ಬೆಂಗಳೂರು: ನೌಕರರ ಕೋರಿಕೆ ಮೇರೆಗೆ KSRTC ಅಂತರ ನಿಗಮ ವರ್ಗಾವಣೆಯಲ್ಲಿ ಒಟ್ಟು 1308 ನೌಕರರಿಗೆ ವರ್ಗಾವಣೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ದಿನಾಂಕ: 05-07-2023 ರ ಬೆಳಿಗ್ಗೆ 11:00 ಗಂಟೆಯಿಂದ ಪ್ರಾರಂಭವಾಗಿದ್ದು, ದಿನಾಂಕ:31-12-2023 ರ ಸಂಜೆ 5:30 ರವರೆಗೆ ಆನ್-ಲೈನ್ ಮೂಲಕ www.ksrtc.org/transfer ರಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತು.
ಇದೇ ಪ್ರಥಮ ಬಾರಿಗೆ ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ಹಾಗೂ ತೀವ್ರ ತರಹದ ಅನಾರೋಗ್ಯ (ಹೃದಯ ರೋಗ, ಕ್ಯಾನ್ಸರ್, ಸ್ಪಯಿನಾಲ್ ಕಾರ್ಡ್, ಕಿಡ್ನಿ ವೈಪಲ್ಯ ಹಾಗೂ ಮೆದಳು ಸಂಭಂದಿಸಿದ ಖಾಯಿಲೆಗಳು) ನೌಕರರ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ 5 ರಷ್ಟು ಹುದ್ದೆಗಳನ್ನು ಮೀಸಲಿರಿಸಲಾಗಿದೆ ಎಂದು ಸಾರಿಗೆ ಸಚಿವರು ಸಾಮಾಜಿಕ ಜಾಲತಾಣ ‘X’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನೌಕರರ ಕೋರಿಕೆ ಮೇರೆಗೆ ಕೆಎಸ್ಆರ್ ಟಿಸಿ ಅಂತರ ನಿಗಮ ವರ್ಗಾವಣೆಯಲ್ಲಿ ಒಟ್ಟು 1308 ನೌಕರರಿಗೆ ವರ್ಗಾವಣೆ ಸೌಲಭ್ಯ ಕಲ್ಪಿಸಲಾಗಿದೆ.
ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ದಿನಾಂಕ: 05-07-2023 ರ ಬೆಳಿಗ್ಗೆ 11:00 ಗಂಟೆಯಿಂದ ಪ್ರಾರಂಭವಾಗಿದ್ದು, ದಿನಾಂಕ:31-12-2023 ರ… pic.twitter.com/TfXfVWEGMV
— Ramalinga Reddy (@RLR_BTM) November 29, 2024
ನೌಕರರ ಪತಿ ಅಥವಾ ಪತ್ನಿಯು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯ ಅಧಿಕಾರಿ/ನೌಕರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕರಣಗಳಿಗೆ ಅಂತರ ನಿಗಮ ವರ್ಗಾವಣೆಯ ಶೇ 5 ರಷ್ಟು ಹುದ್ದೆಗಳನ್ನು ಮೀಸಲಿರಿಸಿದ್ದು, ಒಟ್ಟು ಶೇಡಕ 10 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ.
ಅಂತರ ನಿಗಮ ವರ್ಗಾವಣೆಯ ವಿವರಗಳು ಈ ಕೆಳಗಿನಂತಿವೆ.
- ಅಂತರ ನಿಗಮ ಸಾಮಾನ್ಯ ವರ್ಗದಡಿ ವರ್ಗಾವಣೆಗೊಂಡ ನೌಕರರ ಸಂಖ್ಯೆ – 1175
- ನೌಕರರ ಪತಿ ಅಥವಾ ಪತ್ನಿಯು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಸ್ವಾಮ್ಯದ ಸಂಸ್ಥೆಯ ಅಧಿಕಾರಿ/ನೌಕರರಾಗಿ ಬೇರೆ ಬೇರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕರಣಗಳನ್ನು ಪರಿಗಣಿಸಿ ವರ್ಗಾವಣೆಗೊಂಡಿರುವ ನೌಕರರ ಸಂಖ್ಯೆ – 72
- ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ನೌಕರರು ತೀವ್ರ ತರಹದ ಅನಾರೋಗ್ಯ, ಹೃದಯ ರೋಗ, ಕ್ಯಾನ್ಸರ್, ಸ್ಪೈನಲ್ ಕಾರ್ಡ್, ಕಿಡ್ನಿ ವೈಫಲ್ಯ ಹಾಗೂ ಮೆದಳು ಸಂಬಂಧಿಸಿದ ಖಾಯಿಲೆಗಳು) ಪ್ರಕರಣದಲ್ಲಿ ನೌಕರರ ಕೋರಿಕೆ ಪರಿಗಣಿಸಿ ವರ್ಗಾವಣೆಗೊಂಡಿರುವ ನೌಕರರ ಸಂಖ್ಯೆ – 61
ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ರ 1,308 ನೌಕರರು ಅಂತರ ನಿಗಮ ವರ್ಗಾವಣೆಗೆ ಅವರ ಕೋರಿಕೆ ಮೇರೆಗೆ ಅರ್ಹರಿರುತ್ತಾರೆ.
ಸದರಿ ಸಂಭವನೀಯ ಅಂತರ ನಿಗಮ ವರ್ಗಾವಣೆ ಪಟ್ಟಿಯನ್ನು ksrtc.karnataka.gov.in ವೆಬ್ಸೈಟ್ನಲ್ಲಿ ದಿನಾಂಕ: 28.11.2024 ರಂದು ಪ್ರಕಟಿಸಲಾಗಿದೆ. ಸದರಿ ಪಟ್ಟಿಗೆ ದಿನಾಂಕ: 28.11.2024 ರಿಂದ ದಿನಾಂಕ: 04.12.2024 ರ ಸಂಜೆ 5.30 ರವರೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ನೌಕರರಿಗೆ ಅವಕಾಶವನ್ನು ನೀಡಲಾಗಿದೆ ಎಂದು ಸಾರಿಗೆ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.