ಸಮುದ್ರ ಆಹಾರದಲ್ಲಿ ಅಧಿಕ ಪೋಷಕಾಂಶಗಳಿರುತ್ತದೆ. ಇದರಲ್ಲಿ ಕಬ್ಬಿಣದಂಶ ಹಾಗೂ ಸತುವಿನ ಅಂಶ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ ದೇಹಕ್ಕೆ ಅವಶ್ಯಕವಿರುವ ಒಮೆಗಾ-3 ಕೊಬ್ಬಿನಂಶವರುತ್ತದೆ. ನಿತ್ಯ ಜೀವನದ ಆನೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮುದ್ರಾಹಾರಗಳು ರಾಮಬಾಣದಂತೆ. ಆರೋಗ್ಯವಂತ ಹೃದಯ ಮೀನು ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಸಮುದ್ರಾಹಾರಗಳಲ್ಲಿ ಕೊಬ್ಬಿನಾಸಂ ಕಡಿಮೆ ಇದ್ದು, ಓಮೆಗಾ-3 ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಅಲ್ಲದೆ ಹೃದಯವನ್ನು ಆರೋಗ್ಯವನ್ನಾಗಿಸುತ್ತದೆ. ವಾರಕ್ಕೆ ಒಂದು ಬಾರಿಯಾದರೂ ಮೀನು ಸೇವನೆ ಉತ್ತಮ ರಕ್ತನಾಳಗಳ ಶುದ್ದೀಕರಣ ರಕ್ತನಾಳಗಳ ಶುದ್ಧಿಕಾರ್ಯದಲ್ಲೂ ಮೀನಿನ ಮಾಂಸ ಸೇವನೆ ಪ್ರಮುಖ ಪಾತ್ರವಹಿಸುತ್ತದೆ. ಖಿಊಖಔಒಃಔSIS ಖISಏ ಕೂಡ ಕಡಿಮೆಯಾಗುತ್ತದೆ. ಸಮುದ್ರಾಹಾರದಲ್ಲಿರುವುದು ಇಪಿಎ ಮತ್ತು ಡಿಹೆಚ್ ಎ, ಒಮೆಗಾ-3 ಕೊಬ್ಬಿನಾಂಶವು, ದೇಹದಲ್ಲಿ ಉತ್ಪತ್ತಿಯಾಗುವ ಇIಅಔSಂಓಔIಆS, ಅಂದರೆ ರಕ್ತನಾಳಗಳಲ್ಲಿ ರಕ್ತೆ ಹೆಪ್ಪುಗಟ್ಟಲು ಕಾರಣವಾಗುವ ಒಂದು ರೀತಿಯ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಸಂದಿನೋವುಗಳ ಸಮಸ್ಯೆ ಇತ್ತೀಚಿನ…
Category: ವೈವಿದ್ಯ
ಮಹಾಶಿವರಾತ್ರಿ ವೈಭವ; ಎಲ್ಲೆಲ್ಲೂ ವೃತ ಜಾಗರಣೆಯ ಕೈಂಕರ್ಯ
ಮಂಗಳೂರು: ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ ಗರಿಗೆದರಿದೆ. ಆಸ್ತಿಕ ಬಂಧುಗಳು ಪರಮೇಶ್ವರನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂತು. ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಭಕ್ತರು ವ್ರತಾಚರಣೆ, ಜಾಗರಣೆಯ ಜತೆಗೆ ಶಿವ ದೇವಾಲಯಗಳಲ್ಲಿನ ಉತ್ಸವಗಳಲ್ಲಿ ಪಾಲ್ಗೊಂಡರು. ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ಮಂಜುನಾಥನಿಗೆ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಸಾಗರವು ಈ ವಿಶೇಷ ಕೈಂಕರ್ಯವನ್ನು ಸಾಕ್ಷೀಕರಿಸಿತು. ಮಂಗಳೂರಿನ ಪುರಾಣ ಪ್ರಸಿದ್ಧ ಕದ್ರಿ ಮಂಜುನಾಥನ ದೇಗುಲ, ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿ, ಕರಾವಳಿ ದಸರಾದ ಕೇಂದ್ರಸ್ಥಾನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಗಳಲ್ಲೂ ವಿಶೇಷ ಪೂಜೆ, ಉತ್ಸವಗಳು ಗಮನ ಸೆಳೆದವು. ಉತ್ತರಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಪ್ರವಾಸಿಗರ ದಂಡೇ ಜಮಾಯಿಸಿತ್ತು. ಮುರುಡೇಶ್ವರದಲ್ಲೂ ಶಿವನಿಗಾಗಿ ವಿಶೇಷ ಉತ್ಸವ ನೆರವೇರಿತು. ಕಡಲ ಮಧ್ಯದ ಈ ದೇಗುಲ ಶಿವರಾತ್ರಿ ವೈಭವದಿಂದಾಗಿ ಭಕ್ತಸಮೂಹದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಶಿವರಾತ್ರಿಯ ಉಪವಾಸ ವ್ರತಾಚರಣೆ ಪಾಲನೆ ಮಾಡಿದ ಭಕ್ತರು ಬೆಳಗ್ಗಿನಿಂದಲೇ ದೇವಾಲಯಗಳಿಗೆ ತೆರಳಿ ಭಕ್ತಿ…
ಏಕಾಏಕಿ ಕಿಸ್ಸಿಂಗ್ ನಿರ್ಬಂಧ ; ಮಮಕಾರಕ್ಕೆ ಅಂಕುಶ
ಬೀಜಿಂಗ್: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್‍ಗೆ ಈ ವರೆಗೂ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆನ್ನಲಾಗಿದೆ. 30 ಸಾವಿರಕ್ಕೂ ಹೆಚ್ಚು ಮಂದಿಗೆ ಈ ಸೋಂಕು ತಗುಲಿದ್ದು ಮಾರುಕಟ್ಟೆ ವ್ಯವಸ್ಥೆ ಕೂಡಾ ಏರುಪೇರಾಗಿದೆ. ಚೀನಾದ ವುಹಾನ್‍ನಿಂದ ವ್ಯಾಪಿಸಿರುವ ಕೊರೊನಾ ವೈರಸ್ ಇಡೀ ಜಗತ್ತನ್ನೇ ವ್ಯಾಪಿಸುತ್ತಿದೆ. ಚೀನಾದಲ್ಲಿ ಕರೋನ ವೈರಸ್ ಮರಣ ಮೃದಂಗ ಬಾರಿಸುತ್ತಲೇ ಇದ್ದು ಜನರನ್ನು ಮನೆಯಿಂದ ಹೊರಬಾರದಂತೆ ದಿಗ್ಬಂಧನ ವಿಧಿಸಿದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕೊರೊನಾ ವೈರಸ್ ಕಿಸ್ ಪ್ರಕ್ರಿಯೆಗೂ ಲಗಾಮು ಹಾಕಿದೆ. ವೈರಸ್ ಭೀತಿ ಹಿನ್ನೆಲೆಯಲ್ಲಿ ಯಾರೂ ಕೂಡಾ ಕಿಸ್ ಕೊಟ್ಟು ಪರಸ್ಪರ ಮುದ್ದಿಸೋಲ್ಲ. ಮಮತೆಗೂ ಈ ವೈರಸ್ ಅಂಕುಶ ಹಾಕಿದೆ. ಅಷ್ಟೇ ಅಲ್ಲ ಇದು ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿಗಳ ಪಾಲಿಗೂ ಸಂದಿಗ್ಧತೆ ಎದುರಾಗುವಂತೆ ಮಾಡಿದೆ. ತೈವಾನ್ ಹಾಗೂ ಚೀನಾದ ಬಹುತೇಕ ಕಡೆ ಸಿನಿಮಾ, ಸೀರಿಯಲ್ ಚಿತ್ರೀಕರಣವನ್ನು ಸ್ಥಗಿತಗೊಳಿಸಿದೆ. ಇದೆ ವೇಳೆ ತೈವಾನ್‍ನಲ್ಲಿ ಸರ್ಕಾರ…
ಈ ವಿದ್ಯಾರ್ಥಿನಿ ವಯಸ್ಸು 105 ; ಈಗ 4ನೇ ತರಗತಿ
ತಿರುವನಂತಪುರಂ: ಈ ಅಜ್ಜಿಯ ವಯಸ್ಸಿಗೂ, ಇವರು ಪರೀಕ್ಷೆ ಬರೆಯುತ್ತಿರುವ ಸನ್ನಿವೇಶಕ್ಕೂ ತುಲನೆ ಮಾಡಬೇಡಿ. ಕಲಿಕೆಗೆ ಪ್ರಾಯ ಅಡ್ಡಿಯಾಗದು ಎಂಬುದಕ್ಕೆ ಈ ಅಜ್ಜಿ ಉದಾಹರಣೆಯಾಗಿದ್ದಾರೆ. ಶಾಲೆಗೇ ಹೋಗಲು ಮಕ್ಕಳು ಹಿಂದೇಟು ಹಾಕುವುದು ಸಹಜ. ಹೀಗಿರುವಾಗ ಕೇರಳದ ಕೊಲ್ಲಂನಲ್ಲಿ ಶತಾಯುಷಿ ಅಜ್ಜಿ ನಾಲ್ಕನೇ ತರಗತಿ ಪರೀಕ್ಷೆ ಬರೆದು ಜಗತ್ತಿನ ಗಮನ ಸೆಳೆದಿದ್ದಾರೆ. ಇವರ ವಯಸ್ಸು ಭಾಗೀರಥಿ. ಇದೀಗ ಇವರ ವಯಸ್ಸು 105 ವರ್ಷಗಳು. ಕೇರಳ ಸರ್ಕಾರದ ಸಾಕ್ಷರತಾ ಮಿಷನ್ ನಡಿ ಆಯೋಜಿಸಲಾದ ಪರೀಕ್ಷೆಯಲ್ಲಿ ಈ ಅಜ್ಜಿ ಭಗೀರಥ ಪ್ರಯತ್ನ ಮಾಡಿದ್ದಾರೆ. ಓದಲೇಬೇಕೆಂಬ ಹಂಬಲವಿದ್ದರೂ ಈವರೆಗೂ ಶಾಲೆಗೇ ಹೋಗಲಾಗಲಿಲ್ಲವಂತೆ. ಹಾಗಾಗಿ ತಾನೇ ಓದಿ ಕಲಿತು ಸಾಕ್ಷರತಾ ಮಿಷನ್ ಮೂಲಕ ಪರೀಕ್ಷೆ ಬರೆದಿದ್ದಾರೆ. ಚಿಕ್ಕವಳಿದ್ದಾಗಲೇ ಶಾಲೆಗೇ ಹೋಗಬೇಕೆಂಬ ಆಸೆ ಇತ್ತಾದರೂ ಅದಾಗಲೇ ತಾಯಿಯನ್ನು ಕಳೆದುಕೊಂಡಿದ್ದರು. ಅನಂತರ ಕುಟುಂಬಕ್ಕೆ ಭಗೀರಥಿಯೇ ಆಧಾರವಾಗಿದ್ದರಿಂದ ಶಾಲೆಯತ್ತ ಮುಖ ಮಾಡದೆ ಕೆಲಸದತ್ತ ತೆರಳಬೇಕಿತ್ತಂತೆ. ಅಷ್ಟೇ ಅಲ್ಲ ಶಾಲೆಗೇ ಹೋಗಬೇಕಾದ…
ಬೊಜ್ಜು- ಆರೋಗ್ಯದ ಮೇಲೆ ದುಷ್ಪಾರಿಣಾಮ ಅಷ್ಠಿಷ್ಟಲ್ಲ
ಆಧುನಿಕ ಜೀವನ ಶೈಲಿ, ಆಹಾರ ಪದ್ದತಿ, ಆರೋಗ್ಯದ ಮೇಲೆ ಬೀರುವ ದುಷ್ಪಾರಿಣಾಮ ಅಷ್ಠಿಷ್ಟಲ್ಲ. ಅದರಲ್ಲೂ ನಾವು ತಿನ್ನುವ ಜಂಕ್ ಪುಢ್ ಗಳಲ್ಲಿ ವಿಷದ ಅಂಶವೇ ಹೆಚ್ಚಾಗಿದ್ದು, ಇದು ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಬೊಚ್ಚಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವ ತೊಂದರೆ. ಮದುವೆಯಾದ ಮಹಿಳೆಯರಲ್ಲಂತೂ ಇದು ಕೊಂಚ ಹೆಚ್ಚೆಂದೆ ಹೇಳಬೇಕು. ಬೊಚ್ಚು ಆನೇಕಾನೇಕ ತೊಂದರೆಗಳನ್ನು ಉಂಟು ಮಾಡುತ್ತದೆ.ಸುಸ್ತಾಗುವಿಕೆ, ಮೈಕೈನೋವು, ಖಿನ್ನತೆ, ಬಂಜೆತನ, ಮಾನಸಿಕ ಒತ್ತಡ ಸೇರಿದಂತೆ ಹಲವು ರೀತಿಯ ತೊಂದರೆಗಳು ಬೊಚ್ಚಿನಿಂದ ಉಂಟಾಗುತ್ತದೆ. ಬೊಚ್ಚಿನಿಂದಾಗುವ ತೊಂದರೆ ದಪ್ಪಗಿರುವವರ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿ ಇರುತ್ತದೆ. ಹೀಗಾಗಿ ರಕ್ತದೊತ್ತಡ ಜಾಸ್ತಿಯಾಗಿ ಹೃದಯಾಘಾತ ಉಂಟಾಗುವ ಸಾದ್ಯತೆ ಹೆಚ್ಚು. ಬಂಜೆತನ ಸಮಸ್ಯೆ: ಪ್ರತಿಯೊಬ್ಬ ಹೆಣ್ಣಿಗೂ ತಾಯಿಯಾಗುವ ಆಸೆ ಇದ್ದೇಇರುತ್ತೆ. ಆದರೆ ಬೊಚ್ಚಿನ ಸಮಸ್ಯೆಯಿಂದ ಹಾರ್ಮೋನುಗಳಲ್ಲಿ ವ್ಯತ್ಯಯವಾಗಿ ಅನಿಯಮಿತ ಮುಟ್ಟು ಕಾಣಿಸಿಕೊಂಡು ಇದು ಬಂಜೆತನಕ್ಕೆ ಕಾರಣವಾಗುತ್ತದೆ.. ಖಿನ್ನತೆ: ಹಾರ್ಮೋನುಗಳ ವ್ಯತ್ಯಯದಿಂದ…
ಕರಾವಳಿಯ ಈ ಜಾತ್ರೆಯಲ್ಲಿ ವೀಳ್ಯವೇ ಹರಕೆ ವೀಳ್ಯವೇ ಪ್ರಸಾದ
ಕರಾವಳಿಯ ಈ ದೇವಾಲಯದಲ್ಲಿ ಜಾತ್ರೆ ವಿಶೇಷವೆಂದರೆ ಇಷ್ಟಾರ್ಥ ಸಿದ್ದಿಗಾಗಿ ವೀಳ್ಯದೆಲೆ ಹಾಗೂ ಅಡಿಕೆ ಸಲ್ಲಿಸಲಾಗುತ್ತದೆ. ಭಕ್ತರು ನೀಡುವ ವೀಳ್ಯದೆಲೆ ಅಡಿಕೆಯ ಇಲ್ಲಿ ಮಹಾ ಪ್ರಸಾದ. ಪ್ರಸಾದಕ್ಕಾಗಿಯೇ ಭಕ್ತರು ಮುಗಿಬೀಳ್ತಾರೆ. ಸುತ್ತ ದಟ್ಟ ಕಾನನ. ಹಚ್ಚ ಹಸುರಿನ ಗುಡ್ಡದ ತಪ್ಪಲಲ್ಲಿ ಪುರಾತನ ದೇವಾಲಯ. ಇದು ಉತ್ತರಕನ್ನಡ ಜಿಲ್ಲೆಯ ಅಮದಳ್ಳಿಯ ಬಂಟ ದೇವಸ್ಥಾನ. ಶ್ರಾವಣ ಮಾಸದ ಸೋಮವಾರ ಬಂತೆಂದರೆ ಈ ಮಾರ್ಗದಲ್ಲಿ ಭಕ್ತಸಾಗರವೇ ತುಂಬಿರುತ್ತದೆ. ಬೆಳಗಾಯಿತೆಂದರೆ ತಲೆಯ ಮೇಲೆ ತುಂಬಿದ ಬುಟ್ಟಿ. ಕೈಯಲ್ಲಿ ಚೀಲ ಹಿಡಿದ ಭಕ್ತರು ಹೆಜ್ಜೆ ಹಾಕುವುದು ಕಾಣಸಿಗುತ್ತದೆ. ಶಕ್ತಿದೇವರಾದ ಬಂಟದೇವ ಅನಾದಿ ಕಾಲದಿಂದ ಇಲ್ಲಿ ನೆಲೆ ನಿಂತಿದ್ದಾನೆ. ಮರದ ಬುಡದಲ್ಲಿದ್ದ ಬಂಟನಿಗೆ ಊರವರೇ ಶ್ರದ್ದಾಭಕ್ತಿಯಿಂದ ಗುಡಿಯೊಂದನ್ನ ನಿರ್ಮಿಸಿದರು. ಹಿಂದೆ ಚಿಕ್ಕ ಗುಡಿಯಲ್ಲಿದ್ದ ದೇವಾಲಯ ಈಗ ಹೆಂಚಿನ ಮಾಡು ಕಂಡಿದೆ. ಭಕ್ತರ ಇಷ್ಟಾರ್ಥವನ್ನು ಈ ದೇವ ಪೂರೈಸುತ್ತಾ ಬಂದಿದ್ದಾನೆ. ಹೀಗಾಗಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ…
ಆರೋಗ್ಯ ಕಾಪಾಡಲು ಮತ್ಸ್ಯಾಹಾರ
ಸಮುದ್ರ ಆಹಾರದಲ್ಲಿ ಅಧಿಕ ಪೋಷಕಾಂಶಗಳಿರುತ್ತದೆ. ಇದರಲ್ಲಿ ಕಬ್ಬಿಣದಂಶ ಹಾಗೂ ಸತುವಿನ ಅಂಶ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ ದೇಹಕ್ಕೆ ಅವಶ್ಯಕವಿರುವ ಒಮೆಗಾ-3 ಕೊಬ್ಬಿನಂಶವರುತ್ತದೆ. ನಿತ್ಯ ಜೀವನದ ಆನೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮುದ್ರಾಹಾರಗಳು ರಾಮಬಾಣದಂತೆ. ಆರೋಗ್ಯವಂತ ಹೃದಯ ಮೀನು ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಸಮುದ್ರಾಹಾರಗಳಲ್ಲಿ ಕೊಬ್ಬಿನಾಸಂ ಕಡಿಮೆ ಇದ್ದು, ಓಮೆಗಾ-3 ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಅಲ್ಲದೆ ಹೃದಯವನ್ನು ಆರೋಗ್ಯವನ್ನಾಗಿಸುತ್ತದೆ. ವಾರಕ್ಕೆ ಒಂದು ಬಾರಿಯಾದರೂ ಮೀನು ಸೇವನೆ ಉತ್ತಮ ರಕ್ತನಾಳಗಳ ಶುದ್ದೀಕರಣ ರಕ್ತನಾಳಗಳ ಶುದ್ಧಿಕಾರ್ಯದಲ್ಲೂ ಮೀನಿನ ಮಾಂಸ ಸೇವನೆ ಪ್ರಮುಖ ಪಾತ್ರವಹಿಸುತ್ತದೆ. ಖಿಊಖಔಒಃಔSIS ಖISಏ ಕೂಡ ಕಡಿಮೆಯಾಗುತ್ತದೆ. ಸಮುದ್ರಾಹಾರದಲ್ಲಿರುವುದು ಇಪಿಎ ಮತ್ತು ಡಿಹೆಚ್ ಎ, ಒಮೆಗಾ-3 ಕೊಬ್ಬಿನಾಂಶವು, ದೇಹದಲ್ಲಿ ಉತ್ಪತ್ತಿಯಾಗುವ ಇIಅಔSಂಓಔIಆS, ಅಂದರೆ ರಕ್ತನಾಳಗಳಲ್ಲಿ ರಕ್ತೆ ಹೆಪ್ಪುಗಟ್ಟಲು ಕಾರಣವಾಗುವ ಒಂದು ರೀತಿಯ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಸಂದಿನೋವುಗಳ ಸಮಸ್ಯೆ ಇತ್ತೀಚಿನ…
