ಗೋಪಿಚಂದ್ ಅಭಿನಯದ ‘ಸಿಂಗಾ’ ಚಿತ್ರದ ಶೇ. 50ರಷ್ಟು ಚಿತ್ರೀಕರಣ ಪೂರ್ಣ

ಹೈದರಾಬಾದ್: ತೆಲುಗು ನಟ ಗೋಪಿಚಂದ್ ಅಭಿನಯದ ಆಕ್ಷನ್ ಎಂಟರ್‌ಟೈನರ್ ‘ಸಿಂಗಾ’ ಚಿತ್ರದ ಶೇ. 50ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ದೇಶಕ ವಿ. ವೆಂಕಟ್ ನೇತೃತ್ವದಲ್ಲಿ ಚಿತ್ರೀಕರಣ ವೇಗವಾಗಿ ಸಾಗುತ್ತಿದ್ದು, ಅರಣ್ಯದ ಮಾದರಿಯಲ್ಲಿ ನಿರ್ಮಿಸಲಾದ ಬೃಹತ್ ಸೆಟ್‌ಗಳಲ್ಲಿ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಡಿಸೆಂಬರ್‌ನಲ್ಲಿ ಮುಂದಿನ ಹಂತದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಗೋಪಿಚಂದ್, ಚಿತ್ರದ ಕುರಿತು ಕುತೂಹಲ ಹೆಚ್ಚಿಸಿದ್ದಾರೆ.

ಆಕ್ಷನ್ ಕೊರಿಯೋಗ್ರಾಫರ್ ವಿ. ವೆಂಕಟ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರವನ್ನು 70 ಎಂಎಂ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ವಿಜಯ್ ಚಿಲ್ಲಾ ಮತ್ತು ಶಶಿ ದೇವಿರೆಡ್ಡಿ ನಿರ್ಮಿಸುತ್ತಿದ್ದಾರೆ. ಮಲಯಾಳಂ ನಟಿ ಅನಾರ್ಕಲಿ ನಜರ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶಾಮ್‌ದತ್ ಛಾಯಾಗ್ರಹಣ, ಸ್ಯಾಮ್ ಸಿಎಸ್ ಸಂಗೀತ ಹಾಗೂ ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ. ಆಕ್ಷನ್, ಭಾವನೆ ಮತ್ತು ಡ್ರಾಮಾ ಮಿಶ್ರಣದ ಕಥೆಯಲ್ಲಿ ಗೋಪಿಚಂದ್ ಅವರನ್ನು ಹೊಸ ಅವತಾರದಲ್ಲಿ ತೋರಿಸಲು ತಂಡ ಸಿದ್ಧವಾಗಿದೆ.

Related posts