷ್ಟಿಲ್ಲ ಎಂದು ಹೇಳಿದ್ದಾರೆ. ಇರಾನ್ ವಿರುದ್ಧ ಅಮೆರಿಕದ ಬಳಿ ಹಲವು ಆಯ್ಕೆಗಳಿವೆ. ಮುಂದಿನ ಕ್ರಮವನ್ನು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸುವುದಾಗಿ ಟ್ರಂಪ್ ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿ ಮುಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯ ಹಡಗುಗಳು ಸಂಚರಿಸುತ್ತಿವೆ ಎಂದಿದ್ದಾರೆ. ಇರಾನ್ ವಿರುದ್ಧದ ಅಮೆರಿಕದ ನೌಕಾ ದಿಗ್ಬಂಧನ “ಅತ್ಯಂತ ಪರಿಣಾಮಕಾರಿ” ಎಂದು ಬಣ್ಣಿಸಿದ ಟ್ರಂಪ್, ಯಾವುದೇ ಹಡಗುಗಳು ಇರಾನ್‌ಗೆ ಪ್ರವೇಶಿಸಿಲ್ಲ ಎಂದು ಹೇಳಿದ್ದಾರೆ. ಅಮೆರಿಕದ ತೈಲ ಉತ್ಪಾದನೆ ಹೆಚ್ಚಳ ಹಾಗೂ ಪರ್ಯಾಯ ಪೂರೈಕೆ ಮಾರ್ಗಗಳಿಂದ ಹಾರ್ಮುಜ್ ಮೇಲಿನ ಅವಲಂಬನೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. ಇರಾನ್ ಜೊತೆ ಒಪ್ಪಂದವಾದರೆ ತೈಲ ಬೆಲೆಗಳು ತೀವ್ರವಾಗಿ ಕುಸಿಯಬಹುದು. ಇಲ್ಲದಿದ್ದರೆ ಪ್ರಸ್ತುತ ಕಾರ್ಯತಂತ್ರ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ,…
Author: admin
ತುಮಕೂರಿನಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಅಸಾಧ್ಯ; ಎಂ.ಬಿ. ಪಾಟೀಲ್
ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ತುಮಕೂರು ಜಿಲ್ಲೆಯಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಿಸುವ ಯಾವುದೇ ಪ್ರಸ್ತಾವನೆ ಸದ್ಯ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯಲ್ಲಿ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನೀತಿಯ ಪ್ರಕಾರ, ಈಗಿರುವ ಸಿವಿಲ್ ವಿಮಾನ ನಿಲ್ದಾಣದಿಂದ 150 ಕಿ.ಮೀ. ವಾಯು ದೂರದೊಳಗೆ ಸಾಮಾನ್ಯವಾಗಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದರು. ಈ ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆ ಬಂದರೆ, ಹಾಲಿ ವಿಮಾನ ನಿಲ್ದಾಣದ ಮೇಲೆ ಉಂಟಾಗುವ ಪರಿಣಾಮವನ್ನು ಪರಿಶೀಲಿಸಿ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು. ಮುಂಬರುವ ಬಜೆಟ್‌ನಲ್ಲಿ ತುಮಕೂರು ವಿಮಾನ…
ನಕಲಿ ಔಷಧಿ ಜಾಲ ಪತ್ತೆ ಬೆನ್ನಲ್ಲೇ ಅಲರ್ಟ್; ರಾಜ್ಯಾದ್ಯಂತ ಔಷಧಿಗಳ ಪರಿಶೀಲನೆಗೆ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ₹6 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ಔಷಧಿ ಜಾಲ ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ಎಲ್ಲ ರೀತಿಯ ಔಷಧಿಗಳ ಗುಣಮಟ್ಟ ಮತ್ತು ಮೂಲದ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುವಂತೆ ಸೂಚಿಸಿದೆ. ರಾಮನಗರದ ಬಳಿ ಪತ್ತೆಯಾದ ನಕಲಿ ಔಷಧಿ ಜಾಲದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ವಿಭಾಗ ಸುತ್ತೋಲೆ ಹೊರಡಿಸಿದ್ದು, ನಕಲಿ ಔಷಧಿಗಳು ಪತ್ತೆಯಾದರೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ. ನಕಲಿ ಔಷಧಿ ಜಾಲವು ಸುಮಾರು ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದ್ದು, ಔಷಧಿಗಳನ್ನು ಎಲ್ಲೆಲ್ಲಿ ವಿತರಿಸಲಾಗಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳನ್ನೂ ನಕಲಿ ಮಾಡಲಾಗುತ್ತಿತ್ತು ಎಂಬ ಮಾಹಿತಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮೆಡಿಕಲ್ ಸ್ಟೋರ್‌ಗಳು ಹಾಗೂ ಔಷಧ ವಿತರಣಾ ಜಾಲದ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಔಷಧ ನಿಯಂತ್ರಕರಿಗೆ…
ನಕಲಿ ಮದ್ಯ ಸೇವನೆ: ಗುಜರಾತ್‌ನಲ್ಲಿ 4 ಸಾವು; 18 ಮಂದಿ ಆಸ್ಪತ್ರೆಗೆ
ಭಾವನಗರ: ಮಧ್ಯಪ್ರದೇಶದಿಂದ ಅಕ್ರಮವಾಗಿ ಸಾಗಿಸಿ ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿ ಮಾರಾಟ ಮಾಡಲಾಗಿದ್ದ ನಕಲಿ ಮದ್ಯ ಸೇವಿಸಿ ನಾಲ್ವರು ಮೃತಪಟ್ಟಿದ್ದು, 18 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನಪ್ರಿಯ IMFL ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ನಕಲಿ ಮದ್ಯವನ್ನು ಘೋಘಾ ತಾಲ್ಲೂಕಿನ ಖಾರ್ಕಾಡಿ ಗ್ರಾಮದಲ್ಲಿ ನಡೆದ ಪಾರ್ಟಿಯಲ್ಲಿ ಸೇವಿಸಲಾಗಿತ್ತು. ಮಂಗಳವಾರ ಸಂಜೆ ಮೊದಲ ಸಾವು ವರದಿಯಾಗಿದ್ದು, ಬಳಿಕ ಮತ್ತೂ ಮೂವರು ಮೃತಪಟ್ಟಿದ್ದಾರೆ. ನಾಲ್ವರೂ ಭಾವನಗರ ಜಿಲ್ಲೆಯವರಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ನಾಲ್ವರು ಶಂಕಿತ ಮದ್ಯ ಮಾರಾಟಗಾರರನ್ನು ಬಂಧಿಸಿದ್ದು, ಅಕ್ರಮ ಪೂರೈಕೆ ಜಾಲದ ತನಿಖೆಗೆ 16 ತಂಡಗಳನ್ನು ರಚಿಸಿದ್ದಾರೆ. ಎಫ್‌ಎಸ್‌ಎಲ್ ಅಧಿಕಾರಿಗಳು ಮದ್ಯದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ವಿಷಕಾರಿ ಮದ್ಯ ಸೇವನೆಯಿಂದ ಅಸ್ವಸ್ಥರಾದ 18 ಮಂದಿಯನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರು ಐಸಿಯುನಲ್ಲಿದ್ದು, ಇಬ್ಬರು ವೆಂಟಿಲೇಟರ್‌ನಲ್ಲಿದ್ದಾರೆ. ಚಿಕಿತ್ಸೆ ಮೇಲ್ವಿಚಾರಣೆಗೆ…
ಫೆಬ್ರವರಿ 2027ರಲ್ಲಿ ನವದೆಹಲಿಯಲ್ಲಿ 5ನೇ ಕೋಸ್ಟ್ ಗಾರ್ಡ್ ಜಾಗತಿಕ ಶೃಂಗಸಭೆ
ನವದೆಹಲಿ: ಭಾರತವು 2027ರ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ 5ನೇ ಕೋಸ್ಟ್ ಗಾರ್ಡ್ ಜಾಗತಿಕ ಶೃಂಗಸಭೆ (CGGS) ಆಯೋಜಿಸಲಿದೆ. ಭಾರತೀಯ ಕೋಸ್ಟ್ ಗಾರ್ಡ್‌ನ ಸ್ವರ್ಣಿಮ ಜಯಂತಿ ಆಚರಣೆಯೊಂದಿಗೆ ಶೃಂಗಸಭೆ ನಡೆಯಲಿದೆ. ಶೃಂಗಸಭೆಯ ಸಿದ್ಧತೆಗಳ ಭಾಗವಾಗಿ ಭಾರತೀಯ ಕೋಸ್ಟ್ ಗಾರ್ಡ್ ಬುಧವಾರ ಹೈಬ್ರಿಡ್ ಮಾದರಿಯಲ್ಲಿ ಕಾರ್ಯಮಟ್ಟದ ಸಭೆ ನಡೆಸಿತು. ಸಭೆಯಲ್ಲಿ CGGS ಮಾರ್ಗಸೂಚಿಗಳ ಪರಿಷ್ಕರಣೆ, ಮಾಹಿತಿ ಹಂಚಿಕೆ ವ್ಯವಸ್ಥೆ ಬಲಪಡಿಸುವುದು ಹಾಗೂ ಶೃಂಗಸಭೆಯ ವೆಬ್‌ಸೈಟ್ ಅಭಿವೃದ್ಧಿ ಸೇರಿದಂತೆ ಪ್ರಮುಖ ಸಾಂಸ್ಥಿಕ ವಿಷಯಗಳ ಕುರಿತು ಚರ್ಚಿಸಲಾಯಿತು. ಜಾಗತಿಕ ಕಡಲ ಸಂಸ್ಥೆಗಳ ನಡುವೆ ವೃತ್ತಿಪರ ಪರಿಣತಿ, ಕಾರ್ಯಾಚರಣೆಯ ಅನುಭವ ಮತ್ತು ಉತ್ತಮ ಪದ್ಧತಿಗಳ ವಿನಿಮಯ ಹೆಚ್ಚಿಸುವ ಮೂಲಕ ಸಾಮೂಹಿಕ ಸಾಮರ್ಥ್ಯ ಬಲಪಡಿಸುವ ಕುರಿತು ಪ್ರತಿನಿಧಿಗಳು ಚರ್ಚಿಸಿದರು. ನಿರಂತರ ಸಹಕಾರ ಮತ್ತು ಕಡಲ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭವಿಷ್ಯದ ಸಹಯೋಗ ಚಟುವಟಿಕೆಗಳ ವೇಳಾಪಟ್ಟಿಯನ್ನೂ ಸಭೆ ಪರಿಶೀಲಿಸಿತು. 5ನೇ CGGS ಜಾಗತಿಕ ಕಡಲ ಕ್ಷೇತ್ರದ ಸುರಕ್ಷತೆ…
ಜಾಗತಿಕ ಭಾರತೀಯ ಯುವಕರನ್ನು ರಾಷ್ಟ್ರ ನಿರ್ಮಾಣದೊಂದಿಗೆ ಸಂಪರ್ಕಿಸಲು ‘ಫ್ರೆಂಡ್ಸ್ ಆಫ್ ಮೈ ಭಾರತ್’
ಗಾಂಧಿನಗರ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ಯುವಕರೊಂದಿಗೆ ಸಂಪರ್ಕ ಬಲಪಡಿಸುವ ಉದ್ದೇಶದಿಂದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ‘ಫ್ರೆಂಡ್ಸ್ ಆಫ್ ಮೈ ಭಾರತ್’ ಡಿಜಿಟಲ್ ಮಾಡ್ಯೂಲ್ ಆರಂಭಿಸಿದೆ. ಗಾಂಧಿನಗರದಲ್ಲಿ ನಡೆದ ಬ್ರಿಕ್ಸ್ ಯುವ ಶೃಂಗಸಭೆ 2026ರಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವೆ ರಕ್ಷಾ ಖಡ್ಸೆ ಈ ಉಪಕ್ರಮವನ್ನು ಘೋಷಿಸಿದರು. ವಿದೇಶಗಳಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು, ಯುವ ವೃತ್ತಿಪರರು ಹಾಗೂ ಇತರ ಯುವಕರಿಗೆ ಸ್ವಯಂಸೇವಕ ಅವಕಾಶಗಳು, ರಾಷ್ಟ್ರ ನಿರ್ಮಾಣ ಚಟುವಟಿಕೆಗಳು ಮತ್ತು MY ಭಾರತ್‌ನ ಯುವ ಕಾರ್ಯಕ್ರಮಗಳ ಮಾಹಿತಿ ಈ ವೇದಿಕೆಯಲ್ಲಿ ಲಭ್ಯವಾಗಲಿದೆ. ಜಾಗತಿಕ ಭಾರತೀಯ ಯುವಕರು ‘ಫ್ರೆಂಡ್ ಆಫ್ ಮೈ ಭಾರತ್’ ಆಗಿ ನೋಂದಾಯಿಸಿಕೊಂಡು ತಮ್ಮ ಯುವ ಕ್ಲಬ್‌ಗಳು ಅಥವಾ ಸಂಘಟನೆಗಳ ವಿವರಗಳನ್ನು ಹಂಚಿಕೊಳ್ಳಬಹುದು. ಶಿಕ್ಷಣ, ಪರಿಸರ, ಆರೋಗ್ಯ ಜಾಗೃತಿ, ವಿಪತ್ತು ಪರಿಹಾರ ಮತ್ತು ಸಾಂಸ್ಕೃತಿಕ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ…
ಮಧ್ಯ ಆಫ್ರಿಕಾದಲ್ಲಿ ಭೀಕರ ಗಣಿ ಕುಸಿತ; 100 ಮಂದಿ ದುರ್ಮರಣ
ಬೌವಾರ್: ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಚಿನ್ನದ ಗಣಿಯೊಂದು ಕುಸಿದು ಕನಿಷ್ಠ 100 ಮಂದಿ ಮೃತಪಟ್ಟಿರುವ ಭೀಕರ ಘಟನೆ ನಡೆದಿದೆ. ನೂರಾರು ಕುಶಲಕರ್ಮಿ ಗಣಿಗಾರರು ಕೆಲಸ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕ್ಯಾಮರೂನ್ ಗಡಿಯಲ್ಲಿರುವ ಬಾಬುವಾ ಪಟ್ಟಣದಿಂದ ಸುಮಾರು 50 ಕಿ.ಮೀ. ದೂರದ ಝಂಬೋಯೆ ಗಣಿಗಾರಿಕೆ ಪ್ರದೇಶದಲ್ಲಿ ಘಟನೆ ನಡೆದಿದೆ. ಗಣಿ ಕುಸಿದ ಬಳಿಕ ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದು, ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳೀಯ ಗಣಿಗಾರ ಸೆಡ್ರಿಕ್ ಎಂಬಾಂಗೊ ಅವರ ಪ್ರಕಾರ, ಗಣಿಗಾರಿಕೆ ಪ್ರದೇಶದ ಒಂದು ಭಾಗ ಸಂಪೂರ್ಣವಾಗಿ ಕುಸಿದಿದ್ದು, ಹಲವರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಬದುಕುಳಿದ ಗಾಯಾಳುಗಳನ್ನು ಬಾಬುವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಖರವಾಗಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಪಿಂಚಣಿ: ಆದಾಯ ಮಿತಿ ₹1.20 ಲಕ್ಷಕ್ಕೆ ಹೆಚ್ಚಳ
ಬೆಂಗಳೂರು: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿರುವ ಸರ್ಕಾರ, ವಾರ್ಷಿಕ ಆದಾಯ ಮಿತಿಯನ್ನು ₹32,000ದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿದೆ. ಈ ಪರಿಷ್ಕೃತ ಮಿತಿಯೊಳಗೆ ಬರುವ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸುವಂತೆ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಈವರೆಗೆ ₹32,000 ವಾರ್ಷಿಕ ಆದಾಯ ಮಿತಿ ನಿಗದಿಯಾಗಿತ್ತು. ಇದರಿಂದ ಹಲವು ವರ್ಷಗಳಿಂದ ಲಕ್ಷಾಂತರ ಮಂದಿ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದರು. ಇದೀಗ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. 18.06 ಲಕ್ಷ ಪಿಂಚಣಿಗಳು ತಾತ್ಕಾಲಿಕ ಸ್ಥಗಿತ ಕುಟುಂಬ ದತ್ತಾಂಶ ಹಾಗೂ ಪಿಂಚಣಿ ಫಲಾನುಭವಿಗಳ ಮಾಹಿತಿಯನ್ನು ಸಂಯೋಜಿಸಿದಾಗ 23,14,544 ಫಲಾನುಭವಿಗಳು ಸಂದೇಹಾಸ್ಪದ ಎಂದು ಗುರುತಿಸಲಾಗಿತ್ತು. ಇವರ ಭೌತಿಕ…
ಮತ್ತೆ ಫುಟ್‌ಪಾತ್ ಆಕ್ರಮಿಸಿದರೆ ದುಪ್ಪಟ್ಟು ದಂಡ, ಸಾಮಗ್ರಿ ಜಪ್ತಿ
ಬೆಂಗಳೂರು: ರಾಜಧಾನಿಯಲ್ಲಿ ತೆರವುಗೊಳಿಸಿರುವ ಫುಟ್‌ಪಾತ್‌ಗಳನ್ನು ಮತ್ತೆ ಆಕ್ರಮಿಸಿಕೊಂಡು ವ್ಯಾಪಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ‘ಸೇಫ್ ಫುಟ್‌ಪಾತ್’ ಅಭಿಯಾನದಡಿ ಶಿವಾಜಿನಗರ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಲಾಗಿತ್ತು. ಆದರೆ, ಕೆಲವೆಡೆ ವ್ಯಾಪಾರಿಗಳು ಮತ್ತೆ ಫುಟ್‌ಪಾತ್ ಆಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಬುಧವಾರ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಸಚಿವರು, ಮತ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುವವರ ಸಾಮಗ್ರಿಗಳನ್ನು ಜಪ್ತಿ ಮಾಡಿ, ದುಪ್ಪಟ್ಟು ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಸುಮಾರು 1,500 ಕಿ.ಮೀ. ಉದ್ದದ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ 964 ಕಿ.ಮೀ. ಪಾದಚಾರಿ ಮಾರ್ಗಗಳ ಒತ್ತುವರಿ…
‘ವಂದೇ ಮಾತರಂ’ ವಿಚಾರ: ಕಾಂಗ್ರೆಸ್ ಪಕ್ಷವನ್ನು ‘ಹೊಸ ಮುಸ್ಲಿಂ ಲೀಗ್’ ಎಂದ ನಿತಿನ್ ನಬಿನ್
ನವದೆಹಲಿ: ಪಕ್ಷದ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ನುಡಿಸುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ನಿರ್ಧಾರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ತೀವ್ರವಾಗಿ ಟೀಕಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಗೀತೆಗೆ “ಅವಮಾನ” ಮಾಡುವುದನ್ನೇ ತನ್ನ ಅಧಿಕೃತ ನಿಲುವಾಗಿಸಿಕೊಂಡಿದೆ ಎಂದು ಆರೋಪಿಸಿರುವ ಅವರು, ಪಕ್ಷವನ್ನು “ಹೊಸ ಮುಸ್ಲಿಂ ಲೀಗ್” ಎಂದು ಕರೆದಿದ್ದಾರೆ. 1937ರ ಸಿಡಬ್ಲ್ಯೂಸಿ ನಿರ್ಧಾರದ ಆಧಾರದಲ್ಲಿ ಪಕ್ಷದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಿಸಲು ಬುಧವಾರ ಕಾಂಗ್ರೆಸ್ ನಿರ್ಧರಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿರುವ ನಬಿನ್, ಕಾಂಗ್ರೆಸ್ ತನ್ನ “ಅವಮಾನವನ್ನು ನಿರ್ಣಯದ ಮೂಲಕ ಅಧಿಕೃತಗೊಳಿಸಿದೆ” ಎಂದು Xನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ‘ವಂದೇ ಮಾತರಂ’ನ ಪೂರ್ಣ ಆವೃತ್ತಿ ನುಡಿಸಿದ ವಿಚಾರಕ್ಕೆ ಸಂಬಂಧಿಸಿದ ವಿವಾದವನ್ನೂ ಅವರು ಪ್ರಸ್ತಾಪಿಸಿದರು. ಆ ಸಂದರ್ಭದಲ್ಲಿ ಸೋನಿಯಾ…
