‘ಪೇರಳೆ ಚಿಗುರು ತಂಬುಳಿ’ ರುಚಿ ಮಾತ್ರವಲ್ಲ ಆರೋಗ್ಯಪೂರ್ಣವೂ ಹೌದು

ಪೇರಳೆ ರುಚಿ ಮಾತ್ರ ಅಲ್ಲ ಆರೋಗ್ಯ ವೃದ್ಧಿ ಕೂಡಾ ಹೌದು. ಔಷಧಿ ಮಾದರಿಯ ವಸ್ತುಗಳ ತಯಾರಿಯಲ್ಲೂ ಈ‌ ಸೀಬೆಹಣ್ಣು ಮಹತ್ವದ ಪಾತ್ರ ವಹಿಸುತ್ತದೆ. ಎಲ್ಲಾ ಕಾಲದಲ್ಲೂ ಸಿಗುವ ಸೀಬೆಯ ಬೇರೆ ಭಾಗಗಳು ಕೂಡ ತುಂಬಾ ಉಪಯುಕ್ತ. ಅದರ ಚಿಗುರೆಲೆಯ ‘ತಂಬುಳಿ’ ಹಳ್ಳಿ ಸೊಗಡಿನ ಖಾದ್ಯಗಳಲ್ಲೊಂದು. ಅದನ್ನು ತಯಾರಿಸುವ ವಿಧಾನವೂ ಸುಲಭ.

ಬೇಕಾದ ಸಾಮಾಗ್ರಿ:

  • ತೆಂಗಿನತುರಿ 1 ಕಪ್
  • ಜೀರ 1 ಚಮಚ
  • ಕಾಯಿಮೆಣಸು 1
  • ಪೇರಳೆ ಚಿಗುರು 2 ಕಪ್
  • ಮಜ್ಜಿಗೆ ಅಥವಾ ಮೊಸರು 1 ಕಪ್
  • ಎಣ್ಣೆ 2 ಚಮಚ
  • ಬೆಳ್ಳುಳ್ಳಿ 4 ( ಬೇಕಾದಲ್ಲಿ)
  • ಕೆಂಪು ಮೆಣಸು 1
  • ಸಾಸಿವೆ 1 s
  • ಕರಿಬೇವು
  • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

  • ಮೊದಲಿಗೆ ಪೇರಳೆ ಚಿಗುರನ್ನು ಚೆನ್ನಾಗಿ ಶುಚಿ ಮಾಡಿ, ತೊಳೆದು, ಅದನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಹಾಕಿ ಬೇಯಿಸಿ, ತಣ್ಣಗಾಗಲು ಬಿಡಿ.
  • ಒಂದು ಮಿಕ್ಸಿ ಜಾರಿನಲ್ಲಿ ಕಾಯಿತುರಿ, ಜೀರಿಗೆ, ಕಾಯಿಮೆಣಸು, ಬೇಯಿಸಿದ ಪೇರಳೆ ಚಿಗುರು, ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಮಜ್ಜಿಗೆ ಅಥವ ಮೊಸರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.
  • ಒಂದು ಚಿಕ್ಕ ಬಾಣಲೆಯಲ್ಲಿ ಎಣ್ಣೆ, ಬೆಳ್ಳುಳ್ಳಿ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ತಂಬುಳಿಗೆ ಸೇರಿಸಿದರೆ ರುಚಿಯಾದ ಪೇರಳೆ ಚಿಗುರಿನ ತಂಬುಳಿ ಸಿದ್ಧವಾಗುತ್ತದೆ. ಇದನ್ನು ಹಾಗೆಯೇ ಕುಡಿಯಬಹುದು ಅಥವಾ ಊಟದ ಜೊತೆ ಸವಿಯಬಹುದು.

ಇದನ್ನೂ ಮಾಡಿ ನೋಡಿ.. ಸ್ವಾದಿಷ್ಟಕ್ಕೆ ಮತ್ತೊಂದು ಹೆಸರೇ ‘ಮಾವಿನಕಾಯಿ ತೊಕ್ಕು’

Related posts