ಕೊರೋನಾ ವಾರಿಯರ್ಸ್’ಗಳಿಗೆ ಗೌರವ.. ವಿಶಿಷ್ಟ ರೀತಿಯಲ್ಲಿ ಉದ್ಯಮಿಯ ಹುಟ್ಟುಹಬ್ಬ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ, ಖ್ಯಾತ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಹುಟ್ಟುಹಬ್ಬವನ್ನು ವಿವಿಧ ಸಂಘಟನೆಗಳು ಅರ್ಥಪೂರ್ಣವಾಗಿ ಆಚರಿಸಿದವು. ಬೆಂಗಳೂರಿನ ಇಂದಿರಾ ಕ್ಯಾಂಟೀನ್, ವಿವಿಧ ಸಂಘ ಸಂಸ್ಥೆಗಳಿಗೆ ಊಟೋಪಚಾರ ಮಾಡುವ ಶೆಫ್ ಟಾಕ್ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ 43ನೇ ಜನ್ಮ ದಿನವು ಆ ಸಂಸ್ಥೆಯಲ್ಲಿ ದುಡಿಯುತ್ತಿರುವ ಸುಮಾರು 5000 ಉದ್ಯೋಗಿಗಳ ಪಾಲಿಗೆ ಹಬ್ಬದ ಸಂಭ್ರಮವೆನಿಸಿತು. ಸಂಸ್ಥೆಯ ಸಿಬ್ಬಂದಿ ಇಡೀ ದಿನ ತಮ್ಮ ಉದ್ಯೋಗದಾತನ ಪರವಾಗಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದು ಅದರಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರೂ ಭಾಗಿಯಾದರು.

ಕೊರೋನಾ ವಾರಿಯರ್ಸ್’ಗಳಿಗೆ ಗೌರವ:

ಶೆಫ್ ಟಾಕ್ ಮತ್ತು ಮತ್ಸ್ಯ ಬಂಧನ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾದ ಗೋವಿಂದ ಬಾಬು ಪೂಜಾರಿ ಅವರು ಸ್ವತಃ ತಮ್ಮ ಸಹೋದ್ಯೋಗಿಳ ಜೊತೆ ಕೊರೋನ ವಾರಿಯರ್ಸ್’ಗಳಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾಡಿನ ಹಿತಕ್ಕಾಗಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಆಹಾರ ಕಿಟ್’ಗಳನ್ನು ವಿತರಿಸುವ ಮೂಲಕ ಈ ಕಾರ್ಯಕ್ರಮ ನಾಡಿನ ಗಮನಸೆಳೆಯಿತು. ಶೆಫ್ ಟಾಕ್ ಕಂಪನಿಯ ಸಿಬ್ಬಂದಿ ಸಮೂಹಕ್ಕೂ ಬಹುದಿನಗಳಿಗಾಗುವಷ್ಟು ಆಹಾರ ಕಿಟ್ ವಿತರಿಸಿ ಅವರ ಕುಟುಂಬಕ್ಕೆ ಈ ಉದ್ಯಮಿ ನೆರವಾದರು.

ಹುಟ್ಟುಹಬ್ಬದ ಪ್ರಯುಕ್ತ ವದ್ದಾಶ್ರಮದದಲ್ಲಿರುವವರಿಗೂ ಬೆಡ್ ಶೀಟ್, ಒಂದು ತಿಂಗಳ ಆಹಾರ ಕಿಟ್, ಹಣ್ಣು ಹಂಪಲು, ಸ್ಯಾನಿಟೈಸರ್ ಮಾಸ್ಕ್ ಗಳನ್ನು ಗೋವಿಂದ ಬಾಬು ಪೂಜಾರಿಯವರು ವಿತರಿಸಿದರು.

ವೃಧ್ಧಾಶ್ರಮ, ವಿಕಲಚೇತನರು, ಪೌರಕಾರ್ಮಿಕರು, ಕರೋನ ವಾರಿಯರ್ಸ್ ಸಹಿತ ವಿವಿಧ ಕ್ಷೇತ್ರಗಳ ಮಂದಿಗೆ ಆಧಾರವಾದ ಗೋವಿಂದ ಬಾಬು ಪೂಜಾರಿಯವರ ನಡೆಗೆ ಸಾಮಾಜಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ಯಾರು ಈ ಗೋವಿಂದ ಬಾಬು ಪೂಜಾರಿ?

ಉಡುಪಿ ಜಿಲ್ಲೆಯ ಉಪ್ಪುಂದ ಎಂಬ ಪುಟ್ಟ ಹಳ್ಳಿಯ ಕುವರ ಗೋವಿಂದ ಬಾಬು ಪೂಜಾರಿ, ಬಾಲ್ಯದಲ್ಲಿ ಓದು ಕಷ್ಟ ಎಂದಾಗ ಉದ್ಯೋಗ ಹರಸಿ ಮುಂಬೈಗೆ ತೆರಳಿದ್ದರು. ಉದ್ಯೋಗ ಮೂಲಕವೇ ಜ್ಞಾನ ಸಂಪಾದಿಸಿ ಔದ್ಯೋಗಿಕ ಪಂಡಿತರಾದರು. ಉದ್ಯೋಗಿಯಾಗಿದ್ದ ಇವರೇ ಸ್ನೇಹಿತರ ಜೊತೆ ಸೇರಿ ಸಂಸ್ಥೆ ಕಟ್ಟಿ ದೇಶಕ್ಕೆ ಮಾದರಿಯಾದರು. ಮುಂಬೈ ಅಷ್ಟೇ ಅಲ್ಲ, ತಮ್ಮ ChefTalk Food And Hospitality Services Pvt.Ltd ಸಂಸ್ಥೆಯನ್ನು ಪುಣೆ, ಹೈದರಾಬಾದ್, ಬೆಂಗಳೂರು ಸಹಿತ ದೇಶದ ಹಲವು ನಗರಗಳಲ್ಲಿ ವಿಸ್ತರಿಸಿ ಹಲವು ಸಂಘ ಸಂಸ್ಥೆಗಳ ಉದ್ಯೋಗಿಗಳ ಹಸಿವು ನೀಗಿಸಿದ ಕೀರ್ತಿಗೂ ಗೋವಿಂದ ಬಾಬು ಪೂಜಾರಿ ಪಾತ್ರರಾದರು.

ಒಂದೊಮ್ಮೆ ಕೆಲಸ ಹುಡುಕುತ್ತಾ ಮಹಾನಗರಿಗಳಿಗೆ ಗಿರಾಕಿ ಹೊಡೆಯುತ್ತಿದ್ದ ಇವರು ಇದೀಗ ವಿವಿಧ ರಾಜ್ಯಗಳ 5,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿದ ಹೆಮ್ಮೆಯ ಕನ್ನಡಿಗ ಎನಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕೊರೋನಾ ಸಂಕಷ್ಟ ಕಾಲದಲ್ಲಿ ಸಾವಿರಾರು ಅಸಹಾಯಕ ಕುಟುಂಬಗಳಿಗೆ ಅನ್ನ, ಆಹಾರ, ವೈದ್ಯಕೀಯ ನೆರವಿನ ಹಸ್ತ ಚಾಚಿದ್ದ ಇವರು, ಕುಂದಾಪುರ ಸಮೀಪ ಬಿಜೂರು ಸುತ್ತಮುತ್ತಲ ಜನರ ನೀರಿನ ದಾಹ ತಣಿಸಲು ಜೀವ ಜಲ ಹರಿಸಿ ಆಧುನಿಕ ಭಗೀರಥ ಎನಿಸಿಕೊಂಡರು.
ತನ್ನ ಸಂಸ್ಥೆಯ ಬಹುಪಾಲು ಲಾಭಾಂಶವನ್ನು ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವ ಗೋವಿಂದ ಬಾಬು ಪೂಜಾರಿಯರು, ಮಹಿಳಾ ಸಬಲೀಕರಣ ಹಾಗೂ ಸ್ವ ಉದ್ಯೋಗಿಗಳ ಆರ್ಥಿಕ ಶಕ್ತಿಯಾಗುವ ಉದ್ದೇಶದಿಂದ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿಯನ್ನು ಆರಂಭಿಸಿದ್ದಾರೆ. ಜೊತೆಗೆ ತಮ್ಮೂರಿನ ಮೀನುಗಾರರ ಕಾಯಕಕ್ಕೆ ನೆರವಾಗುವ ನಿಟ್ಟಿನಲ್ಲಿ ‘ಮತ್ಸ್ಯ ಬಂಧನ’ ಕಂಪೆನಿ ಕಟ್ಟಿ ಮೀನಿನ ಚಿಪ್ಸ್ ತಯಾರಿಸುವ ಘಟಕ ತೆರೆದಿದ್ದಾರೆ. ‘ಫಿಶ್ ವೆಪರ್ಸ್’ ಹೆಸರಲ್ಲಿ ಹೊರತರಲಾಗಿರುವ ಈ ಉತ್ಪನ್ನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿತ ರಾಜ್ಯ ಸರ್ಕಾರದ ಹಲವಾರು ಸಚಿವರು, ಸರ್ವ ಪಕ್ಷಗಳ ಮುಖಂಡರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ.. ಯುವಜನರ ಸಬಲೀಕರಣಕ್ಕೆ ಮುನ್ನುಡಿ ಬರೆದ ಸೊಸೈಟಿ: ಉದ್ಯಮಿ ಗೋವಿಂದ ಪೂಜಾರಿ ಸಾಹಸಗಾಥೆ.. 

 

ಇದನ್ನೂ ಓದಿ.. ಸಮಾಜಮುಖಿ ‘ಯುವಸೈನ್ಯ’; ಸಾಮಾಜಿಕ ಜಾಲತಾಣಗಳಲ್ಲಿ ChefTalk ಮೇನಿಯಾ

 

Related posts