ಒಂದೇ ದಿನ 7,466 ಹೊಸ ಕೊರೋನಾ ಕೇಸ್; 9ನೇ ಸ್ಥಾನಕ್ಕೇರಿದ ಭಾರತ

ದೆಹಲಿ: ಜಗತ್ತಿನಾದ್ಯಂತ ಕೊರೋನಾ ತಲ್ಲಣ ಮುಂದುವರಿದಿದೆ. ಭಾರತ ಸೇರಿದಂತೆ ಹಲವು ರಾಸ್ಗ್ತ್ರಗಳಲ್ಲಿ ಸೋಂಕಿನ ವೇಗ ಹೆಚ್ಚಾಗಿದ್ದು, ಭಾರತವಂತೂ ತತ್ತರಿಸಿದೆ. ಭಾರತದಲ್ಲಿ ಕೊರೋನಾ ವೈರಾಣು ಸೋಂಕು ಶರವೇಗದಲ್ಲಿ ಹರಡುತ್ತಿದ್ದು, ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ. ಕಳೆದ ವಾರದವರೆಗೂ ಭಾರತ 10ನೇ ಸ್ಥಾನದಲ್ಲಿಟ್ಟು. ಶುಕ್ರವಾರ ಒಂದೇ ದಿನ ಭಾರತದಲ್ಲಿ 7,466 ಹೊಸ ಸೋಂಕಿನ ಪ್ರಕರಣಗಳು ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 1.65 ಲಕ್ಷಕ್ಕೆ ಏರಿಕೆಯಾಗಿದೆ.

ವಿಶ್ವಾದ್ಯಂತ 58 ಲಕ್ಷಕ್ಕೂ ಹೆಚ್ಚು ಸೋಂಕು

ವಿಶ್ವಾದ್ಯಂತ 58 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಚೀನೀ ವೈರಸ್ ಕೊರೋನಾಗೆ ಬಲಿಯಾದವರ ಸಂಖ್ಯೆಯೂ 4 ಲಕ್ಷ ಸಮೀಪಿಸುತ್ತಿದ್ದು ಇದೀಗ ಕೋವಿಡ್-19 ಬಗೆಗಿನ ಆತಂಕವೂ ದುಪ್ಪಟ್ಟಾಗಿದೆ.

ಅಮೆರಿಕಾದಲ್ಲಿ 17,21,753 ಮಂದಿ ಸೋಂಕಿತರಿದ್ದರೆ, ಬ್ರೆಜಿಲ್’ನಲ್ಲಿ 438,812 ಮಂದಿ ಸೋಂಕಿಗೊಳಗಾಗಿದ್ದಾರೆ. ರಷ್ಯಾದಲ್ಲೂ 379,051 ಸೋಂಕಿನ ಪ್ರಕರಣಗಳಿದ್ದರೆ, ಸ್ಪೇನ್ ದೇಶದಲ್ಲಿ 284,986 ಹಾಗೂ ಬ್ರಿಟನ್’ನಲ್ಲಿ 269,127 ಮಂದಿಗೆ ವೈರಸ್ ಅಂಟಿಕೊಂಡಿದೆ. ಇಟಲಿಯಲ್ಲಿ 231,732, ಫ್ರಾನ್ಸ್’ನಲ್ಲಿ 186,238 ಹಾಗೂ ಜರ್ಮನಿಯಲ್ಲಿ 182,452 ಮಂದಿಯಲ್ಲಿ ಸೋಂಕು ಪತ್ತೆಯಾಗಿ ಈ ದೇಶಗಳು ಭಾರೀ ಸವಾಲನ್ನೇ ಎದುರಿಸುತ್ತಿವೆ.

ಇದನ್ನೂ ಓದಿ.. ನಿಮ್ಮ ಮೊಬೈಲ್ ಸಂಖ್ಯೆ ಇನ್ನು ಮುಂದೆ 10 ಅಲ್ಲ 11ಅಂಕಿ; ನೀವೇನು ಮಾಡಬೇಕು ಗೊತ್ತಾ? 

 

Related posts