ಭಾರೀ ಮಳೆ; ಕುಸಿದ ನೂತನ ಸತ್ತರ್​ಘಾಟ್ ಸೇತುವೆ

ದೆಹಲಿ; ಸುಮಾರು 8 ವರ್ಷಗಳಿಂದ 263.47 ಕೋಟಿ ವೆಚ್ಚದಲ್ಲಿ ಕಟ್ಟಲಾಗಿದ್ದ ಸತ್ತರ್​ಘಾಟ್ ಬ್ರಿಡ್ಜ್. ಒಂದೇ ದಿನದ ಮಾಯೆಯಲ್ಲಿ ಛಿದ್ರ.
ಬಿಹಾರದಲ್ಲಿ ಗೋಪಾಲ್​ಗಂಜ್ ಮತ್ತು ಈಸ್ಟ್ ಚಂಪರನ್ ಭಾಗಗಳಿಗೆ ಕೊಂಡಿಯಾಗಿದ್ದ 1.4 ಕಿಮೀ ಉದ್ದದ ಸೇತುವೆಯ ಒಂದು ಭಾಗ ಭಾರೀ ಮಳೆಯಿಂದಾಗಿ ಕುಸಿದುಬಿದ್ದಿದೆ.

ಗಂಡಕ ನದಿಯ ಮೇಲೆ ಕಟ್ಟಲಾಗಿರುವ ಈ ಸೇತುವೆ ಜೂನ್ 16ರಂದು ಉದ್ಘಾಟನೆಯಾಗಿತ್ತು. ಈ ಸೇತುವೆ ಭಾರೀ ಮಳೆಯಿಂದಾಗಿ ಈ ಸೇತುವೆ ಬುಧವಾರ ಕುಸಿದಿದೆ.

ಬಿಹಾರದಲ್ಲಿ ವ್ಯಾಪಕ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ. ಗಂಡಕ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

Related posts