ಸಿಡಿಲು ಬಡಿದು ಪ್ರೇಮಸೌಧ ತಾಜ್ ಮಹಲ್’ಗೆ ಹಾನಿ

ದೆಹಲಿ: ಪ್ರೇಮಸೌಧ ತಾಜ್ ಮಹಲ್ ಸಿಡಿಲು ಬಡಿತದಿಂದ ಹಾನಿಗೊಳಗಾಗಿದೆಯೇ? ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆ.

ಉತ್ತರಪ್ರದೇಶದ ಆಗ್ರಾ ಸುತ್ತಮುತ್ತ ಶನಿವಾರ ಭಾರೀ ಮಳೆಯಾಗಿದೆ. ಆಗ್ರಾದಲ್ಲಿರುವ ತಾಜ್ ಮಹಲ್ ಕಟ್ಟಡಕ್ಕೆ ಈ ಮಳೆ ಸಂದರ್ಭದಲ್ಲಿ ಸಿಡಿಲು ಅಪ್ಪಳಿಸಿದ್ದು ಬಾಗಿಲು ಹಾನಿಗೊಳಗಾಗಿದೆ ಎನ್ನಲಾಗಿದೆ.

ತಾಜ್ ಮಹಲ್ ನ ಮುಖ್ಯ ಸಮಾಧಿ ಮತ್ತು ಕೆಂಪು ಮರಳುಗಲ್ಲಿನ ಅಮೃತಶಿಲೆ ರೇಲಿಂಗ್’ಗೂ ಹಾನಿಯಾಗಿದೆ. ತಾಜ್ ಮಹಲ್ ಫಾಲ್ಸ್ ಸೀಲಿಂಗ್ ಕೂಡ ಬಿದ್ದಿದೆ. ತಾಜ್ ಮಹಾಲ್ ಆವರಣದಲ್ಲಿ ಕೆಲ ಮರಗಳು ಉರುಳಿ ಬಿದ್ದಿವೆ. ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ.. ಜುಲೈ 8ರಂದು ಪಿಯುಸಿ ಫಲಿತಾಂಶ, ಬಳಿಕ ಎಸ್ಸೆಸ್ಸೆಲ್ಸಿ ರಿಸಲ್ಟ್

Related posts