ದೆಹಲಿ: ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮತ್ತೆ 19 ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸಲಾಗಿದೆ. ಈ ಸಂಬಂಧ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೇ 3ರ ವರೆಗೆ ಮತ್ತೆ ಲಾಕ್ ಡೌನ್ ಘೋಷಿಸಿದ್ದಾರೆ. ದೇಶವನ್ನು ರಕ್ಷಣೆ ಮಾಡಬೇಕಾದರೆ ಇದು ಅನಿವಾರ್ಯ ಎಂದು ಪ್ರಧಾನಿಯವರು ಹೇಳೀದ್ದಾರೆ.
ಕೊರೋನಾ ಅಟ್ಟಹಾಸದಿಂದ ನಲುಗಿರುವ ಜಗತ್ತಿನ ವಿವಿಧ ದೇಶಗಳು ಲಾಕ್ ಡೌನ್’ನ ಕಠಿಣ ವ್ಯೂಹವನ್ನು ರಚಿಸಿವೆ. ಇತ್ತ ಭಾರತವೂ ಅನಿವಾರ್ಯ ಎಂಬಂತೆ ಎರಡನೇ ಅವಧಿಯ ಲಾಕ್ ಡೌನ್ ಘೋಷಿಸಿದ್ದು, ಈಗಿರುವ ಕಠಿಣ ಪರಿಸ್ಥಿತಿ ಮತ್ತೆ ಎರಡು ವಾರಗಳ ಕಾಲ ವಿಸ್ತರಣೆಯಾಗಿದೆ.
ಈ ಕುರಿತಂತೆ ಬೆಳಿಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಈ ಮಾರಕ ವೈರಾಣುವಿನಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಸುಲಭ ಮಾರ್ಗ ಎಂದ ಅವರು, ಈ ನಿರ್ಧಾರದಲ್ಲಿ ಒಗ್ಗಟ್ಟಾಗಿರೋಣ ಎಂದು ಮನವಿ ಮಾಡಿದರು.
ಲಾಕ್ ಡೌನ್ ವಿಸ್ತರಣೆ ಘೋಷಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಪ್ತ ಸೂತ್ರಗಳನ್ನು ದೇಶವಾಸಿಗಳ ಮುಂದಿಟ್ಟಿದ್ದಾರೆ.
ಮೋದಿ ಸಪ್ತ ಸೂತ್ರ ಹೀಗಿದೆ:
- ಮನೆಯ ಹಿರಿಯ ಸದಸ್ಯರ ಆರೋಗ್ಯದತ್ತ ಹೆಚ್ಚನ ಕಾಳಜಿ ಇರಲಿ
- ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು . ಲಾಕ್ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು.
- ಆಯುಷ್ಯ ಸಚಿವಾಲಯದ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
- ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ಲೋಡ್ ಮಾಡಿ.
- ನಿರ್ಗತಿಕರು, ಅಸಹಾಯಕರು ಸೇರಿದಂತೆ ಸಂಕಷ್ಟದಲ್ಲಿರುವವರ ನೆರವಿಗೆ ಬನ್ನಿ.
- ಕಾರ್ಮಿಕರನ್ನು ಕೆಲಸದಿಂದ ಕೆಲಸದಿಂದ ತೆಗೆಯಬೇಡಿ. ಸಹೋದ್ಯೋಗಿಗಳೊಂದಿಗೆ ಸಂವೇದನೆ ಇರಲಿ,.
- ರೋಗ್ಯ ಶುಚಿತ್ವ ಕಾರ್ಯಕರ್ತರ ಬಗ್ಗೆ ಗೌರವ ಇರಲಿ. ವೈದ್ಯ ಸಮುದಾಯ, ಪೊಲೀಸ್ ಇಲಾಖೆ ಹಾಗೂ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವವರನ್ನು ಗೌರವದಿಂದ ಕಾಣಬೇಕು.
ಮೋದಿಯವರ ಈ ಭಾಷಣ ಬಗ್ಗೆ ಇಡೀ ದೇಶವೇ ಕುತೂಹಲದಿಂದ ಇತ್ತು. ಏಪ್ರಲ್ ತಿಂಗಳ 30ರವರೆಗೆ ಲಾಕ್ ಡೌನ್ ವಿಸ್ತರಣೆಯಾಗುವ ಬಗ್ಗೆ ನಿರೀಕ್ಷಿಸಲಾಗಿತ್ತಾದರೂ, ಮೋದಿಯವರು ಮೇ 3ರ ವರೆಗೆ ಇದನ್ನು ವಿಸ್ತರಿಸಿದ್ದಾರೆ.