‘ದಿ ಬೆಸ್ಟ್ ಸಿಎಂ’: ಯಡಿಯೂರಪ್ಪ ಸಾಧನೆಗೆ ಬ್ರಿಟನ್ ಸರ್ಕಾರದಿಂದ ಕಿರೀಟ

ಬೆಂಗಳೂರು: ಸದ್ಯ ಕೊರೋನಾ ಸಂಕಟ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಈ ಕೊರೋನಾ ಸುಳಿಯಿಂದ ಪಾರಾಗಲು ವಿಶ್ವಸಮುದಾಯ ಪರದಾಡುತ್ತಿದೆ. ಚೀನಾದಲ್ಲಿ ಹುಟ್ಟಿ, ಪ್ರಪಂಚ ಪರ್ಯಟನೆ ಕೈಗೊಂಡಿರುವ ಕೊರೋನಾ ವೈರಾಣು ಬ್ರಿಟನ್, ಇಟಲಿ, ಅಮೆರಿಕಾವನ್ನು ಸ್ಮಶಾನವಾಗಿಸಿದೆ.
ಆದರೆ ಭಾರತದಲ್ಲಿ ಪರಿಸ್ಥಿತಿ ಐರೋಪ್ಯ ರಾಷ್ಟ್ರಗಳಷ್ಟು ವಿಷಮವಾಗಿಲ್ಲ. ದೇಶಾದ್ಯಂತ ಲಾಕ್’ಡೌನ್ ಜಾರಿಯಲ್ಲಿ ಇರುವುದರಿಂದಾಗಿ ಸೋಂಕಿನ ಪ್ರಮಾಣ ಕಡಿಮೆಯಿದೆ.

ಇದನ್ನೂ ಓದಿ.. 13 ರಾಜ್ಯಗಳಲ್ಲಿ ಲಾಕ್ ಡೌನ್ ವಿಸ್ತರಣೆ? 

ಇತ್ತ, ಕರ್ನಾಟಕ ಸರ್ಕಾರದ ಕ್ರಮಗಳು ಕೂಡಾ ಮೆಚ್ಚುಗೆಗೆ ಪಾತ್ರವಾಗಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಕೈಗೊಳ್ಳುತ್ತಿರುವ ಸಮರ್ಥ ನಿರ್ಧಾರಗಳು ಕೊರೋನಾ ಸೋಂಕನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.  ಇದೇ ವೇಳೆ, ರಾಜ್ಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹರಡದಂತೆ ತಡೆಗಟ್ಟಲು ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಬ್ರಿಟನ್ ಕಾನೂನು ಸಚಿವ ರಾಬರ್ಟ್ ಬಕ್ ಲ್ಯಾಂಡ್ ಕೊಂಡಾಡಿದ್ದಾರೆ.

ಇದನ್ನೂ ಓದಿ.. ಕರಾವಳಿ ಈಗ ಡೇಂಜರ್ ಝೋನ್?

ಭಾನುವಾರ ನಡೆದ ಬ್ರಿಟನ್’ನಲ್ಲಿರುವ ಕನ್ನಡಿಗರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕರ್ನಾಟದಲ್ಲಿ ಲಾಕ್’ಡೌನ್ ಜಾರಿಗೊಳಿಸಲು ತಮ್ಮ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳನ್ನು ವಿವರಿಸಿದ್ದರು. ಕನ್ನಡಿಗರ ರಕ್ಷಣೆ, ಸಹಕಾರ ಬಗ್ಗೆ ಅವರು ಭರವಸೆಯನ್ನೂ ನೀಡಿದ್ದರು. ಈ ವಿಚಾರಗಳನ್ನು ಪರಾಮರ್ಶಿಸಿದ ಬ್ರಿಟನ್ ಕಾನೂನು ಸಚಿವ ರಾಬರ್ಟ್ ಬಕ್ ಲ್ಯಾಂಡ್ ಅವರು ಯಡಿಯೂರಪ್ಪನವರ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೋನಾ ಕಾರಣಕ್ಕಾಗಿ ಮೋದಿಯವರು ಲಾಕ್’ಡೌನ್ ಘೋಷಣೆ ಮಾಡುವುದಕ್ಕೆ ಮುನ್ನವೇ ಸಿಎಂ ಯಡಿಯೂರಪ್ಪನವರು ಕರ್ನಾಟಕದಲ್ಲಿ ಲಾಕ್’ಡೌನ್ ಜಾರಿಗೊಳಿಸಿದ್ದ ನಿರ್ಧಾರ ಸಕಾಲಿಕ ಎಂಬುದು ಪ್ರಜ್ಞಾವಂತರ ಅಭಿಪ್ರಾಯ. ಅಷ್ಟೇ ಅಲ್ಲ ಈ ವಿಚಾರದಲ್ಲಿ ಯಡಿಯೂರಪ್ಪ ಅವರಿಗೆ ಎಲ್ಲಾ ರೀತಿಯ ಬೆಂಬಲ, ಸಹಕಾರ ನೀಡುವುದಾಗಿ ಮಾಜಿ ಮುಖ್ಯಮತ್ರಿಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾನಿ ಹೇಳಿರುವುದೂ ಇಲ್ಲಿ ಗಮನಾರ್ಹ.

ಇದನ್ನೂ ಓದಿ.. ಖುಷಿಪಡಿಸೋ ರೌಡಿ ಬೇಬಿ 

 

Related posts