ಮಾವು ಪ್ರಿಯರಿಗೆ ಸಿಹಿ ಸುದ್ದಿ; ಮತ್ತಷ್ಟು ಹಾಪ್’ಕಾಮ್ಸ್ ಮಳಿಗೆ ತೆರೆಯಲು ನಿರ್ಧಾರ

ಮಾವು ಸೀಸನ್ ಸಂದರ್ಭದಲ್ಲೂ ಜನರಿಗೆ ಈ ಹಣ್ಣು ಸಿಗುತ್ತಿಲ್ಲ. ಲಾಕ್’ಡೌನ್ ಕಾರಣಕ್ಕಾಗಿ ಹಣ್ಣು ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಈ ಸಮಸ್ಯೆ ಬಗೆಹರಿಸಲು ಸರ್ಕಾರ ಪ್ಲಾನ್ ಮಾಡಿದೆ.

ಕೋಲಾರ: ಇದೀಗ ಬೇಸಿಗೆ. ಹೇರಳವಾಗಿ ಮಾವು ಬೆಳೆಯಲಾಗಿದ್ದರೂ ಜನರಿಗೆ ಸಿಗುತ್ತಿಲ್ಲ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮಾವು ಹಾಗೂ ಹಣ್ಣು-ತರಕಾರಿ ಸಾಗಿಸಲು ಅಡ್ಡಿಯಾಗುತ್ತಿವೆರ್. ಇದರಿಂದಾಗಿ ಹಣ್ಣು ಪ್ರಿಯರಿಗೆ ನಿರಾಸೆಯಾಗಿದ್ದರೆ ಬೆಳೆಗಾರವು ನಷ್ಟದಿಂದ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೆಚ್ಚುವರಿ ಹಾಪ್’ಕಾಮ್ಸ್ ಮಳಿಗೆಗಳನ್ನು ತೆರೆಯುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ರಾಜ್ಯದ ಇತರೆಡೆಗೆ ಹೋಲಿಸಿದರೆ ಕೋಲಾರದಲ್ಲಿ ಗಣನೀಯ ಪ್ರಮಾಣದಲ್ಲಿ ತರಕಾರಿ, ಮಾವು ಬೆಳೆಯುತ್ತಾರೆ. ಈ ಬಾರಿ ಟೊಮ್ಯಾಟೊ, ಕ್ಯಾಪ್ಸಿಕಂ ಉತ್ತಮ‌ ಇಳುವರಿ ಬಂದಿದೆ. ಆದರೆ ಎಂದಿನಂತೆ ಮಾರುಕಟ್ಟೆ ಇಲ್ಲದಿರುವುದರಿಂದ ತೊಂದರೆಯಾಗಿದೆ. ಆದ್ದರಿಂದ ರಾಜ್ಯದ್ಯಂತ ಈಗ ಇರುವುದಕ್ಕಿಂತಲೂ‌‌ ದುಪ್ಪಟ್ಟು ಸಂಖ್ಯೆಯ ಹಾಪ್ ಕಾಮ್ಸ್ ಮಳಿಗೆ ತೆರೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.

ಕೋಲಾರದಲ್ಲಿ ಕೃಷಿ ಪ್ರಗತಿ ಪರಿಶೀಲನೆ‌ ಸಭೆ ನಡೆಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ಉತ್ಪನ್ನಗಳು ಸಕಾಲದಲ್ಲಿ ಜನರಿಗೆ ಸಿಗುವಂತಾಗಬೇಕು. ಹಾಗಾಗಿ ರಾಜ್ಯದಲ್ಲಿ ಹೆಚ್ಚುವರಿ ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಯಾವುದೇ ನಿರ್ಬಂಧವೂ ಇರುವುದಿಲ್ಲ.‌ ಇದಲ್ಲದೇ ಕೃಷಿ ಚಟುವಟಿಕೆಗೂ ಅಡ್ಡಿಯಿಲ್ಲ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಹೆಚ್ಚುವರಿ ವಾಹನ ಬಳಸುವ ಕುರಿತು ಚಿಂತನೆ ನಡೆದಿದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು. ಈಗಾಗಲೇ ಪುಷ್ಪಕೃಷಿ ಬೆಳೆಗಾರರ ಸ್ಥಿತಿಗತಿ ಸರ್ಕಾರದ ಗಮನಕ್ಕೆ ಬಂದಿದೆ. ಪುಷ್ಪಕೃಷಿ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ.. ಬರಲಿದೆ ಹೊಸ 100 ರೂ ನೋಟು.. ವಿಶೇಷತೆ ಏನು ಗೊತ್ತಾ?

Related posts