ಟ್ರಾಂಪ್ ಭೇಟಿಯಿಂದ್ ಭಾರತಕ್ಕೆ ಸಿಕ್ಕಿದೆ ರಕ್ಷಣಾ ಬಲ

ದೆಹಲಿ: ಅಮೆರಿಕ-ಭಾರತ ನಡುವೆ ಸಮರ ಹೆಲಿಕಾಪ್ಟರ್‌ಗಳ ಖರೀದಿ ವ್ಯವಹಾರ ಸಂಬಂಧಿಸಿದ ಒಪ್ಪಂದ ಏರ್ಪಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಪ್ರವಾಸ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಮುದ್ರೆ ಒತ್ತಿದ್ದಾರೆ.

ಸುಮಾರು 3 ಶತಕೋಟಿ ಡಾಲರ್‌ ಅಂದಾಜು ವೆಚ್ಚದ ಸಮರ ಹೆಲಿಕಾಪ್ಟಾರ್ ಖರೀದಿ ಒಪ್ಪಂದ ಇದಾಗಿದ್ದು ವ್ಯವಹಾರ ಪರಿಪೂರ್ಣವಾದರೆ, ವಿಶ್ವದಲ್ಲೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎಎಚ್‌ ಅಪಾಚೆ – 64 ಇ ಮಾದರಿಯ 6 ಹೆಲಿಕಾಪ್ಟರ್‌ ಎಂಎಚ್‌-60 ಮಾದರಿಯ 24 ಹೆಲಿಕಾಪ್ಟರ್‌ಗಳು ಭಾರತದ ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಗೊಳಿಸಲಿದೆ.

ದೆಹಲಿಯಲ್ಲಿರುವ ಹೈದರಾಬಾದ್‌ ಹೌಸ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಮಹತ್ವದ ಒಡಂಬಡಿಕೆಗೆ ಮಂಗಳವಾರ ಸಹಿ ಹಾಕಿದ್ದಾರೆ.

ಅರೋಗ್ಯ, ಔಷಧಿ ತೈಲೋದ್ಯಮ, ಸಹಿತ ಇನ್ನೂ ಅನೇಕ ಕ್ಷೇತ್ರಗಳ ವ್ಯಾಪಾರ ಸಹಕಾರ ಒಪ್ಪಂದವೂ ಇದೆ ವೇಳೆ ಏರಪಟ್ಟಿದ್ದು, ಅಮೆರಿಕಾ ಅಧ್ಯಕ್ಷರ ಭಾರತ ಭೇಟಿ ನಮ್ಮ ದೇಶಕ್ಕೆ ವರದಾನವಾಗಿದೆ ಎಂದು ವಿಶ್ಲೇಷಣೆಗಳು ಕೇಳಿಬಂದಿವೆ.

Related posts