ತೆರಿಗೆ ವಂಚಕರ ಬೆನ್ನತ್ತಿದ ಐಟಿ; ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ದಾಳಿ

ಬೆಂಗಳೂರು: ತೆರಿಗೆ ವಂಚಕರ ಬೆನ್ನತ್ತಿರುವ ಆದಾಯ ತೆರಿಗೆ ಇಲಾಖಾಧಿಕಾರಿಗಳು ಬೆಂಗಳೂರಿನಲ್ಲಿ ಇಂದು ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.

ಉದ್ಯಮಿಗಳು ಸೇರಿದಂತೆ ಪ್ರಮುಖರಿಗೆ ಸೇರಿದ ಸಂಸ್ಥೆ, ಕಚೇರಿ, ಹಾಗೂ ನಿವಾಸಗಳ ಮೇಲೆ ಬೆಳ್ಳಂ ಬೆಳಿಗ್ಗೆಯೇ ಲಗ್ಗೆ ಹಾಕಿದ ಐಟಿ ತಂಡ ದಾಖಲೆಗಳಿಗಾಗಿ ಜಾಲಾಡಿದೆ. ಸದಾಶಿವನಗರ, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ಸರ್ಜಾಪುರ ರಸ್ತೆ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಚಿನ್ನದ ವ್ಯಾಪಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Related posts