ಭಾರತ್ ಐಕ್ಯತಾ ಯಾತ್ರೆಗೆ ಒಂದು ವರ್ಷ; ನೆನಪಿನಂಗಳದಲ್ಲಿ ಕಾಂಗ್ರೆಸ್ ನಾಯಕರು

ಬೆಂಗಳೂರು: ಐತಿಹಾಸಿಕ ಭಾರತ್ ಐಕ್ಯತಾ ಯಾತ್ರೆ ಪ್ರಾರಂಭವಾಗಿ ಒಂದು ವರ್ಷ ಪೂರೈಸುತ್ತಿದೆ..
ಸೆಪ್ಟೆಂಬರ್ 7ನೇ ತಾರೀಖಿನಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಜೆ 5ರಿಂದ 6 ಗಂಟೆಯವರೆಗೆ ಒಂದು ಗಂಟೆಗಳ ಕಾಲ ಪಾದಯಾತ್ರೆ ಮಾಡುವ ಮೂಲಕ ಈ ಅಭೂತಪೂರ್ವ ಯಾತ್ರೆಯನ್ನು ನೆನಪಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಒಂದು ಗಂಟೆಗಳ ಕಾಲ ಪಾದಯಾತ್ರೆ ಮಾಡುವ ಮೂಲಕ ವಿಭಜನಕಾರಿ ಶಕ್ತಿಗಳಿಂದ ಭಾರತವನ್ನು ರಕ್ಷಿಸಿ, ದೇಶದ ಮನಸುಗಳನ್ನು ಜೋಡಿಸುವ ಕೆಲಸವನ್ನು ಮುಂದುವರೆಸಲು ಪಣ ತೊಡೋಣ ಎಂದವರು ಕಾರ್ಯಕರ್ತರಿಗೆ ಕರೆನೀಡಿದ್ದಾರೆ. ಈ‌ಕುರಿತಂತೆ ಅವರು ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

Related posts