ದೀನ ದಯಾಳ ಉಪಾಧ್ಯಾಯರು ಆದರ್ಶದ ದೀಪಸ್ತಂಭ: ದತ್ತಾತ್ರೇಯ ಹೊಸಬಾಳೆ

ಬೆಂಗಳೂರು: ಸಾವಿರಾರು ಜನರನ್ನು ಪ್ರೇರೇಪಿಸಿದ ರಾಷ್ಟ್ರಪುರುಷ ದೀನದಯಾಳ ಉಪಾಧ್ಯಾಯರು. ತಮ್ಮ ವ್ಯಕ್ತಿತ್ವ, ಕರ್ತೃತ್ವ, ಸಾಧನೆ, ಚಿಂತನೆಯ ಮೂಲಕ ದೀನ ದಯಾಳ ಉಪಾಧ್ಯಾಯರು ಆಧಾರ ದೀಪಸ್ತಂಭವಾಗಿದ್ದಾರೆ. ಅವರ ಬದುಕು ಗಂಗಾಪ್ರವಾಹವಿದ್ದಂತೆ. ಅದರಲ್ಲಿ ನಮ್ಮ ಪಾತ್ರ ಎಷ್ಟು ಎನ್ನುವುದು ಮುಖ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರ ವತಿಯಿಂದ ಜೆಪಿನಗರದ ಆರ್ ವಿ ಡೆಂಟಲ್ ಕಾಲೇಜಿನಲ್ಲಿ ನಡೆದ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ 109ನೇ ವರ್ಷದ ಜಯಂತಿಯ ನಿಮಿತ್ತ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಯಂಸೇವಕ ಎಂಬ ವಿಶೇಷವಾದ ಕಲ್ಪನೆ ಇಂದು ಸಹಜವಾಗಿದೆ. ಯಾವ ಸಂಘವೂ ಯಾರನ್ನೂ ನಿರ್ಮಾಣ ಮಾಡುವುದಿಲ್ಲ, ಬದಲಾಗಿ ಇರುವವರನ್ನು ಸೇರಿಸಿ ಸಂಘಟನೆ ರೂಪುಗೊಳ್ಳುತ್ತದೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಯಂಸೇವಕರ ನಿರ್ಮಾಣ ಮಾಡುವ ಸಂಘಟನೆ. ಅಂತಹ ಶ್ರೇಷ್ಠ, ಆದರ್ಶ, ಪ್ರೇರಣಾದಾಯಿ ಸ್ವಯಂಸೇವಕ ದೀನ ದಯಾಳ…

ಮಂಗಳೂರು ದಸರಾ ನಾಡಿನ ಹೆಮ್ಮೆ; ಸಚಿವ ರಾಮಲಿಂಗಾ ರೆಡ್ಡಿ

ಮಂಗಳೂರು: ನಾಡಿನ ಮಹಾಉತ್ಸವವಾಗಿರುವ ಮೈಸೂರು ದಸರಾದಷ್ಟೇ ಮಂಗಳೂರು ದಸರಾ ವೈಭವಯುತವಾಗಿ ನಡೆಯುತ್ತಿದೆ. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ದಸರಾ ನಾಡಿನ ಹೆಮ್ಮೆಯ ಉತ್ಸವವಾಗಿ ರೂಪುಗೊಂಡಿದೆ ಎಂದು ರಾಜ್ಯ ಧಾರ್ಮಿಕ ದತ್ತಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ‘ಮಂಗಳೂರು ದಸರಾ-2025’ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಜನಾರ್ಧನ ಪೂಜಾರಿ ಒಬ್ಬ ಅಪ್ರತಿಮ ಸಂಘಟಕ. ರಾಜಕೀಯ ನಾಯಕರಿಗೂ ಅವರು ಮಾರ್ಗದರ್ಶಕ. ಅವರ ನೇತೃತ್ವದಲ್ಲೇ ನಡೆಯುತ್ತಿರುವ ಮಂಗಳೂರು ದಸರಾವು ವರ್ಷದಿಂದ ವರ್ಷಕ್ಕೆ ವೈಭವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಂಗಳೂರು ದಸರಾ ಮಹೋತ್ಸವ ವೈಭವಯುತವಾಗಿ ನಡೆಯುತ್ತಿದ್ದು, ಮುಂದಿನ ವರ್ಷದಿಂದ ಮೈಸೂರು,…

ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ; ನಿತಿನ್ ಗಡ್ಕರಿ ಜೊತೆ ಸೋಮಣ್ಣ ಚರ್ಚೆ

ನವದೆಹಲಿ: ಕೇಂದ್ರ ರೈಲ್ವೇ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ನವರು ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ತುಮಕೂರು ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು ಈ ವೇಳೆ, ಸ್ಮಾರ್ಟ್ ಸಿಟಿ ತುಮಕೂರು ನಗರದ ಬೈಪಾಸ್ ನಿರ್ಮಾಣ ಹಂತ 02ರ ಮಲ್ಲಸಂದ್ರ (NH-73) ಯಿಂದ ವಸಂತನರಸಾಪುರ (NH-48) ದವರೆಗೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಕಾರ್ಯಸಾಧ್ಯತೆಯನ್ನು (Alignment) ಮರುಪರಿಶೀಲಿಸಲು ಅಥವಾ ತಾಂತ್ರಿಕ ತಜ್ಞರ ತಂಡವನ್ನು ನಿಯೋಜಿಸಲು ಸಂಬಂಧಪಟ್ಟವರಿಗೆ ನಿರ್ದೇಶಿಸಲು ಸಚಿವರಲ್ಲಿ ಕೋರಲಾಯಿತು ಎಂದು ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ತುಮಕೂರು – ಕೊರಟಗೆರೆ – ಮಧುಗಿರಿ – ಪಾವಗಡ – ರಾಯದುರ್ಗ – ಬಳ್ಳಾರಿ (225 ಕಿಮೀ) ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಬೇಕೆಂದು ಮನವಿ ಮಾಡಿರುವುದಾಗಿ ವಿ ಸೋಮಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.…

ರಾಜೀವ್ ಗಾಂಧಿ ವಿವಿಗೆ ಇದೆ 1500 ಕ್ಕೂ ಹೆಚ್ಚು ಅಂಗಸಂಸ್ಥೆಗಳು, ಕಾಲೇಜುಗಳು

ಬೆಂಗಳೂರು: ವೈದ್ಯಕೀಯ ಕಲಿಕೆ ಎಂದರೆ ಕೇವಲ ವೈದ್ಯರು, ನರ್ಸ್‌ಗಳು, ಔಷಧ ಶಾಸ್ತ್ರಜ್ಞರು ಅಥವಾ ಸಂಶೋಧಕರನ್ನು ತಯಾರಿಸುವುದಲ್ಲ. ಜ್ಞಾನದೊಂದಿಗೆ ಕರುಣೆ, ಮಾನವೀಯತೆ ಹಾಗೂ ವೃತ್ತಿಪರತೆಯನ್ನೂ ಹೊಂದಿರುವ ಹೊಸ ತಲೆಮಾರನ್ನು ರೂಪಿಸಬೇಕಾಗಿದೆ ವೈದ್ಯಕೀಯ ಶಿಕ್ಷಣ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಪ್ರತಿಪಾದಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಸಚಿವರು, ವೈದ್ಯಕೀಯ ಕ್ಷೇತ್ರದಲ್ಲಿರುವವರು ತಾಂತ್ರಿಕ ಕೌಶಲ್ಯದ ಜೊತೆಗೆ ಸಂವಹನ ಕೌಶಲ್ಯ ಹಾಗೂ ಮನವೀಯತೆಯನ್ನೂ ಬೆಳೆಸಿಕೊಳ್ಳಬೇಕು. ವೈದ್ಯರಾದವರು ರೋಗಿಗಳೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ, ಹೇಗೆ ವ್ಯವಹರಿಸುತ್ತಾರೆ ಎನ್ನುವುದೂ ಮುಖ್ಯ. ವೃತ್ತಿಯ ಜೊತೆಗೆ ಸೇವೆಗೂ ಅವಕಾಶವಿರುವ ಕ್ಷೇತ್ರ ಎಂದರೆ ವೈದ್ಯಕೀಯ ಕ್ಷೇತ್ರ. ಈ ಕ್ಷೇತ್ರದಲ್ಲಿರುವ ಶಿಕ್ಷಕರು ವೃತ್ತಿಯ ಜೊತೆಗೆ ಸೇವಾ ಮನೋಭಾವವನ್ನೂ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು. ವೈದ್ಯಕೀಯ ಶಿಕ್ಷಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ…

‘ಶಾಲೆಗಳ ಬಗ್ಗೆ ಗಮನಕೊಡದ ಶಿಕ್ಷಣ ಸಚಿವ ಮಧು ಬಂಗಾರಪ್ಪ’: BJP ರಾಜ್ಯಾಧ್ಯಕ್ಷ ಆರೋಪ

ಬೆಂಗಳೂರು: ಅನ್ನ ಭಾಗ್ಯ ‘ಕಾಂಗ್ರೆಸ್ಸಿಗರ ಕಿಸೆಯಿಂದ ಬಂದ ಭಾಗ್ಯವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ‘ಹಸಿವು ಮುಕ್ತ ಭಾರತ’ಕ್ಕಾಗಿ ತೊಟ್ಟ ಮಹಾ ಸಂಕಲ್ಪದ ಫಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಐ.ವೈ.ವಿಜಯೇಂದ್ರ ಹೇಳಿದ್ದಾರೆ. ಅಣ್ಣ ಭಾಗ್ಯ ಯೋಜನೆ ವಿಚಾರದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ವಿಜಯೇಂದ್ರ, ಕೇಂದ್ರದ ‘ಗರೀಬ್ ಕಲ್ಯಾಣ್’ ಯೋಜನೆಯ ಮೂಲಕ ದೇಶದ ಉದ್ದಗಲಕ್ಕೂ ಪಸರಿಸಿದ ಬಡವರ “ಸ್ವಾಭಿಮಾನದ ಭಾಗ್ಯ” ಎಂದಿದ್ದಾರೆ. ಸಚಿವ @Madhu_Bangarapp ನವರೇ ಅನ್ನ ಭಾಗ್ಯ ‘ಕಾಂಗ್ರೆಸ್ಸಿಗರ ಕಿಸೆಯಿಂದ ಬಂದ ಭಾಗ್ಯವಲ್ಲ, ಪ್ರಧಾನಿ ಶ್ರೀ @narendramodi ಜೀ ಅವರು ‘ಹಸಿವು ಮುಕ್ತ ಭಾರತ’ಕ್ಕಾಗಿ ತೊಟ್ಟ ಮಹಾ ಸಂಕಲ್ಪದ ಫಲ ‘ಗರೀಬ್ ಕಲ್ಯಾಣ್’ ಯೋಜನೆಯ ಮೂಲಕ ದೇಶದ ಉದ್ದಗಲಕ್ಕೂ ಪಸರಿಸಿದ ಬಡವರ “ಸ್ವಾಭಿಮಾನದ ಭಾಗ್ಯ” ನಿಮ್ಮ ಕಲ್ಪನೆಯಲ್ಲಿ “ಅನ್ನಭಾಗ್ಯ ಜನರಿಗೆ ನೀಡುವ… pic.twitter.com/YKR9Jt9tQ8 — Vijayendra Yediyurappa (@BYVijayendra) September 23, 2025…

ಮಳೆ ಸಾಧ್ಯತೆ; ಸೆ 24ರಿಂದ 27ರ ವರೆಗೆ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್

ಬೆಂಗಳೂರು : ರಾಜ್ಯ ಕರಾವಳಿಯಲ್ಲಿ ಈ ವಾರ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ. ಸೆಪ್ಟೆಂಬರ್ 24ರಿಂದ 27ರ ವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳ ಬಗ್ಗೆ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬಿಜೆಪಿ ಹೋರಾಟಕ್ಕೆ ಸಂದ ಜಯ: ‘ಕ್ರೈಸ್ತ ಜಾತಿಯ ಜೊತೆಗೆ ಹಿಂದೂ ಜಾತಿ’ ವಿವಾದಕ್ಕೆ ತೆರೆ

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗವು ಕ್ರೈಸ್ತ ಎಸ್‍ಸಿ ಜಾತಿಗಳನ್ನು ಜಾತಿ ಗಣತಿ ಪಟ್ಟಿಯಲ್ಲಿ ಮರೆಮಾಚಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಕ್ರೈಸ್ತ ಜಾತಿಯ ಜೊತೆಗೆ ಹಿಂದೂ ಜಾತಿಯ ಹೆಸರುಗಳನ್ನು ನಮೂದಿಸಿದ್ದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿತ್ತು. ಈ ಸಂಬಂಧ ಬಿಜೆಪಿ ನಾಯಕರು ರಾಜ್ಯಪಾಲರಿಗೂ ದೂರು ನೀಡಿತ್ತು. ಇದೀಗ ಈ ತಪ್ಪನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರಿಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ಬಿಜೆಪಿ, ಇದು ತಮ್ಮ ಪಕ್ಷದ ಹೋರಾಟಕ್ಕೆ ಸಂದ ಜಯವಾಗಿದೆ ಎಂದಿದೆ. ಮತಾಂತರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ಕೊಡುವ ಈ ಪ್ರಯತ್ನದ ವಿರುದ್ಧ ಧ್ವನಿ ಎತ್ತಿದ ಎಲ್ಲಾ ಸಮಾಜಗಳ ಮಠಾಧೀಶರು, ಪ್ರಮುಖರು ಮತ್ತು ರಾಜಕೀಯ ನಾಯಕರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ತಡವಾಗಿಯಾದರೂ ಸಮಯೋಚಿತ ನಿರ್ಧಾರ ಕೈಗೊಂಡ ಆಯೋಗಕ್ಕೆ ಕೃತಜ್ಞತೆಗಳು ಎಂದಿದೆ. ಹಿಂದುಳಿದ ವರ್ಗಗಳ ಆಯೋಗವು…

ಸೆ 26 ರಿಂದ 5 ದಿನಗಳ ಕಾಲ ಕೆಆರ್ ಎಸ್ ನಲ್ಲಿ “ಕಾವೇರಿ ಆರತಿ

ಬೆಂಗಳೂರು: ಕನ್ನಡ ನಾಡಿನ ಜೀವನದಿ “ಕಾವೇರಿ ಆರತಿ” ಎಂಬ ಐದು ದಿನಗಳ ಭವ್ಯ ಕಾರ್ಯಕ್ರಮವು ಕೆಆರ್ ಎಸ್ ನಲ್ಲಿ ಸೆಪ್ಟೆಂಬರ್ 26 ರಿಂದ ಆಯೋಜನೆಯಾಗಿದೆ. ಶುಕ್ರವಾರ ಸಾಯಂಕಾಲ 5 ಗಂಟೆಗೆ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಲ‌ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ “ಕಾವೇರಿ ಆರತಿ” ಕಾರ್ಯಕ್ರಮಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವರಿ ಸಚಿವ ಎನ್. ಚೆಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠಾಧ್ಯಕ್ಷರಾದ ಶ್ರೀ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ, ಕೃಷಿ ಸಚಿವರು…

‘ಪುಸ್ತಕಗೂಡು’ ಅಭಿಯಾನ; ಪ್ರಾಯೋಗಿಕ ಪ್ರಯತ್ನ ಯಶಸ್ಸು

ಬೆಂಗಳೂರು: ರಾಜ್ಯದ ಗ್ರಾಮೀಣ ಜನರಲ್ಲಿ ಅಕ್ಷರದ ಪ್ರೀತಿ ಬೆಳೆಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಜಾರಿಗೆ ತಂದ ‘ಪುಸ್ತಕಗೂಡು’ ಅಭಿಯಾನವು ಯಶಸ್ವಿಯಾಗಿ ಮುಂದುವರೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಬಸ್ ನಿಲ್ದಾಣ, ಮಾರುಕಟ್ಟೆ ಮುಂತಾದ ಜನದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ ಪುಸ್ತಕಗಳನ್ನು ಶೇಖರಿಸಿ ಇಡುವುದರಿಂದ ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಓದುವ ತವಕ ಹೆಚ್ಚುತ್ತದೆ. ಇದೀಗ ಕಲಬುರಗಿ ಜಿಲ್ಲೆ, ಚಿತ್ತಾಪೂರ ತಾಲ್ಲೂಕಿನ ದಿಗ್ಗಾಂವ ಗ್ರಾಮ ಪಂಚಾಯತಿಯ ಬಸ್‌ ನಿಲ್ದಾಣದಲ್ಲಿ ಸುಂದರ ಮತ್ತು ಸುಸಜ್ಜಿತ ‘ಪುಸ್ತಕ ಗೂಡು’ ಸ್ಥಾಪನೆಯಾಗಿದೆ. ಈಗಾಗಲೇ ರಾಜ್ಯದ ಗ್ರಾಮೀಣ ಗ್ರಂಥಾಲಯಗಳನ್ನು ಡಿಜಿಟಲ್ ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿದ್ದು, ಗ್ರಾಮೀಣರ ಬೌದ್ಧಿಕ ವಿಕಸನಕ್ಕೆ ಅಗಾಧ ಕೊಡುಗೆ ನೀಡುತ್ತಿದೆ. ಇದಕ್ಕೆ ಪೂರಕವಾಗಿ ‘ಪುಸ್ತಕಗೂಡು’ ಯೋಜನೆ ಜನಸಾಮಾನ್ಯರಲ್ಲಿ ಓದಿನ ಅಭಿರುಚಿ ಬೆಳೆಸುತ್ತಿದೆ. ಯುವಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಅಗತ್ಯವಾದ ಸೂಕ್ತ ಸವಲತ್ತುಗಳನ್ನು…

ಭಾರತೀಯ ಬಾಹ್ಯಾಕಾಶ, ಸಾರಿಗೆ ಮತ್ತು ಶುದ್ಧ ಇಂಧನ ಭವಿಷ್ಯದಲ್ಲಿ ಹೈಡ್ರೋಜನ್ ಪ್ರಮುಖ ಪಾತ್ರ: ಇಸ್ರೋ ಅಧ್ಯಕ್ಷ

ಬೆಂಗಳೂರು: ಭಾರತದ ಬಾಹ್ಯಾಕಾಶ ಮಿಷನ್‌ಗಳು, ಸಾರಿಗೆ ಮತ್ತು ಶುದ್ಧ ಇಂಧನ ಭವಿಷ್ಯದಲ್ಲಿ ಹೈಡ್ರೋಜನ್ ಪ್ರಮುಖ ಮತ್ತು ಪರಿವರ್ತನಾತ್ಮಕ ಪಾತ್ರ ವಹಿಸಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದರು. ಅವರು ಅಲಯನ್ಸ್ ವಿಶ್ವವಿದ್ಯಾಲಯ ಮತ್ತು ಐಐಎಸ್‌ಸಿ ಸಂಯುಕ್ತ ಆಯೋಜನೆಯ ಹೈಡ್ರೋಜನ್ ಇಂಧನ ತಂತ್ರಜ್ಞಾನಗಳು ಮತ್ತು ಭವಿಷ್ಯದ ಪ್ರವೃತ್ತಿಗಳು ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಡಾ. ನಾರಾಯಣನ್ ಅವರು ಜಿಎಸ್ಎಲ್‌ವಿ ಮಾರ್ಕ್–III ರಾಕೆಟ್‌ನಲ್ಲಿ ಲಿಕ್ವಿಡ್ ಹೈಡ್ರೋಜನ್ ಉಪಯೋಗಿಸಿರುವ ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಭಾರತ ಸಾಧಿಸಿದ್ದ ಪ್ರಗತಿಯನ್ನು ಉದಾಹರಿಸಿದ್ರು. ಕಳೆದ ವರ್ಷ ಬಾಹ್ಯಾಕಾಶದಲ್ಲಿ 100-ವಾಟ್ ಹೈಡ್ರೋಜನ್ ಇಂಧನಕೋಶ ಪ್ರದರ್ಶಿಸಿ, ಈಗ 20 ಕೆಡಬ್ಲ್ಯೂ ಆವೃತ್ತಿಯ ಪರೀಕ್ಷೆಗಳು ನಡೆಯುತ್ತಿವೆ ಎಂಬ ಮಾಹಿತಿ ನೀಡಿದರು. ಸಾರಿಗೆ ಕ್ಷೇತ್ರದಲ್ಲಿಓ ಹೈಡ್ರೋಜನ್ ಬಸ್‌ಗಳು ಹಾಗೂ ಇಂಧನಕೋಶಗಳ ಬಳಕೆ ಗುರುತಿಸಿಕೊಂಡಿದ್ದು, 2025ರ ಜೂನ್‌ನಲ್ಲಿ ಐದು ಹೈಡ್ರೋಜನ್ ಬಸ್‌ಗಳು ವಾಣಿಜ್ಯ ಸೇವೆಗೆ ಸೇರಿವೆ ಎಂದರು. ಹೈಡ್ರೋಜನ್ ಸುರಕ್ಷತೆಯ…