ಬೆಂಗಳೂರು: ಕೊರೋನಾ ಮಾಹಾಮಾರಿಯ ನಿಯಂತ್ರಣ ಇದೀಗ ದೇಶದ ಪಾಲಿಗೆ ಕಠಿಣ ಸವಾಲಾಗಿ ಪರಿಣಮಿಸಿದೆ. ಎದೆ ಸಂದರ್ಭದಲ್ಲಿ ಸೋಂಕು ಹರಡದಂತೆ ಸ್ವಯಂ ಎಚ್ಚರ ವಹಿಸಬೇಕೆಂದು ಅಭಿಪ್ರಾಯಪಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಪ್ರಧಾನಿಯವರ ಈ ಕರೆಯನ್ನು ಸ್ವಾಗತಿಸಿರುವ ದೇಶದ ಜನತೆ ನಾಳೆ ಇಡೀ ದಿನ ಮನೆಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
ಈ ನಡುವೆ ನಾಳೆ ಏನಿರುತ್ತೆ? ಏನಿರಲ್ಲ? ಎಂಬ ಪ್ರಶ್ನೆಗಳೂ ಹರಿದಾಡುತ್ತಿವೆ.
- ದೇಶಾದ್ಯಂದ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಭಾನುವಾರ ಬೆಂಗಳೂರು ಸಹಿತ ರಾಜ್ಯದ ಬಹುತೇಕ ನಗರ-ಪಟ್ಟಣಗಳು ಸ್ತಬ್ಧವಾಗಲಿವೆ.
- ಜನತಾ ಕರ್ಫ್ಯೂಗೆ ವರ್ತಕರೂ ಬೆಂಬಲ ಘೋಷಿಸಿದ್ದು, ಮಾರುಕಟ್ಟೆಗಳು ಬಂದ್ ಆಗಲಿವೆ.
- ಸ್ವೀಟ್ ಸ್ಟಾಲ್, ರೆಸ್ಟೋರೆಂಟ್, ಬೇಕರಿ, ಕೆಟರಿಂಗ್ಗಳೂ ಬಂದ್.
- ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್’ಗಳ ಸಂಚಾರವೂ ಇರಲ್ಲ.
- ಬಹುತೇಕ ಖಾಸಗಿ ಸರ್ವಿಸ್ ಹಾಗೂ ಸಿಟಿ ಬಸ್’ಗಳೂ ಅಲಭ್ಯ.
- ಅಗತ್ಯ ಇದ್ದರೆ ಮಾತ್ರ ಒಂದೇರಡು ಬಸ್ ಗಳು ಸಂಚಾರ ನಡೆಸಲಿವೆ.
- ನಮ್ಮ ಮೆಟ್ರೋ ರೈಲು ಕೂಡಾ ಬೆಳಗ್ಗೆಯಿಂದ ಸಂಜೆಯವರೆಗೆ ಇರುವುದಿಲ್ಲ.
- ಓಲಾ ಮತ್ತು ಊಬರ್ ಟ್ಯಾಕ್ಸಿ ಸಂಸ್ಥೆಗಳ ಕ್ಯಾಬ್ ಸೇವೆ ಸಿಗಲ್ಲ.
- ಹಾಲು ತರಕಾರಿ ಸಹಿತ ಅಗತ್ಯ ವಸ್ತುಗಳ ಮಾರಾಟ ವಿರಳವಾಗಲಿದೆ.
- ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆ ಎಂದಿನಂತೆ ಇರಲಿವೆ.