“ಆ ಅಂಬೆಗಾಲು.. ಮುದ್ದಾದ ಮೊದಲುಗಳು..” ಇದು ಮಗಳಿಗಾಗಿ ಕಿಚ್ಚನ ಹಾಡು..

ಬೆಂಗಳೂರು: ಕನ್ನಡ ಸಿನಿಲೋಕದ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅಭಿಮಾನಿಗಳು ಈ ವಿಚಾರದಲ್ಲಿ ಕಾತುರರಾಗಿದ್ದಾರೆ ಕಿಚ್ಚ ಸುದೀಪ್ ಹರಿಯಬಿಟ್ಟಿರುವ ಸುದ್ದಿಯೇ ಬೇರೆ.

ನೆನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು,,
ನನ್ನ ಮಗಳೀಗ ,,ಹದಿನಾರು ವರುಷ. ಇಟ್ಟ ಅಂಬೆಗಾಲು,
ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ,,ಒಂದೊಂದು ನಿಮಿಷ.
ಎದೆಯೆತ್ತರ ಬೆಳೆದಿರೋ ಕನಸು ನೀನು
ನಿನ್ನಿಂದಲೇ ಕಲಿಯುವ ಕೂಸು ನಾನು,
ಆಸೆಬುರುಕ ಅಪ್ಪ ನಾನು, ಮತ್ತೆ ಮಗುವಾಗು ನೀನು. 

ನಾಡು ಕೊರೊನಾ ವೈರಸ್ ಕಾರಣದಿಂದಾಗಿ ಲಾಕ್‍ಡೌನ್ ಸುಳಿಯಲ್ಲಿದೆ. ಅದಾಗಲೇ ಸುದೀಪ್ ಕೂಡಾ ತನ್ನ ಮುದ್ದಿನ ಮಗಳ ಬಗ್ಗೆ ಕವನಗಳ ಸಾಲುಗಳನ್ನು ಹೆಣೆದಿದ್ದಾರೆ. ಈ ಪೈಕಿ ಸಾಲೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ತಾನೊಬ್ಬ ಆಸೆಬುರುಕ ಅಪ್ಪ.. ನನಗಾಗಿ ಮತ್ತೆ ಮಗುವಾಗು ನೀನು.. ಎಂದು ಕೋರುತ್ತಾ ಮುದ್ದು ಮಗಳಿಗೆ ಹುಟ್ಟುಹಬ್ಬ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ.. ಕಣ್ಸನ್ನೆ ಬೆಡಗಿ ಗುಡ್ ಬೈ? ನಟಿಯನ್ನು ಕಾಡಿದವರು ಯಾರು ಗೊತ್ತಾ?

ಸುದೀಪ್ ಮಗಳು ಸಾನ್ವಿ 16ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಸುದೀಪ್ ತನ್ನ ಪುತ್ರಿಯ ಬಾಲ್ಯದ ಸಂಗತಿಗಳನ್ನು ಮಗುವಿನ ಮನಸ್ಸಿನಲ್ಲೇ ನೆನಪಿಸಿ ಗಮನಸೆಳೆದಿದ್ದಾರೆ.

 

ಸುದೀಪ್ ತನ್ನ ಮಗಳ ಹುಟ್ಟುಹಬ್ಬದ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಕಮೆಂಟ್ ಮೂಲಕ ಶುಭಾಶಯಗಳ ಹೂಮಳೆಗೈದಿದ್ದಾರೆ.

ಈ ಸಿನಿಮಾ ನಿರ್ದೇಶಕನ ಪಾಲಿಗೆ ಲಾಕ್’ಡೌನ್ ಸಿಹಿ ನೋವು; ರಜಾಕಾಲದಲ್ಲಿ ಇನ್ನೆರಡು ಕಥೆಗಳು ರೆಡಿ..

Related posts