ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಮಾ.3ರಂದು ಸಾಧ್ಯವೇ?

ದೆಹಲಿ: ಗಲ್ಲು ಶಿಕ್ಷೆ ಮುಂದೂಡಲು ನಿರ್ಭಯಾ ಪ್ರಕರಣದ ಅಪರಾಧಿಗಳು ಕಸರತ್ತು ನಡೆಸುತ್ತಲೇ ಇದ್ದಾರೆ. ಕ್ಷಮಾದಾನದ ನೆಪ, ಅಸ್ವಸ್ಥತೆಯ ಕಾರಣಗಳನ್ನು ಮುಂದಿಡುತ್ತಾ ನ್ಯಾಯಾಲದ ಮೆಟ್ಟಿಲೇರುತ್ತಲಿರುವ ಅಪರಾಧಿಗಳು ಇದೀಗ ಗಲ್ಲು ಮುಂದೂಡಿಸುವ ಪ್ರಯತ್ನಕ್ಕಿಳಿದಿದ್ದಾರೆ.

ಈ ನಡುವೆ ನಾಲ್ವರು ಅತ್ಯಾಚಾರಿಗಳಿಗೆ ಮಾ. 3ರಂದು ಗಲ್ಲು ಶಿಕ್ಷೆ ಜಾರಿ ಅಸಾಧ್ಯವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಯುತ್ತಿವೆ. ನ್ಯಾಯಾಲಯವು ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ಮಾ. 3ರ ಬೆಳಗ್ಗೆ 6 ಗಂಟೆಗೆ ಸಮಯವನ್ನು ನಿಗದಿಪಡಿಸಿತ್ತು. ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಆದರೆ ಈ ಅರ್ಜಿ ಸಲ್ಲಿಕೆಯಾಗಿರುವುದು ಕೇಂದ್ರ ಸರ್ಕಾರದಿಂದ.

ದೋಷಿಗಳನ್ನು ಪ್ರತ್ಯೇಕವಾಗಿ ಗಲ್ಲುಶಿಕ್ಷೆ ವಿಧಿಸಲು ಸಾಧ್ಯ ವಿಲ್ಲ, ಎಲ್ಲ ನಾಲ್ವರನ್ನೂ ಒಟ್ಟಿಗೇ ನೇಣುಗಂಬಕ್ಕೇರಿಸಬೇಕು ಎಂದು ಹೈಕೋರ್ಟ್‌ ಇತ್ತೀಚಿಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ, ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯ ವಿಚಾರಣೆ ಮಾರ್ಚ್ 5ರಂದು ಪೀಠದ ಮುಂದೆ ಬರಲಿದೆ. ಅಂದಿನ ಬೆಳವಣಿಗೆಯನ್ನಾಧರಿಸಿ ಅಪರಾಧಿಗಳ ಶಿಕ್ಷೆ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ.

Related posts