ಬೆಚ್ಚಿ ಬೀಳಿಸಿದ ವಿದ್ಯಮಾನ; ರಾಜ್ಯದಲ್ಲಿ ಒಂದೇ ದಿನ 116 ಕೇಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕುರಿತ ವರದಿಗಳು ಜನರನ್ನು ಬೆಚ್ಚಿ ಬೀಳಿಸುವಂತಿದೆ. ಇದೀಗ ಮತ್ತೆ ಒಂದೇ ದಿನ ನೂರರ ಗಡಿ ದಾಟಿದ ಸಂಖ್ಯೆಗೆ ಗುರವಾರದ ಹೆಲ್ತ್ ಬುಲೆಟಿನ್ ಸಾಕ್ಷಿಯಾಯಿತು.

ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದ ವಿದ್ಯಮಾನಗಳನ್ನು ಉಲ್ಲೇಖಿಸಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ಒಂದೇ ದಿನದಲ್ಲಿ 116 ಸೋಂಕು ಪ್ರಕರಣಗಳು ದೃಢಪಟ್ಟಿರುವ ಕಳವಳಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲೇ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದೆ.

 • ಉಡುಪಿ – 27 ಹೊಸ ಕೇಸ್
 • ಹಾಸನ – 19 ಹೊಸ ಕೇಸ್
 • ಮಂಡ್ಯ- 14 ಹೊಸ ಕೇಸ್
 • ಉತ್ತರ ಕನ್ನಡ – 9 ಹೊಸ ಕೇಸ್
 • ಬಳ್ಳಾರಿ – 7 ಹೊಸ ಕೇಸ್
 • ಬೆಂಗಳೂರು ನಗರ – 7 ಹೊಸ ಕೇಸ್
 • ದಕ್ಷಿಣ ಕನ್ನಡ – 5 ಹೊಸ ಕೇಸ್
 • ಶಿವಮೊಗ್ಗ – 6 ಹೊಸ ಕೇಸ್
 • ಬೆಳಗಾವಿ – 6 ಹೊಸ ಕೇಸ್
 • ಧಾರವಾಡ – 5 ಹೊಸ ಕೇಸ್
 • ದಾವಣಗೆರೆ – 3 ಹೊಸ ಕೇಸ್
 • ಚಿಕ್ಕಬಳ್ಳಾಪುರ – 2 ಹೊಸ ಕೇಸ್ 
 • ಬೆಳಗಾವಿ – 2 ಹೊಸ ಕೇಸ್
 • ಗದಗ – 2 ಹೊಸ ಕೇಸ್
 • ವಿಜಯಪುರ -1 ಹೊಸ ಕೇಸ್
 • ಮೈಸೂರು – 1 ಹೊಸ ಕೇಸ್
 • ತುಮಕೂರು – 1 ಹೊಸ ಕೇಸ್

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1578 ಕ್ಕೆ ಏರಿಕೆಯಾಗಿದೆ. ಈ ಪಟ್ಟಿಗೆ ಇಂದು ಸೇರ್ಪಡೆಯಾದ ಸೋಂಕಿತರ ಪೈಕಿ ಬಹುತೇಕ ಮಂದಿ ಮುಂಬೈ ಪ್ರಯಾಣ ಹಿಸ್ಟರಿ ಉಳ್ಳವರು ಹಾಗೂ ದುಬೈಯಿಂದ ಆಗಮಿಸಿದವರು ಎನ್ನಲಾಗುತ್ತಿದೆ.

 

Related posts