ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ದಂದರ್ಭದಲ್ಲೇ ಅವರ ಅಭಿನಯದ ಬಹು ನಿರೀಕ್ಷೆಯ ‘ರಾಬರ್ಟ್’ ಚಿತ್ರದ ಟೀಸರನ್ನು ಬಿಡುಗಡೆ ಮಾಡಲಾಯಿತು.
ಕನ್ನಡ ಸಿನಿ ಲೋಕದ ಯಜಮಾನ, ದರ್ಶನ್ ಅವರ ಹುಟ್ಟುಹಬ್ಬ ಅದ್ದೂರಿಯಾಗಿ ನೆರವೇರಿತು. ‘ಡಿ’ ಬಾಸ್ ದರ್ಶನ್ ತೂಗುದೀಪ ಅವರಿಗೆ ಶುಭಾಶಯಗಳ ಹೂಮಳೆಯಾಯಿತು.
ಹುಟ್ಟು ಹಬ್ಬದ ದಿನದಂದೇ ಬಿಡುಗಡೆಯಾದ 1.11 ನಿಮಿಷದ ಈ ಟೀಸರ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡಲಾರಂಭಿಸಿದೆ. ‘ರಾಬರ್ಟ್’ ಚಿತ್ರ ಪಕ್ಕಾ ದರ್ಶನ್ ಆಭಿಮಾನಿಗಳಿಗಾಗಿ ತಯಾರಾಗುತ್ತಿರುವ ಆ್ಯಕ್ಷನ್ ಚಿತ್ರವಾಗಿದೆ ಎಂದು ಚಿತ್ರ ತಂಡ ಹೇಳಿದೆ.