ಲಾಕ್’ಡೌನ್ ಟೈಮ್.. ನಗಿಸಲು ನಿಮ್ಮ ಮನೆಗೆ ಬರಲಿದ್ದಾರೆ ‘ಪಮ್ಮಣ್ಣೆ’

ಬೆಂಗಳೂರು: ಕೊರೋನಾ ಸಂಕಟಕಾಲದಲ್ಲಿ ಸಮಯ ಹೋಗುವುದೇ ಇಲ್ಲ. ಎಲ್ಲೆಲ್ಲೂ ಲಾಕ್’ಡೌನ್ ಜಾರಿಯಲ್ಲಿರುವುದರಿಂದ ಸುತ್ತಾಡಿ ಬರೋಣ ಎಂದರೂ ಅವಕಾಶವಿಲ್ಲ. ಮನೆಯಲ್ಲೇ ಇದ್ದು ಬೋರು ಅನಿಸುತ್ತಿರುವವರಿಗೆ ತುಳು ಚಿತ್ರೋದ್ಯಮದಿಂದ ಖುಷಿಯ ಸುದ್ದಿಯೊಂದು ಕೇಳಿಬಂದಿದೆ.

App ಡೌನ್’ಲೋಡ್ ಮಾಡಲು ಈ ಇಮೇಜ್ ಕ್ಲಿಕ್ ಮಾಡಿ

ಕೋಸ್ಟಲ್’ವುಡ್’ನ ಹಾಸ್ಯಮಯ ಸಿನಿಮಾ ‘ಪಮ್ಮಣ್ಣೆ ದಿ ಗ್ರೇಟ್’ ತುಳು ಸಿನಿಮಾ ನಿಮ್ಮ ಬಳಿ ಬರಲಿದೆ. ಈ ಹೊಸ ಸಿನಿಮಾ ತುಳು ಚಿತ್ರೋದ್ಯಮದಲ್ಲಿ ಸಿನಿ ರಸಿಕರ ಮನತಣಿಸಿದ ಸಿನಿಮಾ. ಈ ಸಿನಿಮಾವು ಅಬ್ಬರದ ಪ್ರಚಾರದಿಂದಲೂ ಎಲ್ಲರ ಗಮನ ಸೆಳೆದಿತ್ತು. ಪತ್ರಕರ್ತ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಈ ಸಿನಿಮಾ ಶುಕ್ರವಾರದಿಂದ ‘ಟಾಕೀಸ್’ App’ನಲ್ಲಿ ಸಿಗಲಿದೆ.

ಸಿನಿ ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಹಾಸ್ಯ ನಟನಾಗಿ ಮನೆಮಾತಾಗಿರುವ ಅರವಿಂದ್ ಬೋಳಾರ್ ನಟಿಸಿರುವ ‘ಪಮ್ಮಣ್ಣೆ ದಿ ಗ್ರೇಟ್’ ಚಿತ್ರದಲ್ಲಿ ತುಳು ಹಾಗೂ ಕನ್ನಡ ಚಿತ್ರರಂಗದ ಹಲವು ನಟರು ಅಭಿನಯಿಸಿದ್ದಾರೆ.

 

ಇಬ್ಬರು ಗೆಳತಿಯರ ನಡುವೆ ಭೋಜರಾಜ್ ಬ್ಯುಸಿ; ರಿವೀಲ್ ಆಗದ ಸಂಗತಿ ನಿಮಗೆ ಗೊತ್ತಾ?

 

Related posts