ಏ.30ರ ವರೆಗೆ ಲಾಕ್’ಡೌನ್.. ಕೆಲವೆಡೆ ಸೀಲ್’ಡೌನ್? ಪರಿಸರ, ಪರಿಸ್ಥಿತಿ ಹೇಗಿರುತ್ತೆ ಗೊತ್ತಾ?

ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದರೆ ಮಾತ್ರ ಸೇಫ್ ಝೋನ್ ಪುನಾರಚನೆಯಾಗುತ್ತದೆ. ಆವರೆಗೂ ಜನರು ಕಠಿಣ ಪರಿಸ್ಥಿತಿಯನ್ನು ಎದುರಿಸಲೇಬೇಕು.. ಆದರೆ ಪರಿಸರ ಹಾಗೂ ಪರಿಸ್ಥಿತಿ ಹೇಗಿರುತ್ತೆ ಎನ್ನುವುದೇ ಎಲ್ಲರ ಚಿಂತೆ

ಬೆಂಗಳೂರು: ಕೊರೋನಾ ವೈರಸ್ ಹರಡದಂತೆ ಕಠಿಣ ನಿಲುವು ತಾಳಿದರೂ ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇದೆ. ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್’ಡೌನ್ ಘೋಷಿಸಿದರೂ ನಿಯಂತ್ರಣ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಚರ್ಚೆ ಇಡೀ ದೇಶದ ಕುತೂಹಲದ ಕೇಂದ್ರ ಬಿಂದುವಾಯಿತು.
ಕರ್ನಾಟಕದಲ್ಲಿನ ಸ್ಥಿತಿಗತಿ ಕುರಿತಂತೆ ಸಿಎಂ ಅಲ್ಪ ಸಮಯದಲ್ಲಿ ಪರಿಪೂರ್ಣ ಮಾಹಿತಿ ನೀಡಿದರಲ್ಲದೆ, ರಾಜ್ಯದಲ್ಲಿ ಮುಂದೆ ಯಾವ ಹೆಜ್ಜೆ ಇಟ್ಟರೆ ಒಳಿತಾಗಬಹುದೆಂಬ ಸಲಹೆಯನ್ನೂ ನೀಡಿದರು.

ಪ್ರಧಾನಿ ಜೊತೆಗಿನ ಸಂವಾದ ಬಗ್ಗೆ ಮಾಹಿತಿ ಹಂಚಿಕೊಂಡ ಸಿಎಂ ಯಡಿಯೂರಪ್ಪ, ಏಪ್ರಿಲ್ 30ರ ವರೆಗೆ ಲಾಕ್ ವಿಸ್ತರಿಸುವುದು ಅನಿವಾರ್ಯವಾಗಿದೆ ಎಂದರು.  ಅಷ್ಟೇ ಅಲ್ಲ, ಮುಂದಿನ 2 ವಾರಗಳ ಕಾಲ ಲಾಕ್’ಡೌನ್ ಹೇಗಿರಬಹುದು ಎಂಬ ಸುಳಿವನ್ನೂ ಅವರು ನೀಡಿದರು. ಮುಂದಿನ ದಿನಗಳಲ್ಲಿ ಲಾಕ್’ಡೌನ್ ವಿಭಿನ್ನವಾಗಿರಲಿದ್ದು, ಎರಡ್ಮೂರು ದಿನದಲ್ಲಿ ಮಾರ್ಗಸೂಚಿ ಬಿಡುಗಡೆಯಾಗಲಿದೆ. ಕೇಂದ್ರ ಸರ್ಕಾರ ಸೂಚಿಸಿದ ರೀತಿಯಲ್ಲೇ ಲಾಕ್ ಡೌನ್ ಜಾರಿಗೆ ಬರಲಿದೆ ಎಂದರು.

ಈ ನಡುವೆ, ಮುಂದೆ ಲಾಕ್’ಡೌನ್ ವಿಸ್ತರಣೆ ವೇಳೆ ಪರಿಸ್ಥಿತಿ ಕೇಂದ್ರದ ಹಿಡಿತದಲ್ಲಿರಲಿದೆಯೇ ಸಂಶಯ ಇದೀಗ ಕಾದಿದೆ. ಅಷ್ಟೇ ಅಲ್ಲ ಲಾಕ್ ಡೌನ್ ಜೊತೆಗೆ ಕೊರೋನಾ ಹಾತ್ ಸ್ಪಾಟ್ ಹಾಗೂ ರೆಡ್ ಝೋನ್’ಗಳಲ್ಲಿ ಸೀಲ್’ಡೌನ್ ಸಾಧ್ಯತೆಗಳೂ ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

  • ಜನ ಮನೆ ಬಿಟ್ಟು ಹೊರ ಹೋಗುವಂತಿಲ್ಲ
  • ಅಗತ್ಯ ವಸ್ತುಗಳು ಮನೆಗೆ ಬರಲಿದೆ
  • ಎಲ್ಲಾ ರಸ್ತೆಗಳು ಬಂದ್
  • ಪೊಲೀಸ್ ಕಣ್ಗಾವಲಲ್ಲಿ ಒಂದೆರಡು ಕಡೆ ದಾರಿ
  • ಈಗಿರುವ ಪಾಸ್’ಗಳು ಅನೂರ್ಜಿತವಾಗುತ್ತವೆ
  • ಅಗತ್ಯ ಸೇವೆಗಳಿಗೆ ಹೊಸ ಪಾಸ್’ಗಳನ್ನು ಪಡೆಯಬೇಕಾಗುತ್ತದೆ
  • ನಿಯಮ ಉಲ್ಲಂಘಿಸಿ ರಸ್ತೆಗಿಳಿದರೆ ಕೇಸ್ ಖಚಿತ ಖಚಿತ
  • ಜಟಾಪಟಿಗಿಳಿದರೆ ಬಂಧನ ಸಾಧ್ಯತೆ

ಹಾಗಾಗಿ, ಸೀಲ್ ಡೌನ್ ಜಾರಿಗೆ ಬಂದರೆ ಜನ ಮತ್ತಷ್ಟು ದಿಗ್ಬಂಧನಕ್ಕೆ ಒಳಗಾಗಬೇಕಾಗುತ್ತದೆ.

Related posts