ಸೇಡಂನಲ್ಲಿ ಗ್ರಾಮಸ್ವರಾಜ್ಯ ಸಮಾವೇಶ; ಬಿಜೆಪಿ ನಾಯಕರ ರೋಡ್ ಶೋ

ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ಇಂದು ಕಲ್ಬುರ್ಗಿ ಜಿಲ್ಲೆಯ ಸೇಡಂ ನಲ್ಲಿ ಪಕ್ಷ ಆಯೋಜಿಸಿರುವ ಗ್ರಾಮಸ್ವರಾಜ್ಯ ಸಮಾವೇಶದ 5ನೇ ದಿನದ 10ನೇ ಸಮಾವೇಶದಲ್ಲಿ ಭಾಗವಹಿಸಿ ರೋಡ್ ಶೋ ನಡೆಸಿದರು.ತರುವಾಯ ಕಾರ್ಯಕರ್ತರ ಸಭೆಯ ಉದ್ಘಾಟನೆ ನೆರವೇರಿಸಿದರು.

ಈ ಸಭೆಯಲ್ಲಿ ಮಾನ್ಯ ಸಚಿವರಾದ ವಿ ಸೋಮಣ್ಣ ಸಂಸದರಾದ ಉಮೇಶ್ ಜಾದವ್, ಭಗವಂತ ಖೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕುರ್, ದತ್ತಾತ್ರೇಯ ಪಾಟೀಲ್, ರಾಜುಗೌಡ, ಸುಭಾಷ್ ಗುತ್ತೇದಾರ ಸುನಿಲ್ ವಲ್ಯಾಪುರೆ, ಬಸವರಾಜ್ ಮತ್ತಿಮೂಡ ಹಾಗೂ ವಿಧಾನಪರಿಷತ್ ಸದಸ್ಯರಾದ ಡಿ ಜಿ ಪಾಟೀಲ್, ಮಾಜಿ ಶಾಸಕರಾದ ಅಶ್ವತ್ಥನಾರಾಯಣ ಕಲ್ಬುರ್ಗಿ ನಗರ ಮತ್ತು ಗ್ರಾಮೀಣ ಜಿಲ್ಲೆಯ ಬಿಜೆಪಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts