ನಾಳೆ ಜನತಾ ಕರ್ಫ್ಯೂ; ಏನಿರುತ್ತೆ? ಏನಿರಲ್ಲ?.. ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೋನಾ ಮಾಹಾಮಾರಿಯ ನಿಯಂತ್ರಣ ಇದೀಗ ದೇಶದ ಪಾಲಿಗೆ ಕಠಿಣ ಸವಾಲಾಗಿ ಪರಿಣಮಿಸಿದೆ. ಎದೆ ಸಂದರ್ಭದಲ್ಲಿ ಸೋಂಕು ಹರಡದಂತೆ ಸ್ವಯಂ ಎಚ್ಚರ ವಹಿಸಬೇಕೆಂದು ಅಭಿಪ್ರಾಯಪಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಪ್ರಧಾನಿಯವರ ಈ ಕರೆಯನ್ನು ಸ್ವಾಗತಿಸಿರುವ ದೇಶದ ಜನತೆ ನಾಳೆ ಇಡೀ ದಿನ ಮನೆಯಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ಈ ನಡುವೆ ನಾಳೆ ಏನಿರುತ್ತೆ? ಏನಿರಲ್ಲ? ಎಂಬ ಪ್ರಶ್ನೆಗಳೂ ಹರಿದಾಡುತ್ತಿವೆ.

  • ದೇಶಾದ್ಯಂದ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಭಾನುವಾರ ಬೆಂಗಳೂರು ಸಹಿತ ರಾಜ್ಯದ ಬಹುತೇಕ ನಗರ-ಪಟ್ಟಣಗಳು ಸ್ತಬ್ಧವಾಗಲಿವೆ.
  • ಜನತಾ ಕರ್ಫ್ಯೂಗೆ ವರ್ತಕರೂ ಬೆಂಬಲ ಘೋಷಿಸಿದ್ದು, ಮಾರುಕಟ್ಟೆಗಳು ಬಂದ್ ಆಗಲಿವೆ.
  • ಸ್ವೀಟ್ ಸ್ಟಾಲ್, ರೆಸ್ಟೋರೆಂಟ್, ಬೇಕರಿ, ಕೆಟರಿಂಗ್​ಗಳೂ ಬಂದ್.
  • ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್’ಗಳ ಸಂಚಾರವೂ ಇರಲ್ಲ. 
  • ಬಹುತೇಕ ಖಾಸಗಿ ಸರ್ವಿಸ್ ಹಾಗೂ ಸಿಟಿ ಬಸ್’ಗಳೂ ಅಲಭ್ಯ.
  • ಅಗತ್ಯ ಇದ್ದರೆ ಮಾತ್ರ ಒಂದೇರಡು ಬಸ್ ಗಳು ಸಂಚಾರ ನಡೆಸಲಿವೆ.
  • ನಮ್ಮ ಮೆಟ್ರೋ ರೈಲು ಕೂಡಾ ಬೆಳಗ್ಗೆಯಿಂದ ಸಂಜೆಯವರೆಗೆ ಇರುವುದಿಲ್ಲ.
  • ಓಲಾ ಮತ್ತು ಊಬರ್ ಟ್ಯಾಕ್ಸಿ ಸಂಸ್ಥೆಗಳ ಕ್ಯಾಬ್ ಸೇವೆ ಸಿಗಲ್ಲ.
  • ಹಾಲು ತರಕಾರಿ ಸಹಿತ ಅಗತ್ಯ ವಸ್ತುಗಳ ಮಾರಾಟ ವಿರಳವಾಗಲಿದೆ.
  • ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆ ಎಂದಿನಂತೆ ಇರಲಿವೆ.

Related posts