ಚಂದನ್ ಶೆಟ್ಟಿ-ನಿವೇದಿತಾ ಮದುವೆ ಸಂಭ್ರಮ

ಮೈಸೂರು: ಬಿಗ್ ಬಾಸ್ ತಾರೆಯರಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ ಮದುವೆಯ ಸಂಭ್ರಮದಲ್ಲಿದ್ದಾರೆ. ಅವರು ಬುಧವಾರ ಹಸಮನೆ ಏರಲಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮದುವೆ ಸಂಭ್ರಮ. ಈ ಜೋಡಿಯ ಅರತಕ್ಷತೆಯ ಸಡಗರವೂ ಚಂದನವನದ ಗಣ್ಯರ ಅದ್ದೂರಿ ಖುಷಿಗೆ ವೇದಿಕೆಯಾಯಿತು. ಮಂಗಳವಾರ ನಡೆದ ಆರತಕ್ಷತೆ ಸಮಾರಂಭದಲ್ಲಿ ಬಾರ್ಬಿ ಡಾಲ್​ನಂತೆ ಗೌನ್​ ತೊಟ್ಟ ನಿವೇದಿತಾ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.

ನವ ದಾಂಪತ್ಯಕ್ಕೆ ಕಾಲಿಡಲಿರುವ ನಿವೇದಿತಾ ಹಾಗೂ ಚಂದನ್​ ಶೆಟ್ಟಿಗೆ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್, ಧ್ರುವಾ ಸರ್ಜಾ, ಸಹಿತ ಕನ್ನಡ ಸಿನಿಮಾ ರಂಗದ ಗಣ್ಯರು ಶುಭ ಹಾರೈಸಿದರು.

Related posts