ಕಡಲತಡಿಯಲ್ಲಿ ಒಂದೇ ದಿನ ಬರೋಬ್ಬರಿ 41 ಕೇಸ್; ಕರಾವಳಿ ಜನ ಎಷ್ಟು ಸೇಫ್?

ಮಂಗಳೂರು: ರಾಜ್ಯದಲ್ಲಿ ಕೊರೋನಾ ಮರಣ ಮೃದಂಗ ಭಾರಿಸುತ್ತಲೇ ಇದ್ದು ಮತ್ತೆ ಒಂದೇ ದಿನ ಸೋಂಕಿತರ ನೂರರ ಗಡಿ ದಾಟಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಬಹುಪಾಲು ಸೋಂಕಿತರ ಲೆಕ್ಕ ಕೇಂದ್ರೀಕೃತವಾಗಿರುವುದು ಆತಂಕಕಾರಿ ಸಂಗತಿ.
ಬುಧವಾರ ಸಂಜೆಯಿಂದ ಗುರುವಾರ ಮಧ್ಯಾಹ್ನದ ವಿದ್ಯಮಾನಗಳನ್ನು ಉಲ್ಲೇಖಿಸಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ ಒಂದೇ ದಿನದಲ್ಲಿ 116 ಸೋಂಕು ಪ್ರಕರಣಗಳು ಪತ್ತೆಯಾಗಿರುವುದನ್ನು ಉಲ್ಲೇಖಿಸಿದ್ದರೆ, ಇದರಲ್ಲಿ ಕರಾವಳಿಯ ಕೇಸ್’ಗಳು 41.

  • ಉಡುಪಿ – 27 ಹೊಸ ಕೇಸ್ 
  • ಉತ್ತರ ಕನ್ನಡ – 9 ಹೊಸ ಕೇಸ್
  • ದಕ್ಷಿಣ ಕನ್ನಡ – 5 ಹೊಸ ಕೇಸ್  

ಒಂದೇ ದಿನ ಇಷ್ಟೊಂದು ಸೋಂಕಿನ ಪ್ರಕರಣಗಳಿಗೆ ಮುಂಬೈ ಟ್ರಾವೆಲ್ ಹಿಸ್ಟರಿಯುಳ್ಳವರು ಹಾಗೂ ಗಲ್ಫ್ ರಾಷ್ಟ್ರಗಳಿಂದ ಬಂದವರು ಕಾರಣ ಎನ್ನಲಾಗಿದೆ.

ಈ ನಡುವೆ ದಕ್ಷಿಣಕನ್ನಡದ ಬಂಟ್ವಾಳ ಹಾಗೂ ಉಡುಪಿ ಜಿಲ್ಲೆ ಹೆಬ್ರಿಯಲ್ಲಿನ ಕಂಟೈನ್ಮೆಂಟ್ ಪ್ರದೇಶದಲ್ಲಿ ಗೊಂದಲದ ಸನ್ನಿವೇಶ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಬಹುತೇಕ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು ಜನರ ಅಸಮಾಧಾನ ತಣಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ.. ರಾಜ್ಯದ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ ವಿದ್ಯಮಾನ

 

Related posts