ಮೊನ್ನೆ 99, ನಿನ್ನೆ 149 ಕೊರೋನಾ ಕೇಸ್.. ಕರ್ನಾಟಕದಲ್ಲಿ ಇಂದು ಎಷ್ಟು ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ಸೋಮವಾರ 99 ಕೇಸ್ ಪತ್ತೆಯಾದರೆ, ಮಂಗಳವಾರ 149 ಮಂದಿ ಸಿಂಕಿಗೊಳಗಾದ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿತ್ತು. ಇದೀಗ ಬುಧವಾರ ಬೆಳಿಗ್ಗೆ ಮತ್ತೆ 63 ಪಾಸಿಟಿವ್ ಕೇಸ್’ಗಳು ಹೊಸದಾಗಿ ಪತ್ತೆಯಾಗಿವೆ.

ಮಂಗಳವಾರ ಸಂಜೆ ನಂತರ ಬುಧವಾರ ಮಧ್ಯಾಹ್ನದ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 63 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿರುವ ಸಂಗತಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಹೇಳಿದೆ.
ಹಾಸನದಲ್ಲಿ 21 ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, ಮಂಡ್ಯಾದಲ್ಲಿ ಈ ಸಂಖ್ಯೆ 8ಕ್ಕೆ ಇಳಿದಿದೆ.

ಹಾಸನ – 21 ಹೊಸ ಕೇಸ್
ಬೀದರ್ – 10 ಹೊಸ ಕೇಸ್
ಮಂಡ್ಯ – 8 ಹೊಸ ಕೇಸ್
ಕಲಬುರಗಿ – 7 ಹೊಸ ಕೇಸ್
ಉಡುಪಿ – 6 ಹೊಸ ಕೇಸ್
ಬೆಂಗಳೂರು ನಗರ – 4 ಹೊಸ ಕೇಸ್
ತುಮಕೂರು – 4 ಹೊಸ ಕೇಸ್
ಉತ್ತರಕನ್ನಡ – 1 ಹೊಸ ಕೇಸ್
ದಕ್ಷಿಣಕನ್ನಡ – 1 ಹೊಸ ಕೇಸ್
ಯಾದಗಿರಿ – 1 ಹೊಸ ಕೇಸ್

ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ಮಾಹಿತಿ ನೀಡಿದೆ.

ಇದನ್ನೂ ಓದಿ.. ಕ್ವಾರಂಟೈನ್’ನಿಂದ ಪರಾರಿ ವಿಚಾರ; ಪೊಲೀಸ್ ಮೇಲೆ ಹಲ್ಲೆ 

 

Related posts