ನ್ಯೂಯಾರ್ಕ್: ಕಂಪ್ಯೂಟರ್ ವಿಜ್ಞಾನಿ ಲ್ಯಾರಿ ಟೆಸ್ಲರ್ ಇನ್ನಿಲ್ಲ. ೭೪ ವರ್ಷ ಪ್ರಾಯದ ಲ್ಯಾರಿ ಟೆಸ್ಲರ್ ವಿಧಿವಶರಾಗಿದ್ದಾರೆ. ಇಂದಿನ ಕಂಪ್ಯೂಟರ್ ಯುಗಕ್ಕೆ ದಶಕಗಳ ಹಿಂದೆಯೇ ಕಟ್ ಅಂಡ್ ಪೇಸ್ಟ್ ಸೂತ್ರವನ್ನು ಹರಿಯಬಿಟ್ಟಿದ್ದ ತಜ್ಞ ಲ್ಯಾರಿ ಟೆಸ್ಲರ್, ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಕ್ಸೆರಾಕ್ಸ್ ಪಾಲೋ ಆಲ್ಟೋ ರಿಸರ್ಚ್ ಸೆಂಟರ್ ನಳ್ಳಿ ನಿರಂತರ ಸಂಶೋಧನೆ ನಡೆಸಿದ್ದ ಲ್ಯಾರಿ ಟೆಸ್ಲರ್ ಅವರು ಸಂಶೋಧಿಸಿ, ನೀಡಿದ ಕಟ್, ಕಾಪಿ ಮತ್ತು ಪೇಸ್ಟ್ ಕಾನ್ಸೆಪ್ಟ್ ಇಂದಿನ ಡಿಜಿಟಲ್ ಯುಗದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಎಂದೇ ಹೇಳಲಾಗುತ್ತಿದೆ.
ಇದೀಗ ಈ ಜಗತ್ತು ಈ ಮಹಾನ್ ತಜ್ಞನನ್ನು ಕಳೆದುಕೊಂಡಿದೆ