ದೆಹಲಿ: ಭಾರತ ಚೀನಾ ಗಡಿ ಭಾಗದಲ್ಲಿ ಡ್ರಾಗನ್ ಸೈನಿಕರ ರಗಳೆ ಹೆಚ್ಚಿದ ಹಿನ್ನೆಲೆಯಲ್ಲಿ ಗಡಿ ಕಾಯುವ ಯೋಧರನ್ನು ಭೇಟಿ ಮಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಮ್ಮ ಸೈನಿಕರ ಯೋಗಕ್ಷೇಮ ಆಲಿಸಿ ಅವರನ್ನು ಹುರುರಿದುಂಬಿಸಿದ್ದರು. ಅನಂತರ ಬಿಹಾರ ರೆಜಿಮೆಂಟ್’ನ ಯೋಧರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಸೇನಾಧಿಕಾರಿಗಳ ಜೊತೆ ಅಮನಾಥ ಕ್ಷೇತ್ರಕ್ಕೂ ತೆರಳಿ ಪರಮೇಶ್ವರನ ದರ್ಶನ ಪಡೆದರು. ಆ ಸಂದರ್ಭದ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. Raksha Mantri Shri @rajnathsingh met the soldiers from Bihar Regiment at Lukung during his visit to forward areas in Ladakh. He had a brief interaction with them. pic.twitter.com/81YS0T960a — रक्षा मंत्री कार्यालय/ RMO India (@DefenceMinIndia) July 19, 2020…
Category: ಆದ್ಯಾತ್ಮ
ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ವೀಡಿಯೋ ಕುತೂಹಲ
ಕುಡ್ಲದ ಕುವರಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅನೇಕ ದಿನಗಳ ನಂತರ ಮತ್ತೆ ಸುದ್ದಿಗೆ ಬಂದಿದ್ದಾರೆ. ಅವರು ಸಾನಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿರುವ ವಿಚಾರದಿಂದಾಗಿಯೇ ಅವರು ಸುದ್ದಿಯ ಮುನ್ನಲೆಗೆ ಬಂದಿರೋದು. ಅಂದ ಹಾಗೆ ಅವರು ಅಮ್ಮಂದಿರ ದಿನದ ಅಂಗವಾಗಿ ಹಂಚಿಕೊಂಡ ಸಂಗತಿ ಸಾಕಷ್ಟು ಮಂದಿಗೆ ಹಿತವೆನಿಸಿದಂತಿದೆ. ಹಾಗಾಗಿ ಬಹುಜನರು ಶಿಲ್ಪಾ ಶೆಟ್ಟಿ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ತಾಯಂದಿರ ದಿನದಂದು ನಟಿ ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋ ತುಣುಕೊಂದನ್ನು ಪೋಸ್ಟ್ ಮಾಡಿದ್ದಾರೆ. ಮಗಳು ಸಮಿಷಾ ಜೊತೆಗಿರುವ ಹಾಗೂ ಮಗ ವಯಾನ್ ಬರೆದಿರುವ ಸಂದೇಶವನ್ನೊಳಗೊಂಡ ವೀಡಿಯೋ ತುಣುಕು ಇದಾಗಿದೆ. ಇದು ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಇದನ್ನೂ ಓದಿ.. ಹಳ್ಳಿ ಶೈಲಿಯ ‘ಚಿಕನ್ ಚಾಪ್ಸ್’ಗೆ ಟೇಸ್ಟೀ ಟಚ್
ಕೊರೋನಾ ಓಡಿಸಲು ಅಂದು ‘ಚಪ್ಪಾಳೆ’, ಇದೀಗ ‘ನವದೀಪ’.. ಏನಿದು ವಿಶೇಷ ಗೊತ್ತಾ?
ಬೆಂಗಳೂರು: ಕೊರೋನಾ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನರು ದೇವಾಲಯ, ಮಂದಿರಗಳಿಗೆ ಹೋಗುವಂತಿಲ್ಲ. ಇದೇ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ಹೊಸ ಅಭಿಯಾನಕ್ಕೆ ಮುನ್ನುಡಿ ಬರೆದಿವೆ. ಕೆಲ ದಿನಗಳ ಹಿಂದೆ ಕೊರೋನಾ ವಿರುದ್ದ ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರು. ಅಂದು ದಿನವಿಡೀ ಮನೆಯಲ್ಲೇ ಇದ್ದು, ಸಂಜೆ ಚಪ್ಪಾಳೆ ತಟ್ಟಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಸೇನಾನಿಗಳಿಗೆ ಧನ್ಯವಾದ ಹೇಳುವಂತೆ ಕರೆ ನೀಡಿದ್ದರು. ಅಂದು ದೇಶವ್ಯಾಪಿ ಚಪ್ಪಾಳೆಯ ಸದ್ದಷ್ಟೇ ಅಲ್ಲ, ಹಲವರು ಶಂಖನಾದ, ಘಂಟೆ-ಜಾಗಟೆಗಳನ್ನು ಭಾರಿಸಿ ಹೊಸದೊಂದು ತರಂಗ ಸೃಷ್ಟಿಸಿದ್ದರು. ಇದೀಗ ರಾಮನವಮಿ ಸರದಿ. ಈ ಬಾರಿಯ ರಾಮನವಮಿಯನ್ನು ಕೊರೋನಾ ಸಂಹಾರಕ್ಕೆ ಮೀಸಲಿಡಲು ಆಸ್ತಿಕ ಸಮುದಾಯ ಸಲಹೆ ಮಾಡಿದೆ. ಹಾಗಾಗಿ ಹಿಂದೂ ಸಂಘಟನೆಗಳು ರಾಮ ನವಮಿಯ ದಿನವಾದ ಗುರುವಾರ ಸಂಜೆ ‘ನವದೀಪ’ ಕೈಂಕರ್ಯ ನೆರವೇರಿಸುವಂತೆ ಕರೆ ನೀಡಿವೆ. ಇದನ್ನೂ ಓದಿ.. ಕೊರೋನಾ…
ರಾಮಚಂದ್ರಾಪುರ ಮಠದಲ್ಲಿ ಕುತೂಹಲದ ಕೇಂದ್ರಬಿಂದುವಾದ ಜಶೋದಾ ಬೆನ್ ಮೋದಿ
ಶಿವಮೊಗ್ಗ: ಪ್ರಧಾನಿ ಮೋದಿ ಪತ್ನಿ ಜಶೋದಾ ಬೆನ್ ಅವರು ರಾಜ್ಯದ ಪ್ರಮುಖ ಮಠವಾಗಿರುವ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು. ರಾಮಚಂದ್ರಾಪುರಮಠದ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ಬುಧವಾರ ನಡೆದ ಕೋಟಿ ವಿಷ್ಣು ಸಹಸ್ರನಾಮ ಪಠಣ ಸಮರ್ಪಣೆ ಕಾರ್ಯಕ್ರಮದಲ್ಲಿ ಜಶೋದಾ ಬೆನ್ ಭಾಗಿಯಾಗಿದ್ದರು. ಛತ್ರ ಸಮರ್ಪಣೆ, ಸೋಪಾನಮಾಲೆ ನಿರ್ಮಾಣಕ್ಕೆ ಶಿಲಾನ್ಯಾಸ, ಗೋ ಬಂಧಮುಕ್ತಿ, ಗೋಶಾಲೆ ಲೋಕಾರ್ಪಣೆ, ಗೋ ಆಸ್ಪತ್ರೆ ಉದ್ಘಾಟನೆ, ಗೋ ಮ್ಯೂಸಿಯಂ ಲೋಕಾರ್ಪಣೆಯ ಕೃಷ್ಣಾರ್ಪಣ್ ಧಾರ್ಮಿಕ ಸಭೆಯಲ್ಲೂ ಅವರು ಪಾಲ್ಗೊಂಡಿದ್ದರು. ಇದೇ ವೇಳೆ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ರಜತ ಛತ್ರ ಸಮರ್ಪಣೆ ಮೂಲಕ ತಮ್ಮ ವೈಯಕ್ತಿಕ ಹರಕೆಯನ್ನು ತೀರಿಸಿದರು. ಈ ವೇಳೆ ಮಾತನಾಡಿದ ಜಶೋದಾ ಬೆನ್, ಸಾವಿರಾರು ಭಕ್ತರ ನಡುವೆ ದೇವರ ಆರಾಧನೆ ಮಾಡುವ ಈ ಕ್ಷಣ ನನ್ನ ಪಾಲಿಗೆ ಧನ್ಯತೆಯ ಕ್ಷಣ ಎಂದರು.
ದೇಗುಲಗಳ ಮೂಲಕ ಗೋವುಗಳ ಪಾಲನೆ, ಆರಾಧನೆ; ಸಚಿವ ಪೂಜಾರಿ ಕೈಂಕರ್ಯಕ್ಕೆ ಪ್ರಶಂಶೆ
(ಜಯ ಪ್ರಕಾಶ್) ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ. ಪೂಜೆ ಪುನಸ್ಕಾರ, ವೈದಿಕ ವಿಧಿ ವಿಧಾನಗಳಿಗಷ್ಟೇ ದೇವಾಲಯಗಳು ಸೀಮಿತವಾಗಿಲ್ಲ. ಹಿಂದೂ ಸಂಸ್ಕೃತಿ-ಪರಂಪರೆ ಉಳಿಸುವಲ್ಲೂ ಪ್ರಮುಖ ಪಾತ್ರ ವಹಿಸಲು ಈ ಧಾರ್ಮಿಕ ಕೇಂದ್ರ ಸಜ್ಜಾಗುತ್ತಿವೆ. ಸಾಮಾನ್ಯವಾಗಿ ದೇವಾಲಯ ಬೆರಳೆಣಿಕೆಯ ದೇವರ ಮೂರ್ತಿ ಪೂಜೆಗೆ ಸೀಮಿತವಾಗುವುದುಂಟು. ಇದೀಗ ಆ ದೇವಾಲಯಗಳು ಮುಕ್ಕೋಟಿ ದೇವರನ್ನು ಹೊತ್ತುಕೊಂಡಿರುವ ಗೋವುಗಳ ಆರಾಧನೆಯ ತಾಣವಾಗಲಿದೆ. ಇದಕ್ಕೆಂದು ವೇದಿಕೆ ಕಲ್ಪಿಸಿದ್ದಾರೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ. ರಾಜ್ಯದ ಪ್ರಮಖ 25 ದೇವಾಲಯಗಳ ವ್ಯಾಪ್ತಿಯಲ್ಲಿ ಬೃಹತ್ ಗೋಶಾಲೆಗಳನ್ನು ನಿರ್ಮಿಸಲು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕ್ರಮ ಆರಂಭಿಸಿದ್ದಾರೆ. ಪ್ರಕೃತಿಯನ್ನು ಆರಾಧಿಸುವುದು ಹಿಂದೂ ಸಂಸ್ಕೃತಿಯ ಒಂದು ಭಾಗ. ಅದರಲ್ಲೂ ಹಾಲು ನೀಡುವ ಹಸುಗಳು ಹಿಂದೂಗಳ ಪಾಲಿಗೆ ಜೀವಂತ ದೈವ. ಆದರೆ ಇದೇ ಗೋವುಗಳು ಕಟುಕರ…
ಮಹಾಶಿವರಾತ್ರಿ ವೈಭವ; ಎಲ್ಲೆಲ್ಲೂ ವೃತ ಜಾಗರಣೆಯ ಕೈಂಕರ್ಯ
ಮಂಗಳೂರು: ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ ಗರಿಗೆದರಿದೆ. ಆಸ್ತಿಕ ಬಂಧುಗಳು ಪರಮೇಶ್ವರನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂತು. ಮಹಾ ಶಿವರಾತ್ರಿಯ ಹಿನ್ನೆಲೆಯಲ್ಲಿ ಭಕ್ತರು ವ್ರತಾಚರಣೆ, ಜಾಗರಣೆಯ ಜತೆಗೆ ಶಿವ ದೇವಾಲಯಗಳಲ್ಲಿನ ಉತ್ಸವಗಳಲ್ಲಿ ಪಾಲ್ಗೊಂಡರು. ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ಮಂಜುನಾಥನಿಗೆ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಸಾಗರವು ಈ ವಿಶೇಷ ಕೈಂಕರ್ಯವನ್ನು ಸಾಕ್ಷೀಕರಿಸಿತು. ಮಂಗಳೂರಿನ ಪುರಾಣ ಪ್ರಸಿದ್ಧ ಕದ್ರಿ ಮಂಜುನಾಥನ ದೇಗುಲ, ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿ, ಕರಾವಳಿ ದಸರಾದ ಕೇಂದ್ರಸ್ಥಾನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಗಳಲ್ಲೂ ವಿಶೇಷ ಪೂಜೆ, ಉತ್ಸವಗಳು ಗಮನ ಸೆಳೆದವು. ಉತ್ತರಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಪ್ರವಾಸಿಗರ ದಂಡೇ ಜಮಾಯಿಸಿತ್ತು. ಮುರುಡೇಶ್ವರದಲ್ಲೂ ಶಿವನಿಗಾಗಿ ವಿಶೇಷ ಉತ್ಸವ ನೆರವೇರಿತು. ಕಡಲ ಮಧ್ಯದ ಈ ದೇಗುಲ ಶಿವರಾತ್ರಿ ವೈಭವದಿಂದಾಗಿ ಭಕ್ತಸಮೂಹದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಶಿವರಾತ್ರಿಯ ಉಪವಾಸ ವ್ರತಾಚರಣೆ ಪಾಲನೆ ಮಾಡಿದ ಭಕ್ತರು ಬೆಳಗ್ಗಿನಿಂದಲೇ ದೇವಾಲಯಗಳಿಗೆ ತೆರಳಿ ಭಕ್ತಿ…
