ಭ್ರಷ್ಟಾಚಾರದ ತಾಣಗಳಾಗಿ ಮಾರ್ಪಟ್ಟ ಸರ್ಕಾರಿ ಆಸ್ಪತ್ರೆಗಳು..! ಏನಿದು ಖದರ್ ಸಾಹೇಬ್ರೇ?

ಬೆಂಗಳೂರು: ಬಡವರಿಗೆ ಆಶಾಕಿರಣವಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳು ಕಾಂಗ್ರೆಸ್ ಸರ್ಕಾರದ ದುರಾಡಳಿತದ ನಡುವೆ ಭ್ರಷ್ಟಾಚಾರದ ತಾಣಗಳಾಗಿ ಮಾರ್ಪಟ್ಟಿವೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಪಕ್ಷ ಬಿಜೆಪಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ. ಅಫ್ಜಲ್‌ಪುರ ಸರ್ಕಾರಿ ಆಸ್ಪತ್ರೆಯಲ್ಲಿ, ರೋಗಿಗಳಿಗೆ ನೀಡುವ ಹಾಲು, ಮೊಟ್ಟೆ ಮತ್ತು ಊಟದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ ಮತ್ತು ಲೂಟಿ ಮಾಡಲಾಗಿದೆ ಎಂದು ಬಿಜೆಪಿ ದೂರಿದೆ.

ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಇಲಾಖೆಯಲ್ಲಿ ಬಡ ರೋಗಿಗಳಿಗೆ ಆಹಾರ ಪೂರೈಕೆಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದು ಬಿಜೆಪಿ ಗಮನಸೆಳೆದಿದೆ. ಇದೇ ವೇಳೆ, ‘ತಾವು ಇನ್ನೂ ಏಕೆ ಮೌನವಾಗಿದ್ದೀರಿ? ಆಸ್ಪತ್ರೆಗಳಲ್ಲಿ ರೋಗಿಗಳ ಆಹಾರಕ್ಕೂ ಭದ್ರತೆ ಇಲ್ಲವೇ? ಲೂಟಿಕೋರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ’ ಎಂದು ಬಿಜೆಪಿ ಪಕ್ಷವು ಯು.ಟಿ.ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಬಡವರ ಪಾಲಿನ ಆಶಾಕಿರಣವಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳು ಲೂಟಿಕೋರ @INCKarnataka ಸರ್ಕಾರದ ದುರಾಡಳಿತದಲ್ಲಿ ಭ್ರಷ್ಟಾಚಾರದ ಅಡ್ಡೆಗಳಾಗಿ ಮಾರ್ಪಟ್ಟಿವೆ.

ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೊಡುವ ಹಾಲು, ಮೊಟ್ಟೆ, ಊಟದ ಹೆಸರಲ್ಲೂ ಲಕ್ಷಾಂತರ ರೂಪಾಯಿಗಳ ಬೋಗಸ್ ಬಿಲ್ ಸೃಷ್ಟಿಸಿ ಲೂಟಿ ಹೊಡೆಯಲಾಗಿದೆ.

ಆರೋಗ್ಯ ಸಚಿವ… pic.twitter.com/G2FApXbR2C

— BJP Karnataka (@BJP4Karnataka) July 18, 2026

Related posts