ಹುಟ್ಟುಹಬ್ಬದಂದು ಕಾವೇರಿ ಗೃಹ ಪ್ರವೇಶ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೌತುಕದ ಅಡ್ಡೆಯಾಗಿ ಗುರುತಾಗಿರುವ ಮುಖ್ಯಮಂತ್ರಿಗಳ ನಿವಾಸ ಕಾವೇರಿ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ನಿವಾಸವನ್ನು ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ ನಡುವೆ ಭಾರೀ ಪೈಪೋಟಿಯೇ ಏರ್ಪಟ್ಟಿತ್ತು. ಅಂತೂ ಇಂತೂ ಅದನ್ನು ಗಿಟ್ಟಿಸಿಕೊಂಡಿದ್ದ ಯಡಿಯೂರಪ್ಪ ಈಗಿನ್ನೂ ಆ ಬಂಗಲೆಗೆ ಹೋಗಿಲ್ಲ. ಈ ಬಾರಿ ತಮ್ಮ ಹುಟ್ಟು ಹಬ್ಬದ ದಿನದಂದು ಬಿ.ಎಸ್.ವೈ. ಕಾವೇರಿ ಗೃಹ ಪ್ರವೇಯಶ ಮಾಡಲಿದ್ದಾರೆ.

ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸವಾಗಿತ್ತು ಇದೆ ಕಾವೇರಿ. ತಮ್ಮ ಅದೃಷ್ಟದ ಮನೆಯನ್ನು ಬಿಟ್ಟು ಕೊಡಲು ನಿರಾಕರಿಸುತ್ತಲೇ ಬಂದಿದ್ದ ಅವರು, ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವ ಕೆಜೆ ಜಾರ್ಜ್ ಅವರಿಗೆ ಹಂಚಿಕೆ ಮಾಡಿಸಿಕೊಂಡು ತಾವೇ ಅದರಲ್ಲಿ ವಾಸ್ತವ್ಯವಿದ್ದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಬಂಗಲೆಯನ್ನು ಬಿಟ್ಟುಕೊಡುವ ಅನಿವಾರ್ಯತೆ ಎದುರಾಯಿತಾದರೂ ಅದೇ ವೇಳೆಗಾಗಲೇ ಸಿದ್ದರಾಮಯ್ಯ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದವು. ಈ ಹುದ್ದೆಯ ನೆಪದಲ್ಲಾದರೂ ಕಾವೇರಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದರಾದರೂ ಸಫಲರಾಗಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ಈ ಬಂಗಲೆಯನ್ನು ಹಂಚಿಕೆ ಮಾಡಿಸಿಕೊಂಡರಾದರೂ ಈ ವರೆಗೂ ಗೃಹಪ್ರವೇಶ ಮಾಡಿಲ್ಲ. ತಮ್ಮ ಖಾಸಗಿ ನಿವಾಸ,  ಡಾಲರ್ಸ್ ಕಾಲೋನಿಯ ಧವಳಗಿರಿಯಲ್ಲೇ ವಾಸ್ತವ್ಯ ಹೂಡಿದ್ದರು. ಇದೀಗ ತಮ್ಮ ಹುಟ್ಟು ಹಬ್ಬದ ದಿನವೇ ಕಾವೇರಿ ನಿವಾಸಕ್ಕೆ ಅಧಿಕೃತ ಗೃಹಪ್ರವೇಶ ಮಾಡಲಿದ್ದಾರಂತೆ.

ಫೆಬ್ರವರಿ 27ರಂದು  78ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಿಎಂ ಯಡಿಯೂರಪ್ಪ ಅಂದೇ ಸಿಎಂ ನಿವಾಸ ಕಾವೇರಿಯಲ್ಲಿ ವಿಶೇಷ ಪೂಜೆ  ನೆರವೇರಿಸಿ  ಗೃಹ ಪ್ರವೇಶ ಮಾಡಲಿದ್ದಾರೆ.

Related posts