ಜನತಾ ಕರ್ಫ್ಯೂ; ಮೋದಿ ಕರೆ ಬೆಂಬಲಿಸಿ ಅಭಿಮಾನಿಗಳ ಅಭಿಯಾನ

ದೆಹಲಿ: ಜಗತ್ತಿನಾದ್ಯಂತ ಮನುಕುಲವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಕೊರೋನಾವೈರಸ್ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮಗಳು ಮುಂದುವರಿದಿವೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಜನ ಜಾಗೃತಿಗೆ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಾರ್ಚ್ 22 ರಂದು ಜನತಾ ಕರ್ಫ್ಯೂ ಜಾರಿಗೆ ಮೋದಿ ಕರೆ ನೀಡಿದ್ದು, ಅವರ ಆಶಯವನ್ನು ಸಾಕಾರಗೊಳಿಸಲು ಅಭಿಮಾನಿಗಳು ಟೊಂಕ ಕಟ್ಟಿ ನಿಂತಿದ್ದಾರೆ.

ಕೊರೋನಾ ವೈರಸ್ ಸೋಂಕಿನಿಂದ ದೇಶವನ್ನು ಪಾರು ಮಾಡುವ ಉದ್ದೇಶದಿಂದ ಜನತಾ ಕರ್ಫ್ಯೂ ಅವಶ್ಯಕತೆಯಿದೆ. ಹಾಗಾಗಿ ಮಾರ್ಚ್ 22 ರ ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಮನೆಯಿಂದ ಯಾರು ಹೊರಗೆ ಬರಬಾರದು. ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ ಎಂದು ಮೋದಿ ಕರೆ ಕೊಟ್ಟಿದ್ದಾರೆ. ಆ ದಿನ ಸಂಜೆ 5 ಗಂಟೆಗೆ ಮನೆಗಳ ಬಾಗಿಲು, ಬಾಲ್ಕನಿ , ಕಿಟಕಿ ಬಳಿ ಚಪ್ಪಾಳೆ ಹೊಡೆಯುವ ಮೂಲಕ ಬೇರೆಯವರಿಗೆ ಧನ್ಯವಾದ ಆರ್ಪಿಸೋಣ ಎಂದೂ ಅವರು ಮಾರ್ಗದರ್ಶನ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ಈ ಜನತಾ ಕಾರ್ಫ್ಯೂ ಕರೆಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಮೋದಿಯವರ ಈ ಕರೆ ಅರ್ಥಪೂರ್ಣವಾಗಿದೆ. ಅದನ್ನು ಯಶಸ್ವಿಗೊಳಿಸುತ್ತೇವೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಈ ಜನತಾ ಕರ್ಫ್ಯೂ ಕರೆಯನ್ನು ಉಲ್ಲೇಖಿಸಿ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಕಹಳೆಯನ್ನೇ ಊದುತ್ತಿದ್ದಾರೆ. ಫೇಸ್ ಬುಕ್, ವಾಟ್ಸಾಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಜನತಾ ಕರ್ಫ್ಯೂ ಬೆಂಬಲಿಸಿ ಪೋಸ್ಟ್, ಸ್ಟೇಟಸ್’ಗಳನ್ನೂ ಹಾಕಿ, ಮೋದಿ ಕರೆಯನ್ನು ಬೆಂಬಲಿಸುತ್ತಿದ್ದಾರೆ. ಈ ಮೂಲಕ ಜನತಾ ಕರ್ಫ್ಯೂ ಯಶಸ್ಸಿಗೆ ಮುನ್ನುಡಿ ಬರಿರೆಯುತ್ತಿದ್ದಾರೆ.

Related posts