ಕೀವ್: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ 29 ಮಂದಿ ಮೃತಪಟ್ಟಿದ್ದು, 73 ಜನರು ಗಾಯಗೊಂಡಿದ್ದಾರೆ. ಖಾರ್ಕಿವ್ನ ಆಸ್ಪತ್ರೆಯ ಮೇಲೂ ದಾಳಿ ನಡೆದಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹೃದ್ರೋಗ ವಿಭಾಗಕ್ಕೆ ಹಾನಿಯಾಗಿದೆ.

ರಷ್ಯಾದ ದಾಳಿಗಳನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ. ಮುಂಬರುವ ಶಾಂತಿ ಮಾತುಕತೆಗೂ ಮುನ್ನ ದಾಳಿಗಳ ತೀವ್ರತೆ ಹೆಚ್ಚಿರುವುದನ್ನು ಅವರು ಕಳವಳದಿಂದ ಪ್ರಸ್ತಾಪಿಸಿದ್ದಾರೆ. ರಷ್ಯಾದ ಬೃಹತ್ ದಾಳಿಯನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

