ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಗೆ ಮೂರು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣಸೌಧ ಗುಲಾಬಿ ಬೆಳಕಿನಿಂದ ಕಂಗೊಳಿಸುತ್ತಿದೆ. ಮಹಿಳಾ ಸಬಲೀಕರಣದ ಸಂದೇಶ ಸಾರುವ ಈ ವಿಶೇಷ ಅಲಂಕಾರ ಗಮನಸೆಳೆಯುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ 1.2 ಕೋಟಿಗೂ ಹೆಚ್ಚು ಕುಟುಂಬಗಳ ಒಡತಿಯರಿಗೆ ಆರ್ಥಿಕ ನೆರವಿನ ಜತೆಗೆ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯವೂ ಹೆಚ್ಚಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘‘ಗೃಹಲಕ್ಷ್ಮಿ ಕೇವಲ ಸರ್ಕಾರಿ ಸೌಲಭ್ಯವಲ್ಲ. ಮಹಿಳೆಯರ ನೆಮ್ಮದಿಯ ಬದುಕಿಗೆ ಸರ್ಕಾರ ನೀಡುತ್ತಿರುವ ಪ್ರೀತಿಯ ಆಸರೆ’’ ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶಿವಕುಮಾರ್ ಮನವಿಯೊಂದನ್ನೂ ಮಾಡಿದ್ದಾರೆ. ಸರ್ಕಾರದ ‘ಗ್ಯಾರಂಟಿ ಸಮಿತಿ’ ಸದಸ್ಯರು ಮನೆ ಬಾಗಿಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಎಂದಿನಂತೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಯೋಜನೆ ಮತ್ತಷ್ಟು…
Category: ಪ್ರಮುಖ ಸುದ್ದಿ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ; ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಬಲ: ಡಿಕೆಶಿ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆ ಯಶಸ್ವಿಯಾಗಿ ಮೂರು ವರ್ಷ ಪೂರೈಸಿರುವುದು ಸಂತಸ ಹಾಗೂ ಹೆಮ್ಮೆಯ ಸಂಗತಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ 1.2 ಕೋಟಿಗೂ ಹೆಚ್ಚು ಕುಟುಂಬಗಳ ಒಡತಿಯರಿಗೆ ಆರ್ಥಿಕ ನೆರವಿನ ಜತೆಗೆ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯವೂ ಹೆಚ್ಚಿದೆ ಎಂದು ತಿಳಿಸಿದ್ದಾರೆ. ‘‘ಇದು ಕೇವಲ ಸರ್ಕಾರಿ ಸೌಲಭ್ಯವಲ್ಲ. ಮಹಿಳೆಯರ ನೆಮ್ಮದಿಯ ಬದುಕಿಗೆ ಸರ್ಕಾರ ನೀಡುತ್ತಿರುವ ಪ್ರೀತಿಯ ಆಸರೆ’’ ಎಂದು ಶಿವಕುಮಾರ್ ಹೇಳಿದ್ದಾರೆ. ಗೃಹಲಕ್ಷ್ಮಿ – ಮಹಿಳಾ ಸಬಲೀಕರಣದ ಯಶಸ್ವಿ 3 ವರ್ಷಗಳು! ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮೂರು ವರ್ಷ ಪೂರೈಸಿರುವುದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ನಾಡಿನ 1.2+ ಕೋಟಿ ಕುಟುಂಬಗಳ ಒಡತಿಯರಿಗೆ ಈ ಯೋಜನೆಯು ಆರ್ಥಿಕ ಬಲದ ಜೊತೆಗೆ, ಸ್ವಾಭಿಮಾನ ಹಾಗೂ ಆತ್ಮಸ್ಥೈರ್ಯವನ್ನೂ…
‘ದೇಶದಲ್ಲಿ ಹಿಂದೂ ರಾಷ್ಟ್ರ, ಅಮೆರಿಕದಲ್ಲಿ ಸರ್ವಧರ್ಮ ಸಾಮರಸ್ಯ’: RSS ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕೆ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಳೆದ 100 ವರ್ಷಗಳಿಂದ ಭಾರತದಲ್ಲಿ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ RSS ಸರಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸಚಿವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ. ‘‘ಭಾರತದಲ್ಲಿ ಯಾವುದೇ ಮುಸ್ಲಿಮರು ಇರಬಾರದು ಎಂದು ಹಿಂದೂ ಭಾವಿಸಿದರೆ ಆತ ಹಿಂದೂ ಆಗಿ ಉಳಿಯುವುದಿಲ್ಲ. ಹಿಂದೂ ಎಂದು ಕರೆದುಕೊಳ್ಳುವುದಾದರೆ ಎಲ್ಲ ಮಾರ್ಗಗಳೂ ಒಂದೇ ಗುರಿಯತ್ತ ಸಾಗುತ್ತವೆ ಎಂಬ ನಂಬಿಕೆ ಇರಬೇಕು’’ ಎಂಬ ಭಾಗವತ್ ಅವರ ಹೇಳಿಕೆಯನ್ನು ಖರ್ಗೆ ಉಲ್ಲೇಖಿಸಿದ್ದಾರೆ. ‘ಪ್ರವಾಸ, ನಿಧಿ ಸಂಗ್ರಹದ ಹಿಂದೆ ಇರುವ ಜಾಲ ಪರಿಶೀಲಿಸಿ’ ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ ಕಾಣಿಸುತ್ತಿದೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ. ವಿದೇಶದಲ್ಲಿರುವ ಭಾರತೀಯ ಸಮುದಾಯದಿಂದ ನಿಧಿ ಸಂಗ್ರಹಿಸಲು RSS ತನ್ನ ವಿಚಾರ ಪರಿವಾರದ ಮೂಲಕ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.…
ನಾಗೇಂದ್ರ ರಾಜೀನಾಮೆ ಸಾಕಾಗಲ್ಲ; ನ್ಯಾಯ ಇನ್ನಷ್ಟೇ ಸಿಗಬೇಕಿದೆ: ಬಿಜೆಪಿ
ಬೆಂಗಳೂರು: ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರ ರಾಜೀನಾಮೆ ಸಾಕಾಗುವುದಿಲ್ಲ. ಪರಿಶಿಷ್ಟ ಪಂಗಡದ ಸಮುದಾಯಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಕ್ಷ ಬಿಜೆಪಿ ಹೇಳಿದೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ತನ್ನ ನಿರಂತರ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಆದರೆ ನಾಗೇಂದ್ರ ಅವರ ರಾಜೀನಾಮೆಯಿಂದ ಹೋರಾಟ ಅಂತ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ₹187 ಕೋಟಿ ವಾಪಸ್ ನೀಡಲು ಆಗ್ರಹ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು. ದುರುಪಯೋಗವಾಗಿರುವ ₹187 ಕೋಟಿ ಹಣವನ್ನು ಕೂಡಲೇ ವಾಲ್ಮೀಕಿ ನಿಗಮಕ್ಕೆ ವಾಪಸ್ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇದರ ಜತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ತಕ್ಷಣ ಮರುಜಾರಿ ಮಾಡಬೇಕು ಎಂದು ಒತ್ತಾಯಿಸಿದೆ. ‘‘ಪರಿಶಿಷ್ಟ ಪಂಗಡದ ಹಕ್ಕುಗಳಿಗಾಗಿ ಹಾಗೂ ಸಮುದಾಯಕ್ಕೆ ನ್ಯಾಯ ದೊರೆಯುವವರೆಗೂ ನಮ್ಮ…
ಅತ್ಯುತ್ತಮ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’
ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ರಾಜ್ಯ ಸರ್ಕಾರವು ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಶಿವಕುಮಾರ್, ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜಿಗೆ ಹಾಗೂ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೆ ಅವರ ಹೆಸರಿಡಲು ನಿರ್ಧರಿಸಲಾಗಿದೆ ಎಂದರು. ಗ್ರಾಮೀಣ ಆಡಳಿತ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಗೆ ರಾಮಕೃಷ್ಣ ಹೆಗಡೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಅವರ ಜನ್ಮದಿನದಂದು ಅತ್ಯುತ್ತಮ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’ ನೀಡಲು ಕಾರ್ಯಕ್ರಮ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಲಾಗಿದೆ…
ಸಮವಸ್ತ್ರದ ಹಿಂದೆ ಮಿಡಿದ ಮಾನವೀಯ ಹೃದಯ; ರವಿಕಾಂತೇಗೌಡರ ಸೇವೆಗೆ ಹೊಸ ಅಧ್ಯಾಯ
ಬೆಂಗಳೂರು: ಪೊಲೀಸ್ ಸಮವಸ್ತ್ರ ಎಂದರೆ ಕಠಿಣತೆ, ಶಿಸ್ತು ಮತ್ತು ಅಧಿಕಾರದ ಪ್ರತೀಕ ಎಂಬ ಸಾಮಾನ್ಯ ಕಲ್ಪನೆಯ ನಡುವೆ, ಅದೇ ಸಮವಸ್ತ್ರದೊಳಗೆ ಆಳವಾದ ಮಾನವೀಯ ಹೃದಯವೊಂದನ್ನು ಕಾಪಾಡಿಕೊಂಡು ಸೇವೆ ಸಲ್ಲಿಸಿದ ಅಪರೂಪದ ಅಧಿಕಾರಿಗಳಲ್ಲಿ ಡಾ. ಬಿ.ಆರ್. ರವಿಕಾಂತೇಗೌಡ ಅವರೂ ಒಬ್ಬರು. ಮಂಡ್ಯದಲ್ಲಿ ಹುಟ್ಟಿ ಬೆಳೆದ ಅವರು 1997ರಲ್ಲಿ ಪೊಲೀಸ್ ಸೇವೆಯನ್ನು ಆಯ್ಕೆ ಮಾಡಿಕೊಂಡರು. ಕೆಎಎಸ್ ಅಧಿಕಾರಿಯಾಗುವ ಅವಕಾಶವಿದ್ದರೂ, ಸಮಾಜಕ್ಕೆ ನೇರವಾಗಿ ಸೇವೆ ಸಲ್ಲಿಸುವ ಆಶಯದಿಂದ ಡಿವೈಎಸ್ಪಿ ಹುದ್ದೆಯನ್ನು ಸ್ವೀಕರಿಸಿದರು. ವೃತ್ತಿಜೀವನದ ವಿವಿಧ ಹಂತಗಳಲ್ಲಿ ಕರ್ತವ್ಯನಿಷ್ಠೆ, ಶಿಸ್ತು ಮತ್ತು ಮಾನವೀಯತೆಯನ್ನು ಒಟ್ಟಿಗೆ ಕೊಂಡೊಯ್ದ ಅವರು, ಸೇವೆಯಲ್ಲಿದ್ದ ವ್ಯವಸ್ಥೆಯಲ್ಲೂ ಹಲವು ಬದಲಾವಣೆಗಳಿಗೆ ಮುನ್ನುಡಿ ಬರೆದರು. ದಶಕಗಳ ಹೆಂದೆ ರಾಜ್ಯದಲ್ಲಿ ಆಗಾಗ್ಗೆ ತಲ್ಲಣ ಸೃಷ್ಟಿಸುತ್ತಿದ್ದ ಹುಬ್ಬಳ್ಳಿ ಕಮರಿಪೇಟೆ ಅಕ್ರಮ ಸಾರಾಯಿ ದಂಧೆ ವಿರುದ್ಧದ ಕಾರ್ಯಾಚರಣೆ ಅವರ ವೃತ್ತಿಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗಲೂ ಪೊಲೀಸ್ ವ್ಯವಸ್ಥೆ ವಸಾಹತುಶಾಹಿ ಮನಸ್ಥಿತಿಯ…
IAS ರಾಜೀನಾಮೆ ಸರಣಿ; 13 ವರ್ಷಗಳ ಸೇವೆಗೆ ದಿವ್ಯಾ ಮಿತ್ತಲ್ ವಿದಾಯ
ಲಕ್ನೋ: ಉತ್ತರ ಪ್ರದೇಶದ 2013ರ ಬ್ಯಾಚ್‌ನ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು 13 ವರ್ಷಗಳ ಸಾರ್ವಜನಿಕ ಸೇವೆಗೆ ವಿದಾಯ ಹೇಳಿದ್ದಾರೆ. ಪ್ರಸ್ತುತ ಕಂದಾಯ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ರಾಜೀನಾಮೆ ನೀಡಿರುವುದಾಗಿ ಭಾನುವಾರ ‘ಎಕ್ಸ್’ನಲ್ಲಿ ಘೋಷಿಸಿದ್ದಾರೆ. ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಬಳಿಕ ಲಂಡನ್‌ನಲ್ಲಿ ಉದ್ಯೋಗ ಪಡೆದಿದ್ದ ಮಿತ್ತಲ್, ದೇಶದಿಂದ ದೂರವಿರುವುದು ಮನಸ್ಸಿಗೆ ಭಾರವಾಗಿದ್ದರಿಂದ ಭಾರತಕ್ಕೆ ಮರಳಿ ಐಎಎಸ್ ಸೇವೆಗೆ ಸೇರಿದ್ದಾಗಿ ತಿಳಿಸಿದ್ದಾರೆ. ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡ ಅವರು, ಡಿಯೋರಿಯಾ ಸರಿಯಾದದ್ದಕ್ಕಾಗಿ ನಿಲ್ಲುವುದು ಜವಾಬ್ದಾರಿ ಎಂಬುದನ್ನು ಕಲಿಸಿದರೆ, ಮಿರ್ಜಾಪುರ ‘ಅಸಾಧ್ಯ’ ಎಂಬುದು ವಾಸ್ತವವಲ್ಲ, ಕೇವಲ ಒಂದು ಅಭಿಪ್ರಾಯ ಎಂಬುದನ್ನು ಕಲಿಸಿತು ಎಂದು ಹೇಳಿದ್ದಾರೆ. ‘ಜನರ ನಂಬಿಕೆಯೇ ನಿಜವಾದ ಶಕ್ತಿ’ ಸಾರ್ವಜನಿಕ ಸೇವೆಯ ನಿಜವಾದ ತೃಪ್ತಿ ಭೂಹಕ್ಕು ಪಡೆದ ಕುಟುಂಬಗಳು, ಘನತೆಯಿಂದ ಬದುಕಲು ಅವಕಾಶ ಪಡೆದ ಅಂಗವಿಕಲರು ಹಾಗೂ…
ನೇಪಾಳದಲ್ಲಿ ಭೀಕರ ಪ್ರವಾಹ, ಭೂಕುಸಿತ; 680ಕ್ಕೂ ಹೆಚ್ಚು ಶವ ಪತ್ತೆ, 2,498 ಮಂದಿ ನಾಪತ್ತೆ
ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಇದುವರೆಗೆ 680ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ 2,498 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ತಿಳಿಸಿದೆ. ಭೋಟೆ ಕೋಶಿ ನದಿಯಲ್ಲಿ ಹಠಾತ್ ನೀರಿನ ಪ್ರಮಾಣ ಏರಿಕೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಪರಿಣಾಮವಾಗಿ ರಸ್ತೆ, ಸೇತುವೆ, ಜಲವಿದ್ಯುತ್ ಯೋಜನೆಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ. ಪ್ರವಾಹದಿಂದಾಗಿ ವಿದೇಶಿ ಪ್ರವಾಸಿಗರೂ ಸಂಪರ್ಕ ಕಳೆದುಕೊಂಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಶನಿವಾರ ಸಂಜೆ ವೇಳೆಗೆ ಒಟ್ಟು 753 ಪ್ರವಾಸಿಗರು ನಾಪತ್ತೆಯಾಗಿದ್ದು, ಅವರಲ್ಲಿ 589 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ. NDRRMA ಪ್ರಕಾರ 517 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ. ವಿದೇಶಿ ಪ್ರಜೆಗಳ ಕುಟುಂಬಗಳಿಗೆ ಮಾಹಿತಿ ಒದಗಿಸಲು ಹಾಗೂ ನೆರವು ಸಂಯೋಜಿಸಲು ನೇಪಾಳದ ವಿದೇಶಾಂಗ ಸಚಿವಾಲಯದಲ್ಲಿ ವಿಶೇಷ ತುರ್ತು ನಿಯಂತ್ರಣ…
‘ರಾಜಕೀಯ ಸ್ವಹಿತಾಸಕ್ತಿಯ ಆಟವಾಗಿದೆ’; ಬದಲಾವಣೆ ಸಮಾಜದಿಂದಲೇ ಆರಂಭವಾಗಬೇಕು: ಮೋಹನ್ ಭಾಗವತ್
ನ್ಯೂಯಾರ್ಕ್: ರಾಜಕೀಯವು ಸ್ವಹಿತಾಸಕ್ತಿಯ ಆಟವಾಗಿ ಮಾರ್ಪಟ್ಟಿದ್ದು, ಶಾಶ್ವತ ಸಾಮಾಜಿಕ ಬದಲಾವಣೆ ರಾಜಕೀಯದಿಂದಲ್ಲ, ಸಮಾಜದಿಂದಲೇ ಆರಂಭವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ‘ಒಂದು ಜಗತ್ತು, ಒಂದು ಮಾನವೀಯತೆ’ ಕಾರ್ಯಕ್ರಮದಲ್ಲಿ ಧಾರ್ಮಿಕ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಕ್ರಮಗಳಿಂದ ಮಾತ್ರ ಸಾಮಾಜಿಕ ವಿಭಜನೆಗಳನ್ನು ನಿವಾರಿಸಲು ಸಾಧ್ಯವಿಲ್ಲ ಎಂದರು. ಸಂವಾದ, ಸೇವೆ ಮತ್ತು ಸಹಕಾರದ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಬೇಕು. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಸಾರ್ವಜನಿಕ ಅಭಿಪ್ರಾಯವನ್ನು ಅವಲಂಬಿಸಿರುವುದರಿಂದ ಬಲವಾದ ಜನಾಭಿಪ್ರಾಯ ರೂಪುಗೊಂಡರೆ ರಾಜಕಾರಣಿಗಳು ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಭಾಗವತ್ ಅಭಿಪ್ರಾಯಪಟ್ಟರು. “ನಾವು ಬಯಸುವ ಜಗತ್ತಿನ ಮಾದರಿಯನ್ನು ಮೊದಲು ನಮ್ಮದೇ ಸಮಾಜದಲ್ಲಿ ನಿರ್ಮಿಸಬೇಕು. ನಂತರ ನಿರಂತರ ಸಂವಾದದ ಮೂಲಕ ಅದನ್ನು ಸಂಪರ್ಕಿಸಬೇಕು” ಎಂದು ಅವರು ಹೇಳಿದರು. ‘ವೈವಿಧ್ಯತೆ ಪ್ರಕೃತಿಯ ನಿಯಮ, ಏಕತೆ ಅದರ ಹಿಂದಿನ ಸತ್ಯ’…
‘ಅಗತ್ಯವಿರುವವರಿಗೆ ಧರ್ಮ ನೋಡದೆ ಸೇವೆ, ಆರ್‌ಎಸ್‌ಎಸ್‌ಗೆ ಪ್ರಚಾರ ಬೇಕಿಲ್ಲ’: ಮೋಹನ್ ಭಾಗವತ್
ನ್ಯೂಯಾರ್ಕ್: ಧಾರ್ಮಿಕ ಹಾಗೂ ಸಾಮಾಜಿಕ ವಿಭಜನೆಗಳನ್ನು ನಿವಾರಿಸಲು ಜ್ಞಾನ ಮಾತ್ರ ಸಾಕಾಗುವುದಿಲ್ಲ. ಸೇವೆ, ಪ್ರೀತಿ ಮತ್ತು ಗೌರವವನ್ನು ದೈನಂದಿನ ಬದುಕಿನ ಭಾಗವಾಗಿಸುವ ನಿರಂತರ ಅಭ್ಯಾಸ ಅಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ‘ಒಂದು ಜಗತ್ತು, ಒಂದು ಮಾನವೀಯತೆ’ ಕಾರ್ಯಕ್ರಮದಲ್ಲಿ ಧಾರ್ಮಿಕ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಗತ್ತಿನ ವಿವಿಧ ಧಾರ್ಮಿಕ ಪರಂಪರೆಗಳಲ್ಲಿ ಶಾಂತಿ, ಏಕತೆ ಮತ್ತು ಸಹಬಾಳ್ವೆಗೆ ಅಗತ್ಯವಾದ ಜ್ಞಾನ ಈಗಾಗಲೇ ಇದೆ. ಆದರೆ ಆ ಜ್ಞಾನವು ಮಾನವ ನಡವಳಿಕೆಯಲ್ಲಿ ಪ್ರತಿಫಲಿಸುವಂತೆ ಮಾಡುವುದೇ ಸವಾಲು ಎಂದರು. ಜ್ಞಾನವಿದ್ದರೂ ವೈಯಕ್ತಿಕ ಆಸೆ ಮತ್ತು ಪ್ರಲೋಭನೆಗಳಿಂದ ಮನುಷ್ಯರು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ತಮ್ಮದೇ ಉದಾಹರಣೆ ನೀಡಿದ ಭಾಗವತ್, ಮಧುಮೇಹವಿದ್ದರೂ ಸಿಹಿ ತಿನ್ನಲು ನೆಪ ಹುಡುಕುವಂತೆಯೇ ಸಾಮಾಜಿಕ ವಿಚಾರಗಳಲ್ಲೂ ಆಗುತ್ತದೆ ಎಂದರು. “ಬೌದ್ಧಿಕವಾಗಿ ಶಿಕ್ಷಣ ನೀಡುವುದರಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ.…
