ವೀರಂ ಸಿನಿಮಾದ ರಿಮೇಕ್; ಒಡೆಯ ದರ್ಶನ್ ಅಬ್ಬರ ಜೋರು

ಒಂದೊಮ್ಮೆ ದಾಸ, ಆಮೇಲೆ ಯಜಮಾನ.. ಇದೀಗ ಒಡೆಯ..  ಎಲ್ಲೆಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದೇ ಹವಾ. ಅದರಲ್ಲೂ ಒಡೆಯ ಟೈಟಲಂತೂ ಸಕತ್ ಸದ್ದು ಮಾಡುತ್ತಿದೆ..

ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿರುವ ಒಡೆಯ ತೆರೆ ಮೇಲೆ ಅಬ್ಬರಿಸುತ್ತಿದ್ದು, ಅಧಿಕಾರನೇ ಆಸೆ ಪಟ್ಟು ನನ್ನ ಇಲ್ಲಿಗೆ ಕರೆಸಿಕೊಂಡಿದೆ, ಇನ್ನು ಮುಂದೆ ಅಧಿಕಾರನೂ ನಂದೆ, ಆಜ್ಞೆನೂ ನಂದೇನೇ ಎನ್ನುತ್ತಿರುವ ‘ಒಡೆಯ’ನ ಹವಾ ಜೋರಾಗಿದೆ.

ಒಡೆಯಾ ಸಿನಿಮಾ ತಮಿಳಿನ ವೀರಂ ಸಿನಿಮಾದ ರಿಮೇಕ್. ಆದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ನಿರ್ದೇಶಕ ಎಂ ಡಿ ಶ್ರೀಧರ್ ಒಂದಿಷ್ಟು ಬದಲಾವಣೆ ಮಾಡಿಕೊಂಡಿದ್ದು, ಚಿತ್ರ ನಿಜಕ್ಕೂ ಸೂಪರ್ ಆಗಿದೆ.  ಗಜೇಂದ್ರ ಬ್ರದರ್ಸ್ ಟ್ರೇಡರ್ಸ್ ಆಂಡ್ ಟ್ರಾನ್ಸ್ ಪೋರ್ಟ್ ಮಾಲೀಕನಾಗಿ ದರ್ಶನ್.. ಅವರಿಗೆ ಐವರು ಸಹೋದರರು.

ತಮಿಳಿನ ವೀರಂನಲ್ಲಿ ಅಜಿತ್ ಮಾಡಿದ ಪಾತ್ರವನ್ನು ಕನ್ನಡ ಒಡೆಯದಲ್ಲಿ ದರ್ಶನ್ ನಟಿಸಿದ್ದು, ಪಂಜೆ ಉಟ್ಟು ಅವರು ಬರ್ತಾ ಇದ್ರೆ ನಿಜಕ್ಕೂ ಯಜಮಾನ ಬಂದನೇನೋ ಎಂಬ ಫೀಲ್ ಬರುತ್ತೆ ಎಂಬುದು ಪ್ರೇಕ್ಷಕರ ಮಾತುಗಳು.

ಪ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ.
ದರ್ಶನ್ ನಿಜ ಜೀವನದಲ್ಲೂ ನೇರ ನಡೆ, ನೇರ ನುಡಿಯ ವ್ಯಕ್ತಿ. ಕಷ್ಟ ಎಂದು ಕೈ ಚಾಚುವವರಿಗೆ ಸಹಾಯ ಮಾಡುವ ಗುಣವನ್ನು ಹೂಣಿಡವರು ಎಂಬುದು ಎಲ್ಲರಿಗೂ ಗೊತ್ತು. ಅದೇ ಕ್ಯಾರೆಕ್ಟರ್ ಒಡೆಯನ ಪಾತ್ರದಲ್ಲಿ ಪ್ರತಿಬಿಂಬಿಸಿದೆ.

Related posts