ನ್ಯೂಯಾರ್ಕ್: ಧಾರ್ಮಿಕ ಹಾಗೂ ಸಾಮಾಜಿಕ ವಿಭಜನೆಗಳನ್ನು ನಿವಾರಿಸಲು ಜ್ಞಾನ ಮಾತ್ರ ಸಾಕಾಗುವುದಿಲ್ಲ. ಸೇವೆ, ಪ್ರೀತಿ ಮತ್ತು ಗೌರವವನ್ನು ದೈನಂದಿನ ಬದುಕಿನ ಭಾಗವಾಗಿಸುವ ನಿರಂತರ ಅಭ್ಯಾಸ ಅಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ‘ಒಂದು ಜಗತ್ತು, ಒಂದು ಮಾನವೀಯತೆ’ ಕಾರ್ಯಕ್ರಮದಲ್ಲಿ ಧಾರ್ಮಿಕ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಗತ್ತಿನ ವಿವಿಧ ಧಾರ್ಮಿಕ ಪರಂಪರೆಗಳಲ್ಲಿ ಶಾಂತಿ, ಏಕತೆ ಮತ್ತು ಸಹಬಾಳ್ವೆಗೆ ಅಗತ್ಯವಾದ ಜ್ಞಾನ ಈಗಾಗಲೇ ಇದೆ. ಆದರೆ ಆ ಜ್ಞಾನವು ಮಾನವ ನಡವಳಿಕೆಯಲ್ಲಿ ಪ್ರತಿಫಲಿಸುವಂತೆ ಮಾಡುವುದೇ ಸವಾಲು ಎಂದರು. ಜ್ಞಾನವಿದ್ದರೂ ವೈಯಕ್ತಿಕ ಆಸೆ ಮತ್ತು ಪ್ರಲೋಭನೆಗಳಿಂದ ಮನುಷ್ಯರು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ತಮ್ಮದೇ ಉದಾಹರಣೆ ನೀಡಿದ ಭಾಗವತ್, ಮಧುಮೇಹವಿದ್ದರೂ ಸಿಹಿ ತಿನ್ನಲು ನೆಪ ಹುಡುಕುವಂತೆಯೇ ಸಾಮಾಜಿಕ ವಿಚಾರಗಳಲ್ಲೂ ಆಗುತ್ತದೆ ಎಂದರು. “ಬೌದ್ಧಿಕವಾಗಿ ಶಿಕ್ಷಣ ನೀಡುವುದರಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ.…
Category: ಪ್ರಮುಖ ಸುದ್ದಿ
‘ಮುಸ್ಲಿಮರು ಭಾರತದಲ್ಲಿ ಇರಬಾರದು ಎಂದರೆ ಆತ ಹಿಂದೂ ಅಲ್ಲ’: ಮೋಹನ್ ಭಾಗವತ್
ನ್ಯೂಯಾರ್ಕ್: ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾರಾದರೂ ಹಿಂದೂ ಭಾವಿಸಿದರೆ, ಅವರು ಹಿಂದೂಗಳಾಗಿ ಉಳಿಯುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ‘ಒಂದು ಜಗತ್ತು, ಒಂದು ಮಾನವೀಯತೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಎಲ್ಲ ಧರ್ಮಗಳು ಮತ್ತು ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು ಎಂದು ಪ್ರತಿಪಾದಿಸಿದರು. 2018ರಲ್ಲಿ ಮುಸ್ಲಿಂ ಸಮುದಾಯದವರೊಂದಿಗಿನ ಸಂವಾದವನ್ನು ನೆನಪಿಸಿಕೊಂಡ ಭಾಗವತ್, ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯಲ್ಲಿ ಮುಸ್ಲಿಮರ ಸ್ಥಾನವೇನು, ಅವರನ್ನು ಭಾರತದಿಂದ ಹೊರಹಾಕಲಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿತ್ತು ಎಂದು ಹೇಳಿದರು. ಅದಕ್ಕೆ ‘ಇಲ್ಲ, ಅದು ಹಿಂದುತ್ವವಲ್ಲ’ ಎಂದು ಉತ್ತರಿಸಿದ್ದಾಗಿ ತಿಳಿಸಿದರು. ವಿಭಿನ್ನ ನಂಬಿಕೆಗಳು ಒಂದೇ ಅಂತಿಮ ಸತ್ಯದತ್ತ ಸಾಗುವ ಮಾರ್ಗಗಳಾಗಿವೆ. ವೈವಿಧ್ಯತೆಯು ಪ್ರಕೃತಿಯ ನಿಯಮವಾಗಿದ್ದು, ಅದರ ಹಿಂದಿರುವ ಸತ್ಯ ಏಕತೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗೌರವಿಸುವುದು ಅಗತ್ಯ ಎಂದರು.…
KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಿಐಡಿ ವಶಕ್ಕೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಸಿಐಡಿ ವಶಕ್ಕೆ ಪಡೆದಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಶೀಟ್‌ಗಳಲ್ಲಿ ಅಂಕ ತಿದ್ದುಪಡಿ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಗಳ ಕುರಿತು ಸಿಐಡಿ ವಿಶೇಷ ತನಿಖಾ ತಂಡ ವಿಚಾರಣೆ ನಡೆಸುತ್ತಿದೆ. ಆಗಸ್ಟ್ 28ರಂದು ಸತತ ಹಲವು ಗಂಟೆಗಳ ಕಾಲ ಜ್ಞಾನೇಂದ್ರ ಕುಮಾರ್ ಅವರನ್ನು ವಿಚಾರಣೆ ನಡೆಸಿದ ಅಧಿಕಾರಿಗಳು, ತನಿಖೆಗೆ ಸಮರ್ಪಕವಾಗಿ ಸಹಕರಿಸದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಒಎಂಆರ್ ಶೀಟ್ ತಿದ್ದುಪಡಿಯಲ್ಲಿ ಜ್ಞಾನೇಂದ್ರ ಕುಮಾರ್ ಅವರ ಪಾತ್ರದ ಕುರಿತು ಕೆಲವು ಮಹತ್ವದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಅಭ್ಯರ್ಥಿಗಳಿಗೆ ಕೆಲವು ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ತರಬೇತಿ ನೀಡಿದ ಆರೋಪಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.…
ಗ್ರ್ಯಾಂಡ್ ಮದರ್ಸ್ ಡೇ: ಹನೂರಿನ ಕ್ರಿಸ್ತರಾಜ ಶಾಲೆಯಲ್ಲಿ ಅಜ್ಜಿ-ಮೊಮ್ಮಕ್ಕಳ ಅಪೂರ್ವ ಸಮ್ಮಿಲನ
(ವರದಿ: ಮಹದೇವಸ್ವಾಮಿ ಜಿ. ಗೌಡ) ಚಾಮರಾಜನಗರ: ಪುಟಾಣಿ ಮಕ್ಕಳ ಹೆಜ್ಜೆ, ಅಜ್ಜಿಯರ ನಗು ಹಾಗೂ ಬಾಂಧವ್ಯದ ಸಂಭ್ರಮಕ್ಕೆ ಹನೂರಿನ ಕ್ರಿಸ್ತರಾಜ ಶಾಲೆ ಸಾಕ್ಷಿಯಾಯಿತು. ಶಾಲೆಯಲ್ಲಿ ಶನಿವಾರ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗಾಗಿ ಆಯೋಜಿಸಿದ್ದ ಗ್ರ್ಯಾಂಡ್ ಮದರ್ಸ್ ಡೇ ಕಾರ್ಯಕ್ರಮ ಅಜ್ಜಿ-ಮೊಮ್ಮಕ್ಕಳ ನಡುವಿನ ಪ್ರೀತಿಯ ಬಂಧವನ್ನು ಅನಾವರಣಗೊಳಿಸಿತು. ಶಾಲೆಯ ವ್ಯವಸ್ಥಾಪಕ ಫಾದರ್ ಸಂಜಯ್ ಕುಮಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳನ್ನು ಕೇವಲ ಅಂಕಗಳ ಯಂತ್ರಗಳನ್ನಾಗಿ ರೂಪಿಸುವುದಲ್ಲ, ಪ್ರಗತಿಪರ ಚಿಂತನೆ ಹಾಗೂ ಸಾಮಾಜಿಕ ಪ್ರಜ್ಞೆ ಹೊಂದಿರುವ ಉತ್ತಮ ಪ್ರಜೆಗಳನ್ನಾಗಿ ಬೆಳೆಸುವುದು ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದೆ ಎಂದರು. ಮಕ್ಕಳಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಹೊರತರುವಲ್ಲಿ ಶಿಕ್ಷಕರ ಪರಿಶ್ರಮ ಮಹತ್ವದ್ದಾಗಿದೆ. ಮಕ್ಕಳನ್ನು ಹುರಿದುಂಬಿಸಲು ಅಮೂಲ್ಯ ಸಮಯ ನೀಡಿ ಆಗಮಿಸಿದ ಪೋಷಕರು ಹಾಗೂ ಅಜ್ಜಿಯರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿ ಶಿಕ್ಷಣ ಸಂಯೋಜಕ (ಇಸಿಒ) ಮಹೇಶ್ ಮಾತನಾಡಿ,…
ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥರ ಚಾತುರ್ಮಾಸ್ಯ ವೈಭವ
ಮೈಸೂರು: ನಗರದ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ 23ನೇ ಚಾತುರ್ಮಾಸ್ಯ ವೈಭವದಿಂದ ನಡೆಯುತ್ತಿದೆ. ಚಾತುರ್ಮಾಸ್ಯದ ಅಂಗವಾಗಿ ಸ್ವಾಮೀಜಿಯವರು ಗೋಪೂಜೆ ನೆರವೇರಿಸಿದರು. ಬಳಿಕ ವಿಶ್ವ ಪ್ರಾರ್ಥನಾ ಮಂದಿರದಲ್ಲಿ ಹಯಗ್ರೀವ ಜಯಂತಿಯನ್ನು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಶ್ರೀಚಕ್ರ ಪೂಜೆಯೊಂದಿಗೆ ಸ್ವಾಮೀಜಿಯವರಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ವಾನ್ ಪ್ರಜ್ವಲ್ ರಂಗರಾಜು ಹಾಗೂ ತಂಡದಿಂದ ಪೂರ್ಣಿಮಾ ಸಂಗೀತ ಸೇವೆ ನಡೆಯಿತು. ಬಳಿಕ ಪವಮಾನ ಹೋಮ ಹಾಗೂ ಪೂರ್ಣಾಹುತಿ ನೆರವೇರಿತು. ಸಂಜೆ ಪೌಂಡರೀಕ ಮಂಟಪದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ‘ವಿಷ್ಣುಪುರಾಣ’ ಕಥಾ ಮಾಲಿಕೆಯ ಕುರಿತು ಪ್ರವಚನ ನೀಡಿದರು. ವಿಷ್ಣುಪುರಾಣದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶಗಳನ್ನು ಭಕ್ತರಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಶ್ರಮಕ್ಕೆ…
ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸು ಶಕ್ತಿ ಅಗತ್ಯ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ರಾಘವೇಶ್ವರ ಶ್ರೀ
ಕಾರವಾರ: ವಾಹನ ಚಲಿಸಲು ಇಂಧನ ಹಾಗೂ ನಿಯಂತ್ರಣ ಶಕ್ತಿ ಅಗತ್ಯವಿರುವಂತೆ, ದೇಹವೆಂಬ ವಾಹನ ಚಲಿಸಲು ಮನಸ್ಸು ಮತ್ತು ಓಜಸ್ಸು ಎಂಬ ಶಕ್ತಿಗಳು ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶನಿವಾರ ‘ಅನ್ನಂ ಬ್ರಹ್ಮ’ ಮಾಲಿಕೆಯ ಪ್ರವಚನ ನೀಡಿದ ಶ್ರೀಗಳು, ಮನಸ್ಸು ದೇಹದ ನಿಯಂತ್ರಣ ಶಕ್ತಿಯಾಗಿದ್ದು, ಅನ್ನದ ಸೂಕ್ಷ್ಮಾಂಶದಿಂದ ಮನಸ್ಸು ನಿರ್ಮಾಣವಾಗುತ್ತದೆ. ದೇಹದ ಶಕ್ತಿಯಾದ ಓಜಸ್ಸೂ ಆಹಾರದಿಂದಲೇ ಪೋಷಿಸಲ್ಪಡುತ್ತದೆ ಎಂದು ವಿವರಿಸಿದರು. ಆತ್ಮಸಾಧನೆಯ ಉದ್ದೇಶದಿಂದ ಕೈಗೊಳ್ಳುವ ಉಪವಾಸದಿಂದ ಓಜಸ್ಸು ವೃದ್ಧಿಸುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ. ಆತ್ಮಸಾಧನೆಯೊಂದಿಗೆ ಉಪವಾಸ ಕೈಗೊಂಡಾಗ ಊಟವಿಲ್ಲದೆಯೂ ಜೀವಿಸಲು ಸಾಧ್ಯ ಎಂದು ತಿಳಿಸಿದರು. ಹೃದಯದಲ್ಲಿರುವ ಓಜಸ್ಸು ಜೀವಿಯ ಅಳಿವು-ಉಳಿವಿಗೆ ಪ್ರಮುಖ ಕಾರಣವಾಗಿದೆ. ಮದ್ಯಪಾನ, ಅಸಮರ್ಪಕ ಆಹಾರ ಹಾಗೂ ಅತಿಯಾದ ವ್ಯಾಯಾಮದಿಂದ ಓಜಸ್ಸು ಕ್ಷೀಣಿಸುತ್ತದೆ. ಶುದ್ಧ ಗೋಘೃತ, ಗೋಕ್ಷೀರ,…
ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಿಂದ ಸಭಾಪತಿ ಸಲೀಂ ಅಹ್ಮದ್ ಭೇಟಿ
ಬೆಂಗಳೂರು: ನೆದರ್ಲ್ಯಾಂಡ್‌ನ ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಲಿಯನಾರ್ಡೋ ಬ್ರಾಂಟ್ ಅವರು ಇಂದು ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿ ಶ್ರೀ ಸಲೀಂ ಅಹ್ಮದ್ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ನ್ಯಾಯಾಂಗ ವ್ಯವಸ್ಥೆ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಾತ್ಮಕ ಸಂಸ್ಥೆಗಳ ಕಾರ್ಯವೈಖರಿ ಕುರಿತು ಇಬ್ಬರೂ ವಿಚಾರ ವಿನಿಮಯ ನಡೆಸಿದರು. ಇದೇ ವೇಳೆ ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಪರಸ್ಪರ ಸಹಕಾರ, ಸಂವಿಧಾನಾತ್ಮಕ ಹೊಣೆಗಾರಿಕೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು.
ರಾಜಕೀಯಕ್ಕೆ ‘ಕ್ರೇಜಿಸ್ಟಾರ್’ ಎಂಟ್ರಿ?; ರವಿಚಂದ್ರನ್‌ಗೆ ಪರಿಷತ್ ಸ್ಥಾನ ಬಹುತೇಕ ಖಚಿತ
ಬೆಂಗಳೂರು: ಕನ್ನಡದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಕ್ರೇಜಿಸ್ಟಾರ್’ ವಿ. ರವಿಚಂದ್ರನ್ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಸಾಂಸ್ಕೃತಿಕ ಕ್ಷೇತ್ರದಿಂದ ರವಿಚಂದ್ರನ್ ಅವರ ಹೆಸರನ್ನು ಪರಿಗಣಿಸಲು ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ರವಿಚಂದ್ರನ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಾಲ್ಯದ ಸ್ನೇಹಿತ ಹಾಗೂ ಕ್ಲಾಸ್‌ಮೇಟ್ ಆಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಬಾಲ್ಯದ ಸ್ನೇಹಿತ ಶಿವಕುಮಾರ್ ಅವರನ್ನು ರವಿಚಂದ್ರನ್ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ರವಿಚಂದ್ರನ್ ಸೇವೆ ಸಲ್ಲಿಸಿದ್ದಾರೆ. ಅವರ ಕಲಾ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ಸಾಂಸ್ಕೃತಿಕ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಸರ್ಕಾರ ನಿರ್ಧರಿಸಿದೆ…
‘ಅನ್ನಬ್ರಹ್ಮ ಚಾತುರ್ಮಾಸ್ಯ’ದಲ್ಲಿ ಗಮನಸೆಳೆದ ಸ್ವರ್ಣಪಾದುಕಾ ಪೂಜೆ
ಕಾರವಾರ: ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶುಕ್ರವಾರ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರವಚನ ಅನುಗ್ರಹಿಸಿದರು. ಆಹಾರವು ರೂಪ, ಗುಣ ಮತ್ತು ರುಚಿಯಲ್ಲಿ ವಿಭಿನ್ನವಾಗಿದ್ದರೂ ಸಿಹಿ, ಹುಳಿ, ಖಾರ ಸೇರಿದಂತೆ ಷಡ್ರಸಗಳಿಂದ ಕೂಡಿದ ಆಹಾರಗಳು ಜೀವಿಗೆ ಆನಂದ ನೀಡುವುದು ಅದರ ಸಾಮಾನ್ಯ ಗುಣವಾಗಿದೆ. ಅನ್ನದಿಂದ ಸರ್ವೇಂದ್ರಿಯಗಳಿಗೂ ಸಂತೋಷ ದೊರೆಯುತ್ತದೆ. ಹೀಗಾಗಿ ಅನ್ನವನ್ನು ದೇವರೆಂದು ಗೌರವಿಸುವ ಪರಂಪರೆ ನಮ್ಮಲ್ಲಿದೆ ಎಂದು ಶ್ರೀಗಳು ಹೇಳಿದರು. ಆಯುಷ್ಯ, ಶಕ್ತಿ, ವರ್ಣ, ಸ್ಮರಣೆ, ಸತ್ವ, ಓಜಸ್ಸು ಹಾಗೂ ಶೋಭೆಗೆ ಆಹಾರವೇ ಪ್ರಮುಖ ಕಾರಣ. ಹಸಿವು ಹೆಚ್ಚಾದಾಗ ಬುದ್ಧಿಯ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಸೂಕ್ತ ಆಹಾರ ಸೇವನೆಯಿಂದ ಬುದ್ಧಿ ಮತ್ತೆ ಚುರುಕಾಗುತ್ತದೆ ಎಂದು ಅವರು ವಿವರಿಸಿದರು. ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಿಸಲಾದ ‘ಓಜಸ್ಸು’ ದೇಹದಲ್ಲಿರುವ ಅಮೃತದ್ರವದಂತಿದ್ದು, ರಸ, ರಕ್ತ ಸೇರಿದಂತೆ ಸಪ್ತಧಾತುಗಳ ಸಾರದಿಂದ ರೂಪುಗೊಳ್ಳುತ್ತದೆ.…
ನಾಗಾರ್ಜುನ 100ನೇ ಸಿನಿಮಾ ‘ಕಿಂಗ್ 100’; ಡಿಸೆಂಬರ್ 24ರಂದು ತೆರೆಗೆ
ಹೈದರಾಬಾದ್: ನಟ ನಾಗಾರ್ಜುನ ಅಕ್ಕಿನೇನಿ ಅವರ ವೃತ್ತಿಜೀವನದ 100ನೇ ಚಿತ್ರಕ್ಕೆ ‘ಕಿಂಗ್ 100’ ಎಂದು ಶೀರ್ಷಿಕೆ ಇಡಲಾಗಿದೆ. ಆರ್.ಎ. ಕಾರ್ತಿಕ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 24ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕರು ಶನಿವಾರ ಘೋಷಿಸಿದ್ದಾರೆ. ನಾಗಾರ್ಜುನ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅನ್ನಪೂರ್ಣ ಸ್ಟುಡಿಯೋಸ್ ಚಿತ್ರದ ಶೀರ್ಷಿಕೆಯೊಂದಿಗೆ ಬಹುನಿರೀಕ್ಷಿತ ಮೊದಲ ಗ್ಲಿಂಪ್ಸ್ ಬಿಡುಗಡೆ ಮಾಡಿದೆ. ಸುಮಾರು ಒಂದು ವರ್ಷದಿಂದ ನಿರ್ಮಾಣ ಹಂತದಲ್ಲಿದ್ದ ಸಿನಿಮಾವನ್ನು ಸಾಕಷ್ಟು ಗೌಪ್ಯವಾಗಿ ಇಡಲಾಗಿತ್ತು. ಸುಮಾರು ಒಂದೂವರೆ ನಿಮಿಷದ ಗ್ಲಿಂಪ್ಸ್‌ನಲ್ಲಿ ನಾಗಾರ್ಜುನ ಅವರನ್ನು ವಿಭಿನ್ನ ಹಾಗೂ ಸ್ಟೈಲಿಶ್ ಅವತಾರದಲ್ಲಿ ಪರಿಚಯಿಸಲಾಗಿದೆ. ‘‘ಈ ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಹಣವಿರುವವರು ಮತ್ತು ಹಣವಿಲ್ಲದವರು. ನನ್ನಲ್ಲಿ ಹಣವಿಲ್ಲದಾಗ ಅವರು ನನ್ನನ್ನು ಸೋತವನು ಎಂದರು. ಹಣವಿದ್ದಾಗ ರಾಜ ಎಂದರು. ಆದರೆ ಈ ಗುರುತು ಹಣಕ್ಕಿಂತ ಹೆಚ್ಚು ಶಕ್ತಿಶಾಲಿ’’ ಎಂಬ ಸಂಭಾಷಣೆ ಗಮನ ಸೆಳೆದಿದೆ. ONE KING 👑 ∞…
