ಹೆಚ್ಚುತ್ತಿರುವ ಸೋಂಕು, ನಿಲ್ಲದ ಸಾವು; ದೇಶದಲ್ಲಿ ಕೊರೋನಾ ತಲ್ಲಣ

ದೆಹಲಿ: ಚೀನೀ ವೈರಸ್ ಕೊರೋನಾ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಷ್ಟೇ ಅಲ್ಲ ಭಾರತದಲ್ಲೂ ತಾಂಡವ ನೃತ್ಯ ಮಾಡುವಂತಿದೆ. ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚುತ್ತಲೇ ಇದ್ದು, ಕೆಲವೇ ಗಂಟೆಗಳಲ್ಲಿ 62 ಮಂದಿ ಸಾವನ್ನಪ್ಪಿರುವುದನ್ನು ಗಮನಿಸಿದರೆ ಭಾರತವೂ ಸೇಫ್ ಅಲ್ಲ ಎಂಬುದು ಗೊತ್ತಾಗುತ್ತಿದೆ.

ಆರೋಗ್ಯ ಇಲಾಖೆ ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿದ ವರದಿಯಂತೆ ಆ ವರೆಗಿನ 24 ತಾಸುಗಳಲ್ಲಿ 62 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 934 ಕ್ಕೆ ಏರಿಕೆಯಾಗಿದೆ.

ಸಾವಿರದ ಗಡಿಯಲ್ಲಿರುವ ಸಾವಿನ ಸರಣಿ ಗಮನಿಸಿದರೆ ಭಾರತವೂ ಅಪಾಯದಲ್ಲಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ದೆಹಲಿ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಹರಡುತ್ತಿವೆ. ಈವರೆಗಿನ ಅಂಕಿ ಅಂಶ ಪ್ರಕಾರ 29,435 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ದೆಹಲಿ ರಾಜ್ಯಗಳಲ್ಲೇ ಕೊರೋನಾ ನಿಯಂತ್ರಣ ಪ್ರಯಾಸದ ಕೆಲಸವೆನಿಸಿದೆ.

  • ಮಹಾರಾಷ್ಟ್ರದಲ್ಲಿ  8,590 ಮಂದಿಯಲ್ಲಿ ಸೋಂಕು ,
  • ಗುಜರಾತ್’ನಲ್ಲಿ  3,548 ಮಂದಿಯಲ್ಲಿ ಸೋಂಕು
  • ದೆಹಲಿಯಲ್ಲಿ 3,108 ಮಂದಿಯಲ್ಲಿ ಸೋಂಕು

ಈ ನಡುವೆ ದೇಶದ ವಿವಿಧೆಡೆ ಈ ವರೆಗೂ 6,868 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಇದನ್ನೂ ಓದಿ.. ‘ಯಡಿಯೂರಪ್ಪ ದಿ ಬೆಸ್ಟ್ ಸಿಎಂ’: ಕೊರೋನಾ ನಿಯಂತ್ರಣಕ್ಕೆ ಬ್ರಿಟನ್ ಕಿರೀಟ

 

Related posts