ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿ ಇನ್ನು ಮುಂದೆ ಪಾಕಿಸ್ತಾನಿ

ಇಸ್ಲಾಮಾಬಾದ್ : ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿ ಇನ್ನು ಮುಂದೆ ಪಾಕಿಸ್ತಾನಿಯೂ ಹೌದು. ಇತ್ತ ಭಾರತದಲ್ಲಿ ಪೌರತ್ವ ಕಾಯಿದೆ ವಿಚಾರದಲ್ಲಿ ವಿವಾದ ಭುಗಿಲೆದ್ದಿದ್ದರೆ ಅತ್ತ ಪಾಕಿಸ್ತಾನದಲ್ಲಿನ ಪೌರತ್ವ ವಿಚಾರ ವಿಶ್ವದ ಕುತೂಹಲದ ಕೇಂದ್ರಬಿಂದುವಾಗಿದೆ, ಅದಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿ ಪ್ರಕರಣ ಉದಾಹರಣೆಯಾಗಿದೆ.

ವೆಸ್ಟ್ ಇಂಡೀಸ್ ಕ್ರಿಕೆಟಿಗ ಡರೇನ್ ಸ್ಯಾಮಿಗೆ ತನ್ನ ನೆಲದ ಪೌರತ್ವ ನೀಡುವುದನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಖಚಿತಪಡಿಸಿದೆ. ಮಾರ್ಚ್ 23 ರಂದು ಡರೇನ್ ಸ್ಯಾಮಿಗೆ ಪಾಕಿಸ್ತಾನದ ಅಧ್ಯಕ್ಷ ಅರಿಫ್ ಅಲ್ವಿ  ಪಾಕ್  ಪೌರತ್ವವನ್ನು ನೀಡಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಟ್ವೀಟ್ ಮಾಡಿದೆ.

ಪಾಕಿಸ್ತಾನದಲ್ಲಿ ಕ್ರಿಕೆಟ್ ಗಾಗಿ ಸಲ್ಲಿಸಿರುವ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ ಈ ಪೌರತ್ವ ನೀಡಲಾಗುತ್ತಿದೆ ಎಂದು ಪಾಕ್ ಸರ್ಕಾರ ಹೇಳಿದೆ.

Related posts