ರಾಮಚಂದ್ರಾಪುರ ಮಠದಲ್ಲಿ ಕುತೂಹಲದ ಕೇಂದ್ರಬಿಂದುವಾದ ಜಶೋದಾ ಬೆನ್ ಮೋದಿ

ಶಿವಮೊಗ್ಗ: ಪ್ರಧಾನಿ ಮೋದಿ ಪತ್ನಿ ಜಶೋದಾ ಬೆನ್ ಅವರು ರಾಜ್ಯದ ಪ್ರಮುಖ ಮಠವಾಗಿರುವ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.

ರಾಮಚಂದ್ರಾಪುರಮಠದ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ಬುಧವಾರ ನಡೆದ ಕೋಟಿ ವಿಷ್ಣು ಸಹಸ್ರನಾಮ ಪಠಣ ಸಮರ್ಪಣೆ ಕಾರ್ಯಕ್ರಮದಲ್ಲಿ ಜಶೋದಾ ಬೆನ್ ಭಾಗಿಯಾಗಿದ್ದರು. ಛತ್ರ ಸಮರ್ಪಣೆ, ಸೋಪಾನಮಾಲೆ ನಿರ್ಮಾಣಕ್ಕೆ ಶಿಲಾನ್ಯಾಸ, ಗೋ ಬಂಧಮುಕ್ತಿ, ಗೋಶಾಲೆ ಲೋಕಾರ್ಪಣೆ, ಗೋ ಆಸ್ಪತ್ರೆ ಉದ್ಘಾಟನೆ, ಗೋ ಮ್ಯೂಸಿಯಂ ಲೋಕಾರ್ಪಣೆಯ ಕೃಷ್ಣಾರ್ಪಣ್ ಧಾರ್ಮಿಕ ಸಭೆಯಲ್ಲೂ ಅವರು ಪಾಲ್ಗೊಂಡಿದ್ದರು.

ಇದೇ ವೇಳೆ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಾಲಯದಲ್ಲಿ ರಜತ ಛತ್ರ ಸಮರ್ಪಣೆ ಮೂಲಕ ತಮ್ಮ ವೈಯಕ್ತಿಕ ಹರಕೆಯನ್ನು ತೀರಿಸಿದರು.
ಈ ವೇಳೆ ಮಾತನಾಡಿದ ಜಶೋದಾ ಬೆನ್, ಸಾವಿರಾರು ಭಕ್ತರ ನಡುವೆ ದೇವರ ಆರಾಧನೆ ಮಾಡುವ ಈ ಕ್ಷಣ ನನ್ನ ಪಾಲಿಗೆ ಧನ್ಯತೆಯ ಕ್ಷಣ ಎಂದರು.

Related posts