ಬೆಂಗಳೂರು: ಕೋಮಲ್ ಕುಮಾರ್, ಮೇಘನಾ ರಾಜ್, ಅನುಷಾ ರೈ ಮತ್ತು ಸಂದೇಶ್ ಶೆಟ್ಟಿ ಅಜ್ರಿ ಅಭಿನಯದ ಕನ್ನಡ ಚಿತ್ರ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ನ ಅಧಿಕೃತ ಟೀಸರ್ ಬಿಡುಗಡೆಯಾಗಿದೆ.
ತಸ್ಮಯ್ ಪ್ರೊಡಕ್ಷನ್ಸ್ ಅರ್ಪಿಸುವ ಈ ಚಿತ್ರಕ್ಕೆ ಸಂದೇಶ್ ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಕಾಸ್ ಎಸ್. ಶೆಟ್ಟಿ ನಿರ್ಮಾಪಕರಾಗಿದ್ದಾರೆ. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಮುರಳಿಧರ್ ಎನ್. ಛಾಯಾಗ್ರಹಣ, ಶಿವರಾಜ್ ಮೆಹು ಸಂಕಲನ ಹಾಗೂ ಪ್ರಾಂಶು ಝಾ ಸಂಗೀತ ಸಂಯೋಜನೆಯ ಜವಾಬ್ದಾರಿ ನಿರ್ವಹಿಸಿದ್ದಾರೆ. ಮಧು ನೃತ್ಯ ನಿರ್ದೇಶನ ಹಾಗೂ ಪ್ರಮೋದ್ ಶಂಕರನಾರಾಯಣ ಕಲಾ ನಿರ್ದೇಶನ ಮಾಡಿದ್ದಾರೆ. ಸಾಹಸ ದೃಶ್ಯಗಳಿಗೆ ಅಶ್ರಫ್ ಗುರುಕ್ಕಲ್ ಮತ್ತು ಥ್ರಿಲ್ಲರ್ ಮಂಜು ನಿರ್ದೇಶನ ನೀಡಿದ್ದಾರೆ.
ಟೀಸರ್ ಚಿತ್ರದ ಪಾತ್ರಗಳು ಮತ್ತು ಕಥಾ ಲೋಕದ ಮೊದಲ ನೋಟವನ್ನು ಪರಿಚಯಿಸಿದೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಇನ್ನೂ ಪ್ರಕಟಿಸಿಲ್ಲ.

