ಕೊರೋನಾ ತಲ್ಲಣ; ಮತ್ತೆ ೧೦ಕ್ಕೂ ಹೆಚ್ಚು ಪ್ರಕರಣಗಳು ಪತ್ತೆ

ದೆಹಲಿ: ಚೀನಾ, ಅಮೆರಿಕಾ, ಇಟೆಲಿ ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಭಾರತದಲ್ಲೂ ತಲ್ಲಣದ ತರಂಗ ಎಬ್ಬಿಸಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಇದೀಗ ಆಂಧ್ಯ ಪ್ರದೇಶ, ತೆಲಂಗಾಣ, ಹರ್ಯಾಣ ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ.

ಗುರುವಾರ ಒಂದೇ ದಿನ ಹತ್ತಕ್ಕೂ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಈ ಮಾರಣಾಂತಿಕ ಸೋಂಕು ತಗುಲಿರುವವರ ಸಂಖ್ಯೆ 184ಕ್ಕೆ ಏರಿಕೆಯಾಗಿದೆ.
ತೆಲಂಗಾಣದಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿವೆ. ಉತ್ತರ ಪ್ರದೇಶದಲ್ಲಿ ಮೂರು, ಮಹಾರಾಷ್ಟ್ರದಲ್ಲಿ ಎರಡು ಕರಣಗಳು ಪತ್ತೆಯಾಗಿವೆ. ಆಂಧ್ರಪ್ರದೇಶದಲ್ಲಿ 1 ಹೊಸ ಪ್ರಕರಣ ದೃಢ ಪಟ್ಟಿದೆ. ತಮಿಳುನಾಡು, ಛತ್ತೀಸ್ ಗಢ ಮತ್ತು ಚಂಡೀಘಡದಲ್ಲೂ ಕೊರೋನಾ ಸೋಂಕು ಹೊಸ ಪ್ರಕರಣಗಳು ಪತ್ತೆಯಾಗಿವೆ.

Related posts