ಪಾಕಿಸ್ತಾನ ಪರ ಘೋಷಣೆ; ದೇಶದ್ರೋಹಿಗಳ ಪರ ವಕಾಲತ್ತು ಬೇಡ

ಚಿಕ್ಕಮಗಳೂರು: ಬೆಂಗಳೂರಿನಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಮೊಳಗಿದ ಘಟನೆ ಅತ್ಯಂತ ಖಂಡನೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.  ದೇಶದ್ರೋಹಿಗಳಿಗೆ ಕ್ಷಮೆ ಇರಬಾರದು. ಅವರ ಪರ ಯಾರು ವಕಾಲತ್ತು ವಹಿಸಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಜಿಲ್ಲಾ  ಕ್ರೀಡಾ ಉತ್ಸವದಲ್ಲಿ ಮಾತನಾಡಿದ  ಸಿ.ಟಿ.ರವಿ, ಪಾಕ್ ಪರ ಘೋಷಣೆ ಕೂಗಿದ  ಅಮೂಲ್ಯ ಲಿಯೋನ ಹಾಗೂ ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರದರ್ಶಿಸಿದ ಆರ್ದ್ರಾ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಆರೋಪಿಸಿದರು.

ಪಾಕಿಸ್ತಾನ ಪರ ಘೋಷಣೆ ಕೂಗುವುದು ದೇಶಭಕ್ತಿಯಲ್ಲ. ಇವರೆಲ್ಲ ತುಕಡೆ ಗ್ಯಾಂಗ್ ಯೋಜನೆಗಳ ಪ್ರಕಾರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಭಾರತಕ್ಕೆ ಮುಜಗರ ಉಂಟು ಮಾಡಿ ಪಾಕಿಸ್ತಾನ ಖುಷಿಪಡಿಸುವ ಕೆಲಸ ಮಾಡುತ್ತಿರುವ ಇಂಥವರಿಗೆ ಕಾನೂನೇ ತಕ್ಕ ಶಿಕ್ಷೆ ಕೊಡಲಿದೆ ಎಂದರು.

Related posts