Blog

ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಚಾಲನೆ: ನ.10ರವರೆಗೆ ಜಾತ್ರಾ ಮಹೋತ್ಸವ, ಕಾಲ್ನಡಿಗೆಯಲ್ಲಿ ಹರಿದು ಬಂದ ಭಕ್ತಸಾಗರ

ವರದಿ: ಮಹದೇವಸ್ವಾಮಿ ಜಿ ಗೌಡ ಚಾಮರಾಜನಗರ: ಪುರಾಣ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ನವೆಂಬರ್ 6ರಿಂದ 10ರವರೆಗೆ ನಡೆಯಲಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಮೊದಲ ದಿನವೇ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದು, ಕಾಲ್ನಡಿಗೆಯಲ್ಲಿ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಕಳೆದ ನಾಲ್ಕೈದು ದಿನಗಳಿಂದಲೇ ಕಾಲ್ನಡಿಗೆಯಲ್ಲಿ ಬೆಟ್ಟದತ್ತ ಪ್ರಯಾಣಿಸುತ್ತಿದ್ದಾರೆ. ‘ಉಘೇ ಮಾದಪ್ಪ’ ಘೋಷಣೆ, ತಮಟೆ ಮತ್ತು ಕಂಸಾಳೆ ನಾದದೊಂದಿಗೆ ತಂಡೋಪತಂಡವಾಗಿ ಸಾಗುತ್ತಿರುವ ಭಕ್ತರು ದಾರಿಯಲ್ಲೇ ಅಡುಗೆ ಮಾಡಿ ಊಟ, ವಿಶ್ರಾಂತಿ ಪಡೆದು ಮತ್ತೆ ಪ್ರಯಾಣ ಮುಂದುವರಿಸುತ್ತಿದ್ದಾರೆ. ಕಾಲ್ನಡಿಗೆ ಭಕ್ತರಿಗೆ ಸುರಕ್ಷತಾ ನಿಯಮ ಹಿಂದಿನ ಜಾತ್ರೆಯಲ್ಲಿ ಕಾಲ್ನಡಿಗೆ ಭಕ್ತರ ಮೇಲೆ ಚಿರತೆ ದಾಳಿ ನಡೆದ ಹಿನ್ನೆಲೆಯಲ್ಲಿ ಈ ಬಾರಿ ಅರಣ್ಯ ಇಲಾಖೆ ಮತ್ತು ಪ್ರಾಧಿಕಾರ ವಿಶೇಷ ಮುನ್ನೆಚ್ಚರಿಕೆ ವಹಿಸಿವೆ. ಬೆಳಿಗ್ಗೆ 7ರಿಂದ ಸಂಜೆ 4ರವರೆಗೆ ಮಾತ್ರ…

‘ಡೆತ್ ರೈಲ್ವೇ’: 1944ರ ಎರಡನೇ ಮಹಾಯುದ್ಧ ಮತ್ತು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕಥೆ

ಚೆನ್ನೈ: ನಟ ಸಸಿಕುಮಾರ್ ಅವರು ನಿರ್ದೇಶಕ ಧರಣಿ ರಸೇಂದ್ರನ್ ಅವರ ಐತಿಹಾಸಿಕ ಯುದ್ಧಾಧಾರಿತ ಸಿನಿಮಾ ‘ಡೆತ್ ರೈಲ್ವೇ’ಯಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್‌ಎ) ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಧರಣಿ ರಸೇಂದ್ರನ್ ಅವರ ಜನ್ಮದಿನದ ಅಂಗವಾಗಿ ಚಿತ್ರದ ಗ್ಲಿಂಪ್ಸ್ ವಿಡಿಯೋ ಬಿಡುಗಡೆ ಮಾಡಲಾಗಿದೆ. 1944ರ ಎರಡನೇ ಮಹಾಯುದ್ಧ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕಥೆಯನ್ನು ಚಿತ್ರ ಹೊಂದಿದೆ. ಬರ್ಮಾದಿಂದ ಭಾರತದತ್ತ ಮುನ್ನಡೆಯುತ್ತಿದ್ದ ಜಪಾನ್ ಸೇನೆಯ ಯುದ್ಧದ ಸನ್ನಿವೇಶಗಳೂ ಚಿತ್ರದಲ್ಲಿರಲಿವೆ. ಐತಿಹಾಸಿಕ ಘಟನೆಗಳ ಜೊತೆಗೆ ಪ್ರೇಮಕಥೆಯ ಎಳೆಯೂ ಸಿನಿಮಾದಲ್ಲಿದೆ. ಸಸಿಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಸಮುದ್ರಕನಿ, ಸೇಯೋನ್, ಕಿಶೋರ್, ಭವಾನಿ ಶ್ರೀ ಮತ್ತು ಶಿವದಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಶೋಕ್ ಸೆಲ್ವನ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಜೆ.ಕೆ. ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ಜೆ. ಕಮಲಕಣ್ಣನ್ ನಿರ್ಮಿಸುತ್ತಿರುವ ಚಿತ್ರಕ್ಕೆ ಧರಣಿ ರಸೇಂದ್ರನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  

ಫ್ರಾನ್ಸ್‌ ಆಡಳಿತಕ್ಕೆ ನಡುಕ ಹುಟ್ಟಿಸಿದ ಕಾರ್ಮಿಕ ಸಂಘಟನೆಗಳ ಮುಷ್ಕರ; ಹೋರಾಟದಲ್ಲಿ 2.70 ಲಕ್ಷ ಮಂದಿ ಭಾಗಿ

ಪ್ಯಾರಿಸ್: ವೇತನ ಹೆಚ್ಚಳ, ಉತ್ತಮ ಪಿಂಚಣಿ ಹಾಗೂ ಜೀವನ ವೆಚ್ಚ ಇಳಿಸುವಂತೆ ಆಗ್ರಹಿಸಿ ಫ್ರಾನ್ಸ್‌ನಲ್ಲಿ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಿವೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ಯಾರಿಸ್, ಲಿಯಾನ್, ಮಾರ್ಸೆಲೆ ಸೇರಿದಂತೆ ಹಲವು ನಗರಗಳಲ್ಲಿ ಲಕ್ಷಾಂತರ ಮಂದಿ ಬೀದಿಗಿಳಿದಿದ್ದಾರೆ. ಪ್ಯಾರಿಸ್ ಹೊರವಲಯದ 180 ಪ್ರತಿಭಟನೆಗಳಲ್ಲಿ ಸುಮಾರು 2.70 ಲಕ್ಷ ಮಂದಿ ಭಾಗವಹಿಸಿದ್ದಾರೆ. ಬಹುತೇಕ ಪ್ರತಿಭಟನೆಗಳು ಶಾಂತಿಯುತವಾಗಿದ್ದರೂ ಕೆಲವೆಡೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಮೂರನೇ ಒಂದು ಭಾಗದಷ್ಟು ಪ್ರೌಢಶಾಲೆಗಳು ಬಂದ್ ಆಗಿದ್ದು, ಸಾರ್ವಜನಿಕ ಸಾರಿಗೆಗೂ ಅಡಚಣೆಯಾಗಿದೆ. ಪ್ಯಾರಿಸ್‌ನ ಐಫೆಲ್ ಟವರ್ ಪ್ರವಾಸಿಗರಿಗೆ ಮುಚ್ಚಲಾಗಿದೆ. ಟೌಲೌಸ್ ಸಮೀಪದ ಶಾಲೆಯೊಂದಕ್ಕೆ ಬೆಂಕಿ ಹಚ್ಚಿರುವ ವರದಿಯಾಗಿದೆ. ಪ್ರತಿಭಟನೆ ನಿಯಂತ್ರಿಸಲು ಸರ್ಕಾರ 70 ಸಾವಿರ ಪೊಲೀಸರನ್ನು ನಿಯೋಜಿಸಿದೆ. ಫ್ರಾನ್ಸ್‌ಗೆ ಪ್ರಯಾಣಿಸುವ ಅಮೆರಿಕನ್ನರಿಗೆ ಅಲ್ಲಿನ ರಾಯಭಾರ ಕಚೇರಿ ಭದ್ರತಾ ಎಚ್ಚರಿಕೆ ನೀಡಿದೆ.

ಏಳು ಬೇಡಿಕೆಗಳಿಗೆ ಒಪ್ಪಿದ ಬಳಿಕವೇ ಮಾತುಕತೆ; ಅಮೆರಿಕಕ್ಕೆ ಸಂದೇಶ ಕಳುಹಿಸಿದ ಇರಾನ್

ಟೆಹರಾನ್: ಅಮೆರಿಕದೊಂದಿಗೆ ಅಣು ಒಪ್ಪಂದದ ಮಾತುಕತೆಗಾಗಿ ಇರಾನ್ ಕತಾರ್ ಮೂಲಕ ಪ್ರಸ್ತಾವನೆ ಕಳುಹಿಸಿದೆ. ಆದರೆ ಏಳು ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ ಬಳಿಕವೇ ಮಾತುಕತೆ ಆರಂಭಿಸುವುದಾಗಿ ಟೆಹರಾನ್ ಸ್ಪಷ್ಟಪಡಿಸಿದೆ. ಅಮೆರಿಕ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಬೇಕು, ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಇರಾನ್ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಯುದ್ಧದ ನಷ್ಟಕ್ಕೆ ಪರಿಹಾರ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ. ಷರತ್ತುಗಳು ಈಡೇರುವವರೆಗೆ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ ಎಂದು ಇರಾನ್ ಎಚ್ಚರಿಸಿದೆ. ಭದ್ರತಾ ಅಧಿಕಾರಿ ಮೊಹ್ಸೆನ್ ರೆಜಾಯ್ ರಷ್ಯಾ ಭೇಟಿಯ ವೇಳೆ ಈ ಬೇಡಿಕೆಗಳನ್ನು ಪುನರುಚ್ಚರಿಸಿದ್ದಾರೆ. ಮತ್ತೊಂದೆಡೆ, ಆರಂಭಿಕ ಮಾತುಕತೆಯಲ್ಲೇ ಅಣು ವಿಷಯಗಳನ್ನು ಸೇರಿಸಬೇಕೆಂದು ಅಮೆರಿಕ ಒತ್ತಾಯಿಸಿದೆ. ಯುದ್ಧ ಅಂತ್ಯಗೊಳಿಸಲು ಮಧ್ಯಸ್ಥಿಕೆ ರಾಷ್ಟ್ರಗಳು ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಆದರೆ ಮಧ್ಯಂತರ ಚುನಾವಣೆಯ ಬಳಿಕ ಇರಾನ್ ವಿರುದ್ಧ ಮತ್ತೆ ಸೇನಾ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿಲ್ಲ.  

ಪೂರೈಕೆ ಸರಪಳಿ ವೈವಿಧ್ಯೀಕರಣ; ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ಜೈಶಂಕರ್ ಕರೆ

ಸೇಂಟ್ ಜಾನ್ಸ್: ಜಾಗತಿಕ ಪೂರೈಕೆ ಸರಪಳಿಗಳನ್ನು ಬಲಪಡಿಸಿ ವೈವಿಧ್ಯೀಕರಿಸುವ ಮೂಲಕ ಆರ್ಥಿಕ ಪಾಲುದಾರಿಕೆ ವಿಸ್ತರಿಸುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. ಆಂಟಿಗುವಾ ಮತ್ತು ಬಾರ್ಬುಡಾದ ಸೇಂಟ್ ಜಾನ್ಸ್‌ನಲ್ಲಿ ನಡೆದ ಕಾಮನ್‌ವೆಲ್ತ್ ಶೃಂಗಸಭೆಯ ಅಂಗವಾಗಿ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಉದ್ಯಮ ನಾಯಕರ ಉಪಾಹಾರ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಾಸಾರ್ಹ ಹಾಗೂ ಕಡಿಮೆ ದೂರದ ವ್ಯಾಪಾರ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿಹೇಳಿದರು. ಹೆಚ್ಚಿನ ಸಂಪರ್ಕ ಕಾರಿಡಾರ್‌ಗಳು ವ್ಯಾಪಾರ ವೃದ್ಧಿಗೆ ನೆರವಾಗಲಿದ್ದು, ಸ್ಥಳೀಯ ವಿತರಣಾ ಜಾಲಗಳನ್ನು ಬಲಪಡಿಸಬೇಕು. ವೃತ್ತಿಪರ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ವಿಶ್ವದಾದ್ಯಂತ ಹರಡಿರುವ ಭಾರತೀಯ ಉದ್ಯಮ ಸಮುದಾಯ ಕಾಮನ್‌ವೆಲ್ತ್‌ಗೆ ಪ್ರಮುಖ ಆಸ್ತಿಯಾಗಿದೆ ಎಂದ ಅವರು, ಡಿಜಿಟಲ್ ತಂತ್ರಜ್ಞಾನವು ಆಡಳಿತದ ದಕ್ಷತೆ ಮತ್ತು ಆರ್ಥಿಕ ಬೆಳವಣಿಗೆಗೆ ವೇಗ ನೀಡಲಿದೆ ಎಂದು ತಿಳಿಸಿದರು. ಅಂತರರಾಷ್ಟ್ರೀಯ ಸೌರ ಒಕ್ಕೂಟ…

ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಇರಾನ್–ಒಮನ್ ಕಸರತ್ತು

ಟೆಹರಾನ್: ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಪುನರಾರಂಭಿಸುವ ಕುರಿತು ಇರಾನ್ ಮತ್ತು ಒಮನ್ ಮಾತುಕತೆ ನಡೆಸಿವೆ. ಒಮನ್ ವಿದೇಶಾಂಗ ಸಚಿವ ಬದರ್ ಬಿನ್ ಹಮದ್ ಅಲ್ ಬುಸೈದಿ ಹಾಗೂ ಇರಾನ್ ಸಚಿವ ಅಬ್ಬಾಸ್ ಅರಘ್ಚಿ ದೂರವಾಣಿ ಮೂಲಕ ಚರ್ಚಿಸಿ, ಸುರಕ್ಷಿತ ನೌಕಾಯಾನ ಮತ್ತು ಪ್ರಾದೇಶಿಕ ಉದ್ವಿಗ್ನತೆ ತಗ್ಗಿಸುವ ಮಾರ್ಗಗಳ ಬಗ್ಗೆ ಸಮಾಲೋಚಿಸಿದ್ದಾರೆ. ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಇಂಧನ ಸಾಗಣೆಗೆ ಅಡೆತಡೆಯಿಲ್ಲದ ಸಮುದ್ರ ಮಾರ್ಗ ಕಲ್ಪಿಸುವುದು ಮಾತುಕತೆಯ ಉದ್ದೇಶವಾಗಿದೆ. ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ ಎರಡು ಸೂಪರ್‌ಟ್ಯಾಂಕರ್‌ಗಳು ಸೇರಿದಂತೆ ಮೂರು ಹಡಗುಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ. ಅನುಮತಿಯಿಲ್ಲದ ಮಾರ್ಗದಲ್ಲಿ ಸಾಗುತ್ತಿದ್ದ ತೈಲ ಟ್ಯಾಂಕರ್ ನೌಕಾ ಮೈನ್‌ಗೆ ಡಿಕ್ಕಿಯಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಆರೋಪಿಸಿದೆ. ಬೆಂಕಿ ನಂದಿಸಲು ತೆರಳಿದ್ದ ಟಗ್‌ಬೋಟ್‌ನಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಎರಡು ಡ್ರೋನ್‌ಗಳನ್ನು ನಿಯಂತ್ರಣಕ್ಕೆ ಪಡೆದು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಇರಾನ್…

ಬೇಸಿಲ್ ಜೋಸೆಫ್ ನಟನೆಯ ‘ರಾವಾಡಿ’: ತಮಿಳು–ಮಲಯಾಳಂ ದ್ವಿಭಾಷಾ ಕಾಮಿಡಿ ಸಿನಿಮಾ

ಚೆನ್ನೈ: ನಟ ಬೇಸಿಲ್ ಜೋಸೆಫ್ ಅಭಿನಯದ ಬಹುನಿರೀಕ್ಷಿತ ತಮಿಳು–ಮಲಯಾಳಂ ದ್ವಿಭಾಷಾ ಸಿನಿಮಾ ‘ರಾವಾಡಿ’ಯ ಮೊದಲ ಹಾಡು ‘ಅಡ್ರ ಪರಮ’ ಬಿಡುಗಡೆಯಾಗಿದೆ. ಜೆನ್ ಮಾರ್ಟಿನ್ ಸಂಗೀತ ಸಂಯೋಜಿಸಿರುವ ಈ ಪೆಪ್ಪಿ ಹಾಡಿಗೆ ಅರವಿವು ಧ್ವನಿಯಾಗಿದ್ದು, ಉದಯ್ ಸಾಹಿತ್ಯ ರಚಿಸಿದ್ದಾರೆ. ವಿಗ್ನೇಶ್ ವಡಿವೇಲ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 24, 2026ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಚಿತ್ರದ ಚಿತ್ರೀಕರಣ ಮಾರ್ಚ್ ತಿಂಗಳಲ್ಲೇ ಪೂರ್ಣಗೊಂಡಿತ್ತು. ಕಾಲೇಜು ಹಿನ್ನೆಲೆಯ ಕಥೆ ಹೊಂದಿರುವ ಚಿತ್ರದಲ್ಲಿ ಬೇಸಿಲ್ ಜೋಸೆಫ್ ಅಬ್ಬಾಸ್ ಪಾತ್ರದಲ್ಲಿ ಹಾಗೂ ಎಲ್.ಕೆ. ಅಕ್ಷಯ್ ಕುಮಾರ್ ಪ್ರಭು ಪಾತ್ರದಲ್ಲಿ ನಟಿಸಿದ್ದಾರೆ. ವಿದ್ಯಾರ್ಥಿ ಗ್ಯಾಂಗ್‌ನ ನಾಯಕನಾಗಿ ಪ್ರಭು ಕಾಣಿಸಿಕೊಳ್ಳಲಿದ್ದಾರೆ. ನೋಬಲ್ ಕೆ. ಜೇಮ್ಸ್, ಜಾಫರ್ ಸಾದಿಕ್, ಅರುಣ್‌ಚಳೇಶ್ವರನ್, ಜಾನ್ ವಿಜಯ್, ಸತ್ಯನ್, ಶರೀಕ್ ಹಸನ್ ಮತ್ತು ಐಶ್ವರ್ಯ ಶರ್ಮಾ ತಾರಾಗಣದಲ್ಲಿದ್ದಾರೆ. ವಿಗ್ನೇಶ್ ವಡಿವೇಲ್ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿರುವ ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ…

ಮೊದಲ ದಿನದಗಳಿಕೆ; ‘ಅನಿಮಲ್’ ಹಿಂದಿಕ್ಕಿದ ‘ರಾಮಾಯಣ’; ‘ಆದಿಪುರುಷ್’ ದಾಖಲೆ ಮುರಿಯಲು ವಿಫಲ

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಮೊದಲ ದಿನದ ಗಳಿಕೆಯಲ್ಲಿ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಮತ್ತು ರಣಬೀರ್ ಕಪೂರ್ ಅವರ ‘ಅನಿಮಲ್’ ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿದೆ. ಆದರೆ ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರದ ಮೊದಲ ದಿನದ ಗಳಿಕೆಯ ದಾಖಲೆಯನ್ನು ಮುರಿಯಲು ವಿಫಲವಾಗಿದೆ. ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಂಡ ‘ರಾಮಾಯಣ’ ಭಾರತದಲ್ಲಿ ಮೊದಲ ದಿನ ₹64.85 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ಗ್ರಾಸ್ ಗಳಿಕೆ ₹77 ಕೋಟಿಗೂ ಅಧಿಕವಾಗಿದೆ ಎಂದು ವರದಿಯಾಗಿದೆ. ಶಾರುಖ್ ಖಾನ್ ಅಭಿನಯದ ‘ಪಠಾಣ್’ ಮೊದಲ ದಿನ ₹57 ಕೋಟಿ ಗಳಿಸಿದ್ದರೆ, ‘ಅನಿಮಲ್’ ₹63 ಕೋಟಿ ಗಳಿಸಿತ್ತು. ಈ ಎರಡೂ ಚಿತ್ರಗಳ ಗಳಿಕೆಯನ್ನು ‘ರಾಮಾಯಣ’ ಹಿಂದಿಕ್ಕಿದೆ. ಆದರೆ ಪ್ರಭಾಸ್ ಅಭಿನಯದ ‘ಆದಿಪುರುಷ್’ ಮೊದಲ ದಿನ ಗಳಿಸಿದ್ದ ₹86.75 ಕೋಟಿ ದಾಖಲೆಯನ್ನು ತಲುಪಲು ಸಾಧ್ಯವಾಗಿಲ್ಲ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್…

ರಾಮನ ವೇಷದಲ್ಲಿದ್ದಾಗ ಮಗಳಿಗೆ ಮುತ್ತಿಡುವ ಮುದ್ದಾದ ಫೋಟೋ; ‘ರಾಮಾಯಣ’ ಚಿತ್ರೀಕರಣ ವೇಳೆ ರಣಬೀರ್–ರಾಹಾ ಅಪರೂಪದ ಕ್ಷಣ

ಮುಂಬೈ: ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ನಟಿ ಆಲಿಯಾ ಭಟ್ ಅವರು ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಅವರ ಅಪರೂಪದ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಅಭಿಮಾನಿಗಳ ಗಮನ ಸೆಳೆದಿದ್ದು, ವೈರಲ್ ಆಗಿವೆ. ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತೆಗೆದ ಫೋಟೋಗಳಲ್ಲಿ ರಾಮನ ಪಾತ್ರದ ವೇಷದಲ್ಲಿರುವ ರಣಬೀರ್, ಮಗಳು ರಾಹಾಗೆ ಮುತ್ತಿಡುತ್ತಿರುವ ದೃಶ್ಯವಿದೆ. ಮತ್ತೊಂದು ಫೋಟೋದಲ್ಲಿ ರಾಹಾ ತಂದೆಯನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾಳೆ. ಎರಡೂ ಚಿತ್ರಗಳಲ್ಲಿ ಮಗಳ ಮುಖವನ್ನು ಆಲಿಯಾ ಹೃದಯದ ಎಮೋಜಿಯಿಂದ ಮರೆಮಾಡಿದ್ದಾರೆ. ಪತಿ ರಣಬೀರ್ ಅವರನ್ನು ಹೊಗಳಿರುವ ಆಲಿಯಾ, ಚಿತ್ರದ ಚಿತ್ರೀಕರಣಕ್ಕಾಗಿ ಎಲ್ಲವನ್ನೂ ಧಾರೆಯೆರೆದಿದ್ದರೂ ಮಗಳಿಗಾಗಿ ಪ್ರೀತಿಯನ್ನು ಉಳಿಸಿಕೊಂಡಿದ್ದೀರಿ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ. ರಣಬೀರ್ ಹಾಗೂ ‘ರಾಮಾಯಣ’ ಚಿತ್ರತಂಡದ ಪರಿಶ್ರಮದ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿರುವ ಅವರು, “ಕೆಲವು ಕಥೆಗಳು ನಮ್ಮೆಲ್ಲರಿಗಿಂತ ದೊಡ್ಡವು. ರಾಮಾಯಣ ಅಂತಹ ಕಥೆ” ಎಂದು ತಮ್ಮ…

ಆಮದು ನಿರ್ಬಂಧಿಸುವ 2022ರ ಕಾನೂನಿನ ಮರುಪರಿಶೀಲನೆಗೆ ಅಮೆರಿಕ ಒಲವು

ವಾಷಿಂಗ್ಟನ್: ರಷ್ಯಾದಿಂದ ಅಮೆರಿಕಕ್ಕೆ ಡೀಸೆಲ್ ಆಮದು ನಿರ್ಬಂಧಿಸುವ 2022ರ ಕಾನೂನನ್ನು ಮರುಪರಿಶೀಲಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ರಷ್ಯಾದ ಡೀಸೆಲ್ ಹೊತ್ತ ಹಡಗು ಅಮೆರಿಕದತ್ತ ಸಾಗುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಕಾನೂನು ಸೂಕ್ತವಾಗಿಲ್ಲದಿರಬಹುದು, ಪರಿಶೀಲಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ನಿಷೇಧ ತೆರವು ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಅಕ್ಟೋಬರ್ 9ರಂದು ಅಮೆರಿಕದ ಖಜಾನೆ ಇಲಾಖೆ ರಷ್ಯಾ ಮೂಲದ ಡೀಸೆಲ್ ಮಾರಾಟ, ಸಾಗಣೆ, ಇಳಿಸುವಿಕೆ ಮತ್ತು ಆಮದಿಗೆ 2027ರ ಏಪ್ರಿಲ್ 7ರವರೆಗೆ ವಿಶೇಷ ಅನುಮತಿ ನೀಡಿತ್ತು. ಈ ವಿನಾಯಿತಿ ಎಲ್ಲ ರಷ್ಯಾದ ಪೆಟ್ರೋಲಿಯಂ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ. 2022ರ ಏಪ್ರಿಲ್ 8ರಂದು ಜಾರಿಗೆ ಬಂದ ಕಾನೂನು ರಷ್ಯಾದ ಪೆಟ್ರೋಲಿಯಂ ಉತ್ಪನ್ನಗಳ ಆಮದನ್ನು ನಿಷೇಧಿಸಿತ್ತು. ನಿಷೇಧ ತೆರವಿಗೆ ಉಕ್ರೇನ್ ಯುದ್ಧ ಅಂತ್ಯ, ರಷ್ಯಾ ಸೇನೆಯ ಹಿಂತೆಗೆತ ಸೇರಿದಂತೆ ಹಲವು ಷರತ್ತುಗಳಿವೆ. ಇದಕ್ಕೆ ಖಜಾನೆ ಇಲಾಖೆಯ ವಿಶೇಷ ಅನುಮತಿ ಸಾಕಾಗುವುದಿಲ್ಲ ಎಂಬ…