ರಾಜಧಾನಿ ಸೆರಗಿನಲ್ಲೇ ಕೊರೋನಾ ನರ್ತನ; ಮತ್ತಷ್ಟು ಪ್ರಕರಣಗಳು ಪತ್ತೆ

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿನ ನೆರೆ ಜಿಲ್ಲೆ ಚಿಕ್ಕಬಳ್ಳಾಪುರವೂ ಇದೀಗ ಕೊರೋನಾ ಸಂತ್ರಸ್ಥ ನಾಡಾಗಿ ಗುರುತಾಗಿದೆ. ಕೆಲ ದಿನಗಳ ಹಿಂದಷ್ಟೇ ಗೌರೀಬಿದನೂರಿನನ್ನಿ ವಾಸವಿದ್ದ ಆಂಧ್ರ ಮೂಲದ ವೃದ್ಧೆಯೊಬ್ಬರು ಕೊರೋನಾ ಸೋಂಕಿನಿಂದಾಗಿ ಅಸು ನೀಗಿದ್ದಾರೆ ಇದೀಗ ಇಡೀ ಚಿಕ್ಕಬಳ್ಳಾಪುರವೇ ಕೊರೋನಾ ಆತಂಕದಲ್ಲಿದೆ. ಇದೀಗ ಮತ್ತೆ ಹೊಸದಾಗಿ 9 ಮಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ಸುದ್ದಿ ಆತಂಕ ಆವರಿಸುವಂತೆ ಮಾಡಿದೆ.

ಇದನ್ನೂ ಓದಿ..
ಮಂಗಳೂರಿನ ಇಡೀ ಗ್ರಾಮಕ್ಕೆ ದಿಗ್ಬಂಧನ

ಈವರೆಗೂ ನಾಲ್ವರಿಗಷ್ಟೇ ಸೋಂಕು ಇದೆ ಎಂದು ಹೇಳಲಾಗುತ್ತಿತ್ತು. ಹೊಸದಾಗಿ 5 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಹೇಳಿದ್ದಾರಾದರೂ, ಶನಿವಾರ ಬೆಳಿಗ್ಗೆ ಈ ಸಂಖ್ಯೆ 9 ಕ್ಕೇರಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಮೆಕ್ಕಾ ಪ್ರವಾಸ ಕೈಗೊಂಡು ವಾಪಸ್ ಆಗಿದ್ದ ಕುಟುಂಬ ಈ ಸೋಂಕಿಗೊಳಗಾಗಿದೆ ಎಂದು ಹೇಳಲಾಗುತ್ತಿದೆ. ಇವರೆಲ್ಲರೂ ಮಧ್ಯವಸ್ಕರಾಗಿದ್ದು ಸೋಂಕಿತರಿಗೆ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಇನ್ನೊಂದೆಡೆ ತುಮಕೂರು ಜಿಲ್ಲೆ ಶಿರಾದಲ್ಲಿ ವೃದ್ಧರೊಬ್ಬರು ಕೊರೋನಾ ಸೋಂಕಿನಿಂದಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಆ ಗ್ರಾಮಕ್ಕೆ ಇತರರು ಪ್ರವೇಶಿಸದಂತೆ ದಿಗ್ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ..

ಮನೆಯಿಂದ ಹೊರಬಂದರೆ ಅರೆಸ್ಟ್ 

Related posts