ಒಂದು ಸಿನಿಮಾವನ್ನು 11 ಬಾರಿ ನೋಡಿದ್ದ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ ನಲ್ಲೂ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ್ ಅವರ ದಬಾಂಗ್ -3 ಚಿತ್ರ ಸಕತ್ ಕ್ರೇಜ್ ಹುಟ್ಟಿಸಿದೆ. ಈ ಸಿನಿಮಾ ಮೂಲಕ ಮತ್ತೆ ಬಾಲಿವುಡ್ ಗೆ ರಿ ಎಂಟ್ರಿಯಾಗಿರುವ ಸುದೀಪ್ ತಮ್ಮ ಬದುಕಿನ ಕೆಲವೊಂದು ಅತ್ಯಮೂಲ್ಯ ಘಟನೆಗಳನ್ನು, ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ನ ಆ ಸಿನಿಮಾವೊಂದನ್ನು ತಾವು 11 ಬಾರಿ ನೋಡಿದ್ದು ಏಕೆ. ಪ್ರೀತಿ ಪ್ರೇಮದ ಆ ಸಿನಿಮಾ ನೋಡುವಾಗ, ತಮ್ಮ ಪಕ್ಕ ಯಾರಿದ್ರು? ಆ ಸಿನಿಮಾದ ಸಕ್ಸೆಸ್ ನಲ್ಲಿ ತಮ್ಮದೂ ಪಾಲಿದೆ ಅಂತ ಕಿಚ್ಚ ಹೇಳಿದ್ದು ಯಾಕೆ? ಆ ಚಿತ್ರ ತಮ್ಮ ಬದುಕಿನ ಅಮೂಲ್ಯ ಪುಟಗಳಲ್ಲಿ ಒಂದು ಅಂತ ಕಿಚ್ಚ ಹೇಳಿದ್ದು ಯಾಕೆ ಗೊತ್ತಾ?

ಒಂದು ಸಿನಿಮಾವನ್ನು ಕಿಚ್ಚ ಸುದೀಪ್ 11 ಬಾರಿ ನೋಡಿದ್ದೇನೋ ನಿಜ. ಆದರೆ ಅದು ಅವರಿಗಾಗಿ ಅಲ್ಲ ಅನ್ನೋ ಸತ್ಯವನ್ನು ಸುದೀಪ್ ರಿವೀಲ್ ಮಾಡಿದ್ದಾರೆ. ಆ ಚಿತ್ರವನ್ನು ನೋಡುವಾಗ ಬಾಲಿವುಡ್ ಆ ಹಿರೋನ ಡೈ ಹಾರ್ಟ್ ಫ್ಯಾನ್ ಪಕ್ಕದಲ್ಲೇ ಇದ್ದರಂತೆ. ಅವರಿಗಾಗಿ ಇವರು ಕೂಡ ಸಿನಿಮಾ ನೋಡಬೇಕಾಯಿತಂತೆ. ಅಷ್ಟೇ ಅಲ್ಲ ಸಿನಿಮಾ ನೋಡುತ್ತಾ ನೋಡುತ್ತಾ ಎಕ್ಲೈಟ್ ಆಗುತ್ತಿದ್ದ ಆ ಫ್ಯಾನ್, ಸುದೀಪ್ ಕೈಗೆ ಸಿಕ್ಕಾಪಟ್ಟೆ ಪಿಂಚ್ ಮಾಡಿದ್ದರಂತೆ..

ಎಸ್ ಕಿಚ್ಚ ಪಕ್ಕದಲ್ಲಿ ಕುಳಿತಿದ್ದು ಬೇರಾರು ಅಲ್ಲ, ಪತ್ನಿ ಪ್ರಿಯಾ. ಅವರಿಗೆ ಬಾಲಿವುಡ್ ಹಿರೋ ಹೃತಿಕ್ ರೋಷನ್ ಎಂದರೆ ಸಿಕ್ಕಾಪಟ್ಟೆ ಇಷ್ಟವಂತೆ. ಹೀಗಾಗಿ ಕಹೋನಾ ಪ್ಯಾರ್ ಹೈ ಸಿನಿಮಾವನ್ನು ಅವರು ಸುದೀಪ್ ಜೊತೆಗೆ 11 ಬಾರಿ ನೋಡಿದ್ದರಂತೆ. ಆ ಅನುಭವವನ್ನೆ ದಬಾಂಗ್-3 ಚಿತ್ರ ಪ್ರಮೋಷನ್ ಟೈಮ್ ಅಲ್ಲಿ ಕಿಚ್ಚ ಹಂಚಿಕೊಂಡಿದ್ದಾರೆ..

ಅಂದಹಾಗೆ ಕಹೋನಾ ಪ್ಯಾರ್ ಹೈ ಸಿನಿಮಾವನ್ನು ಸುದೀಪ್ 11 ಬಾರಿ ಅನಿವಾರ್ಯವಾಗಿ ನೋಡಿದ್ದಕ್ಕೆ ಕಾರಣವೂ ಇದೆ. ನೀನು ಬರದೆ ಇದ್ದರೇ ಬೇರೆ ಹುಡುಗನ ಕರೆದುಕೊಂಡು ಹೋಗ್ತೀನಿ ಅಂತ ಪ್ರಿಯಾ ಪತಿಗೆ ಬೆದರಿಸುತ್ತಿದ್ದ ಪತ್ನಿ ಜೊತೆ ಚಿತ್ರ ನೋಡಲು ಸುದೀಪ್ ಹೋಗುತ್ತಿದ್ದರಂತೆ..

Related posts