ಕೊರೋನಾ ಹಿನ್ನೆಲೆ… ಬಂಟ್ವಾಳ ಬಿಜೆಯಿಯಿಂದ ಜಾಗೃತಿ ಸಂದೇಶ

ಮಂಗಳೂರು: ಕರಾವಳಿಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯ ಸಂದೇಶದ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.  ಕೊರೋನಾ ಹಾವಳಿ ಸಂದರ್ಭದಲ್ಲಿ ತುರ್ತು ಸೇವೆಗಾಗಿ ರಚನೆಗೊಂಡಿರುವ ಆರೋಗ್ಯ ಕಾರ್ಯಕರ್ತರು ತಮ್ಮ ಸಂದೇಶಗಳನ್ನು ಜನರಿಗೆ ಸಾರಿ ಹೇಳುವ ಕಾರ್ಯದಲ್ಲಿ ತೊಡಗಿದ್ದಾರೆ.
ಆ ಸಂದೇಶ ಹೀಗಿದೆ ನೋಡಿ..

ಇದನ್ನೂ ಓದಿ…  ಕೊರೋನಾ ಆತಂಕ ಬೇಡ;
ಕರಾವಳಿ ಶಾಸಕ ರಾಜೇಶ್ ನಾಯ್ಕ್ ಸೈನ್ಯದಿಂದ ಮಾದರಿ ಕಾರ್ಯ

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಕ್ಷೇತ್ರ
ಸಜ್ಜನ ನಾಗರಿಕರಲ್ಲಿ ವಿನಂತಿ. ವಿಶ್ವದಾದ್ಯಂತ ಮಹಾಮಾರಿ ಕೊರೋನವು ತನ್ನ ರೌದ್ರಾವತಾರವನ್ನು ತೋರಿಸುತಿದ್ದು ಭಾರತದಲ್ಲು ತನ್ನ ಕಬಂಧ ಬಾಹುವನ್ನು ಹರಡಿದೆ. ನಮಗೆ ತಿಳಿದಂತೆ ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಎರಡನೇ ಹಂತಕ್ಕೆ ಪ್ರವೇಶಿಸಿದೆ. ಆದರೂ ನಮ್ಮ ಪ್ರಜೆಗಳು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ವಿಪರ್ಯಾಸವಾಗಿದೆ. ಈ ಮಹಾಮಾರಿಗೆ ಮದ್ದಿಲ್ಲ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮನೆಯಲ್ಲಿರುವುದೇ ಏಕೈಕ ಮದ್ದು. ತಮ್ಮಲ್ಲಿ ಕೈ ಮುಗಿದು ಪ್ರಾರ್ಥಿಸುವುದಿಷ್ಟೆ ದಯವಿಟ್ಟು ಸುಖಾಸುಮ್ಮನೆ ಅಡ್ಡಾಡುವುದು, ಗೆಳೆಯರೊಂದಿಗೆ ಆಟ ಆಡುವುದು, ನದಿಯಲ್ಲಿ ಸಾಮೂಹಿಕವಾಗಿ ಸ್ನಾನ ಮಾಡುವುದು, ಗುಂಪಾಗಿ ಚರ್ಚೆ ಮಾಡುವುದು ಮಾಡಬೇಡಿ. ಸರಕಾರ ನಮ್ಮ ಒಳಿತಿಗೆ ನೀಡಿದ ಸೂಚನೆಗಳನ್ನು ಉಲ್ಲಂಘಿಸುವುದು ನಿಮ್ಮ ಮತ್ತು ನಿಮ್ಮ ಮನೆಯವರಿಗೆ ಖಂಡಿತವಾಗಿಯೂ ಅಪಾಯವನ್ನು ತರುತ್ತದೆ. ಮತ್ತೊಮ್ಮೆ ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತಿದ್ದೇವೆ ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ ಮತ್ತೆ ಮನೆಗೆ ಹೋಗುವಾಗ ರೋಗವನ್ನು ಕೊಂಡುಹೋಗುವುದು ಬೇಡ. ರೋಗ ಯಾರಿಗೂ ಅಂಟಿಕೊಂಡರು 14 ದಿನ ಸುಪ್ತವಾಗಿರುತ್ತದೆ. ಅಷ್ಟು ಸಮಯ ಅವರ ಸಂಪರ್ಕಕ್ಕೆ ಬರುವ ಎಲ್ಲರಿಗೂ ಹಂಚುತ್ತ ಹೋಗುವ ಅಪಾಯಕಾರಿ ಲಕ್ಷಣ ಈ ರೋಗಕ್ಕಿದೆ. ರೋಗನಿರೋದಕ ಶಕ್ತಿ ಸದೃಡವಾಗಿರುವವರು ಅಗೂ ಹೇಗೋ ಬದುಕಿಕೊಳ್ಳಬಹುದು ಮನೆಯ ದೀಪದಂತಿರುವ ಮಕ್ಕಳ ಮತ್ತು ಹೊತ್ತು ಹೆತ್ತು ಸಲಹಿದ ಹಿರಿಯರ ಪಾಡೇನು?? 15 ದಿನ ಉಪ್ಪು ಗಂಜಿ ಕುಡಿದಾದರೂ ಬದುಕುವ ನಮ್ಮ ಮನೆಯ ಹಳೆ ಬೇರು ಹೊಸ ಚಿಗುರುಗಳನ್ನು ಕಾಪಾಡುವ ಜೊತೆಗೆ ನಮ್ಮ ಗ್ರಾಮದ, ನಮ್ಮ ತಾಲೂಕಿನ, ನಮ್ಮ ರಾಜ್ಯದ ಆರೋಗ್ಯ ಕಾಪಾಡುತ್ತ ಭವಿಷ್ಯದ ಭವ್ಯ ಕರೋನಮುಕ್ತ ಭಾರತ ವನ್ನು ಕಟ್ಟೋಣ. ಪರಶುರಾಮ ಸೃಷ್ಟಿಯಲ್ಲಿ ನಾವು ನಂಬಿರುವ ದೈವ ದೇವರುಗಳು ನಮಗೆಲ್ಲರಿಗೂ ಅ ಶಕ್ತಿಯನ್ನು ನೀಡಲಿ ಎಂಬ ಪ್ರಾರ್ಥನೆ ನಮ್ಮದು.
✍ಬಿಜೆಪಿ ಬಂಟ್ವಾಳ ಕ್ಷೇತ್ರ   

ರಾಜ್ಯದಲ್ಲಿ ಕೊರೋನಾಗೆ ಮತ್ತೊಂದು ಬಲಿ; ಸಾವಿನ ಸಂಖ್ಯೆ 3ಕ್ಕೆ ಏರಿಕೆ

Related posts