ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು; ಸೂರ್ಯ-ಚಂದ್ರಗ್ರಹಣ ಬಗ್ಗೆ ಇಲ್ಲಿದೆ ಮಾಹಿತಿ

ದೆಹಲಿ: ಈ ತಿಂಗಳಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಸನ್ನಿವೇಶ ಕಾಣಸಿಗಳಿವೆ. ಒಂದೇ ತಿಂಗಳಲ್ಲಿ ಎರಡು ಗ್ರಹಣಗಳು ಸಂಭವಿಸಲಿದ್ದು ಜ್ಯೋತಿಷಿಗಳಿಂದ ಬಗೆ ಬಗೆಯ ವಿಶ್ಲೇಷಣೆಗಳು ಸಾಗಿವೆ.

ಅಕ್ಟೊಬರ್ 4ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅಕ್ಟೋಬರ್ 14ರ ಶನಿವಾರ ರಾತ್ರಿ 8:34 ಗ್ರಹಣದ ಸ್ಪರ್ಷಕಾಲವಾಗಿದ್ದು ರಾತ್ರಿ 2:25ರ ಸುಮಾರಿಗೆ ಮೋಕ್ಷವಾಗಲಿದೆ. ಆದರೆ ಈ ಸೂರ್ಯ ಗ್ರಹಣವು ಅಮೆರಿಕದ ಪಶ್ಚಿಮ ಭಾಗ ಹಾಗೂ ಪೆಸಿಫಿಕ್ ಸಮುದ್ರದವರೆಗೆ ಸೇರಿದಂತೆ ಉತ್ತರ ಅಮೆರಿಕದಲ್ಲಿ ಸೂರ್ಯ ಗ್ರಹಣ ಗೋಚರಿಸಲಿದ್ದು, ಭಾರತದಲ್ಲಿ ಗೋಚರವಾಗುವುದಿಲ್ಲ. ಹೀಗಾಗಿ ಯಾವುದೇ ಸೂತಕದ ಅವಧಿ ಇರುವುದಿಲ್ಲ ಎಂದು ಜ್ಯೋತಿಷಿಗಳು ಹೇಳಿದ್ದಾರೆ.


ಇದಾದ ಎರಡು ವಾರಗಳಲ್ಲಿ ಚಂದ್ರ ಗ್ರಹಣಕ್ಕೆ ನಭೋಮಂಡಲ ಸಾಕ್ಷಿಯಾಗಲಿದೆ. ಅಕ್ಟೊಬರ್ 28ರ ಮಧ್ಯರಾತ್ರಿ ಅಮೆರಿಕ, ಆಫ್ರಿಕಾ, ಪಶ್ಚಿಮ ಯುರೋಪ್ ಸೇರಿದಂತೆ ಜಗತ್ತಿನ ಹಲವೆಡೆ ಚಂದ್ರಗ್ರಹಣ ಗೋಚರಿಸಲಿದ್ದು, ಈ ಚಂದ್ರ ಗ್ರಹಣವು ಭಾರತದಲ್ಲಿ ಭಾಗಶಃ ಗೋಚರಿಸಲಿದೆ ಎನ್ನಲಾಗುತ್ತಿದೆ. ಅಕ್ಟೋಬರ್ 28ರ ಶನಿವಾರ ರಾತ್ರಿ 1.05 ಗಂಟೆಗೆ ಗ್ರಹಣ ಸ್ಪರ್ಶವಾಗಲಿಯಿದು ರಾತ್ರಿ 2:24 ಗಂಟೆ ಸುಮಾರಿಗೆ ಅಂತ್ಯವಾಗಲಿದೆ. ಅಂದಾಜು 15 ನಿಮಿಷಗಳವರೆಗೆ ಚಂದ್ರಗ್ರಹಣ ಇರಲಿದೆ.

Related posts