ಜೂನ್ 1 ರಿಂದ ಪ್ರಯಾಣಿಕ ರೈಲು ಸೇವೆ; ಟಿಕೆಟ್ ಬುಕಿಂಗ್ ಶೀಘ್ರ ಆರಂಭ

ದೆಹಲಿ: ಕೊರೋನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್’ಡೌನ್ ಜಾರಿಯಲ್ಲಿದೆ. ಈ ಕಾರಣದಿಂದಾಗಿ ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿತ್ತು. ಇದೀಗ ಬಹುತೇಕ ರಾಜ್ಯಗಳಲ್ಲಿ ಬಸ್ ಸೇವೆ ಆರಂಭವಾಗಿದ್ದು ಇದೀಗ ರೈಲು ಸೇವೆಗೂ ಗ್ರರೀನ್ ಸಿಗಲಿದೆ.

ಜೂನ್ 1 ರಿಂದ ದಿನಕ್ಕೆ 200 ಪ್ರಯಾಣಿಕ ರೈಲು ಸಂಚಾರ ಪ್ರಾರಂಭವಾಗಲಿದೆ. ಈ ಸಂಬಂಧ ಆನ್‌ಲೈನ್ ಬುಕಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಪ್ರಕಟಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾನ್ ಎಸಿ ರೈಲುಗಳನ್ನು ಟೈಮ್ ಟೇಬಲ್ ಪ್ರಕಾರ ಓಡಿಸಲಿದೆ ಎಂದಿದ್ದಾರೆ.

ಮುಂದಿನ ಎರಡು ದಿನಗಳಲ್ಲಿ ಶ್ರಮಿಕ್ ವಿಶೇಷ ರೈಲುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ. ಎಲ್ಲಾ ವಲಸಿಗನ್ನು ಅವರವರ ಸ್ಥಳಕ್ಕೆ ತಲುಪಿಸಲಾಗುತ್ತದೆ ಎಂದು ರೈವೇ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ.. ಒಂದೇ ದಿನ 5,611 ಕೇಸ್.. ಕೊರೋನಾ ಸವಾರಿಗೆ ಬೆಚ್ಚಿದ ಜನ 

 

Related posts