ಬಾಳೆಕಾಯಿ ಹೂವಿನ ದೋಸೆ ಆರೋಗ್ಯಪೂರ್ಣವೂ ಹೌದು

ಬಾಳೆ ಬಹೂಪಯೋಗಿ. ಬಾಳೆಯಲ್ಲಿ ಬಿಸಾಡುವ ಅಂಶಗಳೇ ಇಲ್ಲ. ಬಾಳೆ ಹೂವಿನಿಂದ ಹಿಡಿದು ಹಣ್ಣಿನವರೆಗೆ, ದಿಂಡಿನಿಂದ ಹಿಡಿದು ಎಲೆಯವರೆಗೆ ಎಲ್ಲವೂ ಉಪಯುಕ್ತ. ಬಾಳೆಯ ದಿಂಡು, ಕುಂಡಿಗೆ, ಕಾಯಿ, ಹಣ್ಣು, ಎಲೆ ಹೀಗೆ ಸರ್ವ ಭಾಗಗಳೂ ಆರೋಗ್ಯಕಾರಕ. ಅದರಲ್ಲಿನ ಇರುವ ಆರೋಗ್ಯಕರ ಅಂಶಗಳು ನಮ್ಮ ದೇಹವನ್ನು ಸೇರುತ್ತವೆ. ಅದರಲ್ಲೂ ಬಾಳೆಕಾಯಿ ಹೂವಿನ ದೋಸೆ ರುಚಿಯೂ ಹೌದು, ಆರೋಗ್ಯಪೂರ್ಣವೂ ಹೌದು. ಇದನ್ನು ಮಾಡುವ ವಿಧಾನವೂ ಬಲು ಸುಲಭ.

ಬೇಕಾದ ಸಾಮಗ್ರಿ

ಬಾಳೆಕಾಯಿ ಹೂ 1 ಕಪ್
ದೋಸೆ ಅಕ್ಕಿ 2 ಕಪ್
ಉದ್ದು ಅರ್ಧ ಕಪ್
ಉಪ್ಪು ರುಚಿಗೆ ತಕ್ಕಸ್ಟು

ಮಾಡುವ ವಿಧಾನ

ದೋಸೆಅಕ್ಕಿ, ಉದ್ದು 3 ರಿಂದ 4 ಗಂಟೆಗಳ ಕಾಲ ನೆನಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಬಾಳೆಕಾಯಿ ಹೂವನ್ನು ಸಣ್ಣ ಸಣ್ಣಗೆ ಹೆಚ್ಚಿ ಅದನ್ನು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡದ್ದನ್ನು ಎಲ್ಲವನ್ನು ಚೆನ್ನಾಗಿ ಕಲಸಿ ಬೇಕಾದಷ್ಟು ಉಪ್ಪು ಸೇರಿಸಿ 8 ಗಂಟೆಗಳ ಕಾಲ ಬಿಡಿ. ನಂತರ ದೋಸೆ ಕಾವಲಿಯಲ್ಲಿ ಹಾಕಿ ಬೇಯಿಸಿ. ರುಚಿಯಾದ ಆರೋಗ್ಯವಾದ ದೋಸೆ ಸಿದ್ಧವಾಗುತ್ತದೆ.

ಇದನ್ನೂ ಓದಿ.. ‘ಪೇರಳೆ ಚಿಗುರು ತಂಬುಳಿ’ ರುಚಿ ಮಾತ್ರವಲ್ಲ ಆರೋಗ್ಯಪೂರ್ಣವೂ ಹೌದು

Related posts